More

    50 ಕೋಟಿ ರೂಪಾಯಿ ಪಿಡಿಎಸ್ ಹಗರಣ

    ಮ್ಹೋವ್​ : ಮಧ್ಯಪ್ರದೇಶದ ಇಂದೋರ್​ ಜಿಲ್ಲೆಯ ಮ್ಹೋವ್ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಗೆ ಸಂಬಂಧಿಸಿದ 50 ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇದುವರೆಗೆ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇಂದೋರ್​ನ ಕಲೆಕ್ಟರ್​ ಮನೀಶ್ ಸಿಂಗ್ ಶನಿವಾರ ತಿಳಿಸಿದ್ದಾರೆ.

    ಈ ಹಗರಣದ ದೊಡ್ಡ ಮಟ್ಟದ್ದಾಗಿದ್ದು, 100 ಕೋಟಿ ರೂಪಾಯಿಗೂ ಅಧಿಕ ಆಗಬಹುದು ಎಂಬ ಸುಳಿವು ನೀಡಿದ ಅವರು, ತನಿಖೆ ಪ್ರಗತಿಯಲ್ಲಿದೆ. ಆಗಸ್ಟ್ 17ರಿಂದ ಈಚೆಗೆ ಐದು ಎಫ್​ಐಆರ್ ದಾಖಲಾಗಿವೆ. ಏಳು ಜನರ ಪೈಕಿ ಒಬ್ಬಾತ ಮೋಹನ್ ಅಗರವಾಲ್​, ಆತನ ಪುತ್ರರಾದ ಮೋಹಿತ್ ಮತ್ತು ತರುಣ್​ ಎಂಬುವವರಿದ್ದಾರೆ. ಇವರಲ್ಲದೆ ವ್ಯಾಪಾರಿಗಳಾದ ಆಯುಷ್ ಅಗರ್​ವಾಲ್​, ಲೋಕೇಶ್ ಅಗರವಾಲ್ ಕೂಡ ಸೇರಿದ್ದಾರೆ.

    ಇದನ್ನೂ ಓದಿ: ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ

    ಅಗತ್ಯ ವಸ್ತು ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್​ಗಳ ಪ್ರಕಾರ ಇವರ ವಿರುದ್ಧ ಪ್ರಕರಣ ದಾಖಲಾಗಿವೆ. ಅವರು ಫಲಾನುಭವಿಗಳಿಗೆ ಕಡಿಮೆ ಪ್ರಮಾಣದ ಅಕ್ಕಿ, ಗೋಧಿ, ಸೀಮೆಎಣ್ಣೆ ಕೊಟ್ಟು, ಉಳಿದವನ್ನು ಒಂದೆಡೆ ದಾಸ್ತಾನು ಮಾಡುತ್ತಿದ್ದರು. ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದರು. ದಾಸ್ತಾನು ಮಾಡುವುದಕ್ಕೆ ಮೋಹನ್ ಅಗರವಾಲ್ ಅವರ ಗೋಡೌನ್​ ಬಳಕೆಯಾಗಿದೆ. ಅಲ್ಲಿಂದ 635 ಬ್ಯಾಗ್ ಪಡಿತರ ಅಕ್ಕಿ ಮತ್ತು ಇತರೆ ಪಡಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಕರಾಚಿಯಲ್ಲಿ ಜನಾಂಗೀಯ ಹಿಂಸಾಚಾರದ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts