More

    ಹಾವೇರಿ ಜಿಲ್ಲೆಗೆ 443 ಕೋಟಿ ರೂ. ಬೆಳೆ ವಿಮೆ ಮಂಜೂರು

    ಹಾವೇರಿ: ಕಳೆದ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,02,436 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದರು. ಈ ಪೈಕಿ 1,69,914 ರೈತರಿಗೆ 443.09 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದೆ.

    1,59,992 ರೈತರಿಗೆ 427.04 ಕೋಟಿ ರೂ. ಈಗಾಗಲೇ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ. ಉಳಿಕೆ ವಿಮಾ ಪರಿಹಾರ ಮೊತ್ತ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮುಖ್ಯವಾಗಿ ಗೋವಿನಜೋಳ, ಹತ್ತಿ, ಭತ್ತ, ಶೇಂಗಾ ಮತ್ತು ಸೋಯಾ, ಅವರೆ ಬೆಳೆಗಳನ್ನು 3.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 3.27 ಲಕ್ಷ ಹೆಕ್ಟೇರ್ ಸಾಧನೆಯಾಗಿದ್ದು ಶೇ. 99 ಬಿತ್ತನೆಯಾಗಿತ್ತು. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ತಾಲೂಕಿನಲ್ಲಿ 21,719.20 ಹೆಕ್ಟೇರ್ ಪ್ರದೇಶಕ್ಕೆ 24,314 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 21,150 ಫಲಾನುಭವಿಗಳಿಗೆ 5,819.50 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.


    ಹಾನಗಲ್ಲ ತಾಲೂಕಿನಲ್ಲಿ 27,326.28 ಹೆಕ್ಟೇರ್ ಪ್ರದೇಶಕ್ಕೆ 45,099 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 25,104 ಫಲಾನುಭವಿಗಳಿಗೆ 4,367.56 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.

    ಸವಣೂರು ತಾಲೂಕಿನಲ್ಲಿ 16,418.26 ಹೆಕ್ಟೇರ್ ಪ್ರದೇಶಕ್ಕೆ 15,860 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 13,945 ಫಲಾನುಭವಿಗಳಿಗೆ 4,348.67 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.

    ಶಿಗ್ಗಾಂವಿ ತಾಲೂಕಿನಲ್ಲಿ 20,951.10 ಹೆಕ್ಟೇರ್ ಪ್ರದೇಶಕ್ಕೆ 25,129 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 17,838 ಫಲಾನುಭವಿಗಳಿಗೆ 4,633.91 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.


    ಬ್ಯಾಡಗಿ ತಾಲೂಕಿನಲ್ಲಿ 18,751.31 ಹೆಕ್ಟೇರ್ ಪ್ರದೇಶಕ್ಕೆ 23,364 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 20,978 ಫಲಾನುಭವಿಗಳಿಗೆ 6,448.86 ಲಕ್ಷ ರೂ. ಬೆಳೆ ವಿಮೆ ಪರಿಹಾರ ಜಮೆಯಾಗಿದೆ.

    ಹಿರೇಕೆರೂರ ತಾಲೂಕಿನಲ್ಲಿ 11,966.98 ಹೆಕ್ಟೇರ್ ಪ್ರದೇಶಕ್ಕೆ 19,021 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 16,942 ಫಲಾನುಭವಿಗಳಿಗೆ 4,798.51 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.


    ರಾಣೇಬೆನ್ನೂರ ತಾಲೂಕಿನಲ್ಲಿ 26,303.62 ಹೆಕ್ಟೇರ್ ಪ್ರದೇಶಕ್ಕೆ 31,486 ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದು, 26,831 ಫಲಾನುಭವಿಗಳಿಗೆ 7,033.48 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.

    ರಟ್ಟಿಹಳ್ಳಿ ತಾಲೂಕಿನಲ್ಲಿ 12,913.74 ಹೆಕ್ಟೇರ್ ಪ್ರದೇಶಕ್ಕೆ 18,163 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, 17,204 ಫಲಾನುಭವಿಗಳಿಗೆ 5,253.61 ಲಕ್ಷ ರೂ. ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿದೆ.

    ಬೆಳೆ ವಿಮೆ ಜಮೆಯಾದ ರೈತರ ವಿವರಗಳ ಮಾಹಿತಿಯನ್ನು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಗೆ ರವಾನಿಸಲಾಗಿದೆ. ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts