More

    ನೆಕ್ಸಾನ್ ಇವಿ ಕಾರಿನ ಬೆಲೆಯಲ್ಲಿ 1.2 ಲಕ್ಷ ರೂ. ಕಡಿತ! ಟಾಟಾ ಮೋಟಾರ್ಸ್​ನಿಂದ ಅಚ್ಚರಿಯ ನಿರ್ಧಾರ

    ನವದೆಹಲಿ: ಸಾಮಾನ್ಯವಾಗಿ ಯಾವುದೇ ವಾಹನಗಳ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ. ಆದರೆ, ಟಾಟಾ ಮೋಟಾರ್ಸ್​ ತನ್ನ ವಾಹನಗಳ ಬೆಲೆಯಲ್ಲಿ ಬರೋಬ್ಬರಿ 1.2 ಲಕ್ಷ ರೂ.ವರೆಗೂ ಕಡಿತಗೊಳಿಸಲು ನಿರ್ಧರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

    ಎಲೆಕ್ಟ್ರಿಕ್​​ ವಾಹನಗಳ ಆನ್​ ರೋಡ್​ ಬೆಲೆಯಲ್ಲಿ ಟಾಟಾ ಮೋಟಾರ್ಸ್​ ಕಡಿತಗೊಳಿಸಲು ನಿರ್ಧರಿಸಿದೆ. ಬ್ಯಾಟರಿಗಳ ಬೆಲೆಯಲ್ಲಿ ಇಳಿಯಾದ ಪರಿಣಾಮ ವಿವಿಧ ಎಲೆಕ್ಟ್ರಿಕ್​ ವಾಹನಗಳ ಬೆಲೆಯನ್ನೂ ಕಂಪನಿ ಕಡಿತಗೊಳಿಸಿದೆ. ಇಳಿಮುಖವಾಗುತ್ತಿರುವ ಬ್ಯಾಟರಿ ಬೆಲೆಗಳ ಪ್ರಯೋಜನಗಳು ಗ್ರಾಹಕರನ್ನೂ ತಲುಪಲಿದೆ ಎಂದು ಟಾಟಾ ಕಂಪನಿ ಹೇಳಿದೆ.

    ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ನಿರ್ಧರಿಸುವಲ್ಲಿ ಬ್ಯಾಟರಿ ಪ್ರಮುಖ ಅಂಶವಾಗಿದೆ. ಟಾಟಾ ಮೋಟಾರ್ಸ್‌ನಿಂದ ಅತ್ಯಂತ ಬೇಡಿಕೆಯಿರುವ ನೆಕ್ಸಾನ್ ಇವಿ ಕಾರಿಗೆ 1.2 ಲಕ್ಷ ರೂ. ಕಡಿತಗೊಳಿಸಲಾಗಿದೆ. ಮತ್ತೊಂದು ಮಾಡೆಲ್​ ಟಿಯಾಗೊ ಇವಿ ಬೆಲೆಯಲ್ಲಿ 70,000 ರೂ. ಕಡಿಮೆ ಮಾಡಿದೆ.

    ಬೆಲೆ ಕಡಿತದ ನಂತರ ನೆಕ್ಸಾನ್ ಇವಿ 14.4 ಲಕ್ಷ ರೂ. ಮತ್ತು ಟಿಯಾಗೊ ಇವಿ 7.9 ಲಕ್ಷ ರೂ.ಗೆ ಲಭ್ಯವಾಗುತ್ತಿದೆ. ಕಳೆದ ವರ್ಷ ಜನವರಿಯಲ್ಲೂ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಟಾಟಾ ಮೋಟಾರ್ಸ್​ ನೆಕ್ಸಾನ್​ ಇವಿ ಬೆಲೆಯಲ್ಲಿ 85 ಸಾವಿರ ರೂ. ಕಡಿಮೆ ಮಾಡಿತ್ತು. ಆದರೆ, ಈ ಬಾರಿ 1.2 ಲಕ್ಷ ರೂ. ಕಡಿತಗೊಳಿಸಿದೆ. ಭಾರತದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನ ಬಳಕೆದಾರರು ವಿದೇಶಿ ಕಾರು ಸಂಸ್ಥೆಗಳಿಗಿಂತ ಟಾಟಾ ಮೋಟಾರ್ಸ್​ ವಾಹನಗಳನ್ನು ಹೆಚ್ಚು ಬಯಸುತ್ತಾರೆ.

    ದೇಶದ ಒಟ್ಟು ಕಾರು ಮಾರುಕಟ್ಟೆಯಲ್ಲಿ ಕೇವಲ 2% ಮಾತ್ರ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತಿದೆ. ಆದರೆ, ಕಡಿಮೆ ವೆಚ್ಚವು ಇಂಧನ ವಾಹನಗಳನ್ನು ಎಲೆಕ್ಟ್ರಿಕ್​ ವಾಹನಗಳಾಗಿ ಬದಲಾಯಿಸಲು ಜನರನ್ನು ಉತ್ತೇಜಿಸುತ್ತದೆ ಎಂದು ಟಾಟಾ ಕಂಪನಿ ನಂಬಿದ್ದು, ಮುಂದಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಲಿದೆ ಎಂದಿದೆ. (ಏಜೆನ್ಸೀಸ್​)

    6ನೇ ತರಗತಿಯಲ್ಲೇ ಲವ್​ ಲೆಟರ್​! ಶಾಲಾ ವ್ಯಾನ್​ ಬಳಿ ನಡೆದಿದ್ದನ್ನು ಮರೆಯೋಕ್ಕಾಗಲ್ಲ ಎಂದ ಹನಿ ರೋಸ್​

    ರೈತರಿಗೆ ಹೊರೆಯಾದ ಮುದ್ರಾಂಕ ಶುಲ್ಕ ಏರಿಕೆ; ವಿವಿಧ ಬಾಂಡ್​ಗಳಿಗೆ ದುಪ್ಪಟ್ಟು ಮೊತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts