More

    ರಷ್ಯಾ ಅಧ್ಯಕ್ಷ ಪುಟಿನ್​​​ ಆರೋಗ್ಯ ಮತ್ತಷ್ಟು ಕ್ಷೀಣ: ಇನ್ನು ಕೆಲವೇ ವರ್ಷ ಬದುಕುತ್ತಾರೆ ಎಂದಿರುವ ವೈದ್ಯರು?

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆರೋಗ್ಯ ಕುರಿತು ಇತ್ತೀಚೆಗೆ ವರದಿಯೊಂದು ಭಾರೀ ಸದ್ದು ಮಾಡಿತ್ತು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವರದಿ ಬಹಿರಂಗವಾಗಿದೆ. ಇದರಿಂದ ಪುಟಿನ್​​ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ ಎನ್ನಲಾಗಿದೆ.

    ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ರಷ್ಯಾದ ಬೇಹುಗಾರಿಗೆ ಸಂಸ್ಥೆ ಎಫ್​​ಎಸ್​​ಬಿ ನೀಡಿರುವ ವರದಿಯಲ್ಲಿ ಹೇಳಲಾಗಿದೆ.ಅಲ್ಲದೇ ಪುಟಿನ್​ ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವರು ಇನ್ನೂ ಹೆಚ್ಚೆಂದರೆ 3 ವರ್ಷ ಬದುಕಬಹುದು ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

    69 ವರ್ಷದ ವ್ಲಾಡಿಮಿರ್​ ಪುಟಿನ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಅಷ್ಟಾಗಿ ಕಾಣಿಸುತ್ತಿಲ್ಲ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಯೂಕ್ರೇನ್​ -ರಷ್ಯಾ ಯುದ್ಧ ನಡೆಯುತ್ತಿದ್ದರೂ, ಆರಂಭದಲ್ಲಿ ಕಾಣಿಸಿಕೊಂಡ ಬಳಿಕ ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.ರಷ್ಯಾದ ವಾಹಿನಿಯೊಂದರಲ್ಲಿ ಪುಟಿನ್​ ಆರೋಗ್ಯ ಕ್ಷೀನದ ಮಾಹಿತಿ ಹೊರಗೆ ಬಂದಿದ್ದು, ಇದೇ ತಿಂಗಳಲ್ಲಿ ಕ್ಯಾನ್ಸರ್​ ಸರ್ಜರಿಗೂ ಒಳಗಾಗಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
    (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts