More

    ವಿಶ್ವದ ಆಗುಹೋಗುಗಳಿಗೆ ಭಾರತ ತೆರೆದುಕೊಳ್ಳಬೇಕು: ವಿ. ನಾಗರಾಜ್

    ಬೆಂಗಳೂರು: ಇಂದಿನ ಸನ್ನಿವೇಶದಲ್ಲಿ ಜಗತ್ತಿನಿಂದ ಭಾರತ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ವಿಶ್ವದ ವಿದ್ಯಮಾನಗಳೊಂದಿಗೆ ಅನುಗುಣವಾಗಿ ವರ್ತಿಸಬೇಕಾಗುತ್ತದೆ ಎಂದು ಆರೆಸ್ಸೆಸ್‌ನ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಹೇಳಿದರು. ಕೆಂಪೇಗೌಡ ನಗರದ ಕೇಶವ ಶಿಲ್ಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಾದ ವರ್ಲ್ಡ್ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿ ಮಾತನಾಡಿದರು.

    ವಿಶ್ವದ ವಿದ್ಯಮಾನಗಳಿಂದ ಭಾರತ ದೂರಾಗಿದ್ದರಿಂದ ಪತನವಾಯಿತು. ಇತರೆ ದೇಶಗಳ ಬೆಳವಣಿಗೆಗಳ ಮಾಹಿತಿ ಹೊಂದಿರಬೇಕು. ಆ ಮೂಲಕ ನಿರಂತರ ಜಾಗೃತರಾಗಿರುವುದೊಂದೇ ನಾವು ನೀಡುವ ಅತಿ ದೊಡ್ಡ ಕೊಡುಗೆ. ಮಾಹಿತಿ ಎಂಬುದೂ ಶಕ್ತಿಯಾಗಿರುವ ಇಂದಿನ ಜಗತ್ತಿನಲ್ಲಿ, ಭಾರತದ ದೃಷ್ಟಿಕೋನದಿಂದ ವೈಶ್ವಿಕ ಬೆಳವಣಿಗೆಗಳನ್ನು ನೋಡುವ ಪ್ರಯತ್ನವಾಗಬೇಕು.

    ಜಾಗತೀಕರಣದಿಂದ ನಾವು ಸೋತಿದ್ದೇವೆ. ನಾವು ನಮ್ಮ ಸುತ್ತಲಿನ ಜಗತ್ತನ್ನು ನೋಡುತ್ತಾ, ಅಲ್ಲಿನ ಆಗುಹೋಗುಗಳನ್ನು ಗಮನಿಸಿ ಸುಮ್ಮನಿದ್ದುಬಿಡಲು ಯಾವುದೇ ಅವಕಾಶವಿಲ್ಲ. ದೇಶದ ಸಾಮಾನ್ಯ ಪ್ರಜೆಯೂ ಸಹಿತ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲೇಬೇಕು ಹಾಗೂ ಜಗತ್ತಿನ ಆಗುಹೋಗುಗಳಿಗೆ ಸರ್ಕಾರ, ರಾಜಕೀಯ ನಾಯಕರಷ್ಟೇ ಹೊಣೆ ಎಂದು ಹೇಳಿ ತಪ್ಪಿಸಿಕೊಳ್ಳುವ ಯಾವುದೇ ಆಸ್ಪದ ಇಂದಿನ ದಿವಸದಲ್ಲಿ ಯಾರಿಗೂ ಉಳಿದಿಲ್ಲ ಎಂದರು. ಆರೆಸ್ಸೆಸ್‌ನ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಸಂವಾದ ವರ್ಲ್ಡ್‌ ಸಂಪಾದಕ ಪ್ರಶಾಂತ್ ವೈದ್ಯರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts