More

    ಗ್ರಾಮೀಣ ಕ್ರೀಡೆ ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ

    ಮಡಿಕೇರಿ: ಮುಂದಿನ ಪೀಳಿಗೆಗಾಗಿ ಗ್ರಾಮೀಣ ಭಾಗದ ಲಗೋರಿ ಕ್ರೀಡೆಯನ್ನು ಈಗಿನ ಪೀಳಿಗೆಯವರು ಪರಿಚಯಿಸುವ ಮೂಲಕ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಆಲೂರು ಸಿದ್ದಾಪುರದ ಸೈನಿಕ ವೈ.ಜೆ.ರೂಪೇಶ್ ಅಭಿಪ್ರಾಯ ಪಟ್ಟರು.


    ಶನಿವಾರಸಂತೆ ಆಲೂರು-ಸಿದ್ದಾಪುರ ಸಾಯಿ ಎಜುಕೇಷನ್ ಟ್ರಸ್ಟ್‌ನ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಆಟದ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಅಂತರ ಶಾಲಾ ಮಟ್ಟದ ಲಗೋರಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.


    ಈಗಿನ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಇಲ್ಲದಿರುವ ನಿಟ್ಟಿನಲ್ಲಿ ಹಿಂದೆ ಗ್ರಾಮೀಣ ಭಾಗದಲ್ಲಿ ಎಲ್ಲರೂ ಆಡುತ್ತಿದ್ದ ಲಗೋರಿಯಂತಹ ಕ್ರೀಡೆಯನ್ನು ಈಗಿನ ಮಕ್ಕಳಿಗೆ ಪರಿಚಯಿಸುವು ದರಿಂದ ಮುಂದಿನ ಪೀಳಿಗೆಗೆ ಲಗೋರಿಯು ಉತ್ತಮ ಗ್ರಾಮೀಣ ಕ್ರೀಡೆಯಾಗುತ್ತದೆ. ಗ್ರಾಮೀಣ ಸೊಗಡು, ಸಂಸ್ಕೃತಿಯಂತೆ ಲಗೋರಿ ವಿಶಿಷ್ಟವಾಗಿದ್ದು ಈ ನಿಟ್ಟಿನಲ್ಲಿ ಜಾನಕಿ ಕಾಳಪ್ಪ ಶಾಲೆ ವತಿಯಿಂದ ಲಗೋರಿ ಕ್ರೀಡೆಯನ್ನು ಅಂತರ ಶಾಲಾ ಮಟ್ಟದಲ್ಲಿ ಹಮ್ಮಿಕೊಂಡು ಒತ್ತು ಕೊಡುತ್ತಿರುವ ಶಾಲೆಯ ಟ್ರಸ್ಟಿ ಶಿವಪ್ರಕಾಶ್ ಅವರ ಚಿಂತನೆ ಶ್ಲಾಘನಿಯ ಎಂದರು.


    ಅಧ್ಯಕ್ಷತೆ ವಹಿಸಿದ್ದ ಜಾನಕಿ ಕಾಳಪ್ಪ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಕೆ.ಶಿವಪ್ರಕಾಶ್ ಮಾತನಾಡಿದರು. ಪಾಲಕರ ಸಮಿತಿ ಪ್ರಮುಖ ರಾದ ಸಿ.ಎಂ.ಹೇಮಂತ್, ಪ್ರವೀಣ್, ಸುಚೀಂದ್ರ, ತೇಜಸ್ವಿ, ವಸಂತ್, ಶಾಲಾ ಮುಖ್ಯ ಶಿಕ್ಷಕಿ ಸರಿತಾ ಶಿವಪ್ರಕಾಶ್, ಗ್ರಾಪಂ ಸದಸ್ಯ ಮಲ್ಲಪ್ಪ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸಹನಾ, ಅಂಕನಹಳ್ಳಿ ಶಾಲಾ ಶಿಕ್ಷಕರಾದ ಮೇರಿ, ವಿಜಯಲಕ್ಷ್ಮೀ ಇದ್ದರು.

    ಲಗೋರಿ ಪಂದ್ಯಾದಲ್ಲಿ ವಿವಿಧ ಶಾಲೆಗಳಿಂದ 10 ತಂಡಗಳು ಭಾಗವಹಿಸಿದ್ದ ವು. ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಮಾಜಿ ಸೈನಿಕ ಸುಚೀಂದ್ರ ಪಂದ್ಯಾವಳಿ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts