More

    ಸಂಸತ್ತಿನ ವೆಬ್‌ಸೈಟ್ ಪ್ರವೇಶ ನಿಯಮ ಬದಲಾವಣೆ

    ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿವಾದದ ಹಿನ್ನೆಲೆಯಲ್ಲಿ ಲೋಕಸಭೆ ಸಚಿವಾಲಯವು ಸಂಸತ್ತಿನ ವೆಬ್‌ಸೈಟ್ ಪ್ರವೇಶಿಸುವ ನಿಯಮಗಳನ್ನು ಬದಲಾಯಿಸಿದೆ.

    ಹೊಸ ನಿಯಮಗಳ ಪ್ರಕಾರ, ವೈಯಕ್ತಿಕ ಸಿಬ್ಬಂದಿ ಅಥವಾ ಯಾವುದೇ ಮೂರನೇ ವ್ಯಕ್ತಿ ಡಿಜಿಟಲ್ ಸಂಸದ ವೆಬ್‌ಸೈಟ್ ಪ್ರವೇಶಿಸಲು ಸಾಧ್ಯವಿಲ್ಲ. ಅಲ್ಲದೆ, ಸಂಸದರ ಪರವಾಗಿ ನೋಟಿಸ್‌ಗಳನ್ನು ನೀಡಲು ಅಥವಾ ಪ್ರಶ್ನೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಸಂಸದರು ಮಾತ್ರ ತಮ್ಮ ವೈಯಕ್ತಿಕ ಲಾಗಿನ್ ವಿವರಗಳನ್ನು ಬಳಸಿಕೊಂಡು ಸೈಟ್ ಬಳಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಸಂಸದರ ನೋಂದಾಯಿತ ಮೊಬೈಲ್ ಫೋನ್‌ಗಳಲ್ಲಿ OTP (ಒನ್-ಟೈಮ್ ಪಾಸ್‌ವರ್ಡ್) ಬರುತ್ತದೆ. ಅವರು ಕೋಡ್ ನಮೂದಿಸಿದ ನಂತರ ಮಾತ್ರ ಸೈಟ್ ಪ್ರವೇಶಿಸಲು ಸಾಧ್ಯವಾಗುತ್ತದೆ.

    ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಮಹುವಾ ಮೊಯಿತ್ರಾ ಅವರು ಲಂಚ ಪಡೆದಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು. ಕಾಸಿಗಾಗಿ ಪ್ರಶ್ನೆಯ ಈ ಪ್ರಕರಣದಲ್ಲಿ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುವ ಕುರಿತ ವರದಿಯನ್ನು ಈ ತಿಂಗಳ ಆರಂಭದಲ್ಲಿ ಲೋಕಸಭೆ ನೈತಿಕ ಸಮಿತಿಯು ಅಂಗೀಕರಿಸಿತ್ತು. ಆಕೆಯ ವಿರುದ್ಧದ ಆರೋಪ ಕುರಿತ ವರದಿಯನ್ನು ನೈತಿಕ ಸಮಿತಿಯ ಆರು ಸದಸ್ಯರು ಬೆಂಬಲಿಸಿದರೆ, ನಾಲ್ವರು ಸದಸ್ಯರು ಅದನ್ನು ವಿರೋಧಿಸಿದ್ದರು. ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಸತ್ತಿನ ವೆಬ್​ಸೈಟ್​ ಪ್ರವೇಶ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.

    ಒಪ್ಪಿಕೊಂಡಿದ್ದ ಮಹುವಾ:
    ದರ್ಶನ್ ಹೀರಾನಂದನಿಗೆ ಅವರ ಕಚೇರಿಯಲ್ಲಿ ಯಾರಾದರೂ ಲೋಕಸಭೆಯಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಟೈಪ್ ಮಾಡಲು ಅನುವಾಗುವಂತೆ ತಮ್ಮ ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ್ದಾಗಿ ಎಂದು ಮಹುವಾ ಮೊಯಿತ್ರಾ ಒಪ್ಪಿಕೊಂಡಿದ್ದರು. “ನಾನು ಸಂಸತ್ತಿನ ವೆಬ್‌ಸೈಟ್‌ನಲ್ಲಿ ನೀಡಿದ ಪ್ರಶ್ನೆಯನ್ನು ದರ್ಶನ್ ಹಿರಾನಂದನಿ ಅವರ ಕಚೇರಿಯಲ್ಲಿ ಯಾರೋ ಟೈಪ್ ಮಾಡಿದ್ದಾರೆ, ಪ್ರಶ್ನೆಯನ್ನು ಹಾಕಿದ ನಂತರ, ಅವರು ನನಗೆ ತಿಳಿಸಲು ಕರೆ ಮಾಡುತ್ತಾರೆ. ನಾನು ಯಾವಾಗಲೂ ನನ್ನ ಕಾರ್ಯದಲ್ಲಿ ನಿರತರಾದ ಕಾರಣ ಎಲ್ಲಾ ಪ್ರಶ್ನೆಗಳನ್ನು ಒಂದೇ ಬಾರಿಗೆ ಓದುತ್ತೇನೆ. ನಂತರ ಮಾತ್ರ ಪ್ರಶ್ನೆಯನ್ನು ಸಲ್ಲಿಸಲಾಗುತ್ತದೆ ಎಂದು ಮೊಯಿತ್ರಾ ಹೇಳಿದ್ದರು.

    ಪಿಯುಸಿಯಲ್ಲಿ ಬಯಲಾಜಿ ಇಲ್ಲದಿದ್ದರೂ ನೀಟ್​ ಬರೆಯಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts