More

    ತವರಿನಲ್ಲಿ ಪುಟಿದೇಳುವುದೇ ಆರ್‌ಸಿಬಿ; ಇಂದು ಸನ್‌ರೈಸರ್ಸ್‌ ಸವಾಲು, ಸೋಲಿನ ಸರಪಣಿ ಕಳಚುವ ತವಕ

    ಬೆಂಗಳೂರು: ಸತತ 4 ಸೋಲಿನೊಂದಿಗೆ ಅಂಕಪಟ್ಟಿಯ ಕೊನೇ ಸ್ಥಾನಕ್ಕೆ ಕುಸಿದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-17ರ ತನ್ನ 7ನೇ ಲೀಗ್ ಪಂದ್ಯದಲ್ಲಿ ಸೋಮವಾರ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಪ್ಲೇಆ್ ಅವಕಾಶ ವೃದ್ಧಿಸಿಕೊಳ್ಳಲು ್ಾ ಡು ಪ್ಲೆಸಿಸ್ ಪಡೆಗೆ ಗೆಲುವು ಅನಿವಾರ‌್ಯವಾಗಿದ್ದು, ತವರಿನಲ್ಲಿ ಲಯಕ್ಕೆ ಮರಳುವ ನಿರೀಕ್ಷೆಯಿದೆ.

    ವಿಶ್ವ ಶ್ರೇಷ್ಠ ಆಟಗಾರರು ಹಾಗೂ ತರಬೇತಿ ಬಳಗದ ಜತೆಗೆ ‘ಇದು ಹೊಸ ಅಧ್ಯಾಯ’ ಎಂಬ ಆತ್ಮವಿಶ್ವಾಸದೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿದ ಆರ್‌ಸಿಬಿಗೆ ಇದುವರೆಗೆ ಯಾವುದೇ ಕಾರ್ಯಯೋಜನೆ ಯಶಸ್ಸು ನೀಡಿಲ್ಲ. ಆಡಿರುವ 6 ಪಂದ್ಯಗಳಲ್ಲಿ 1 ಗೆಲುವು, 5 ಸೋಲಿನೊಂದಿಗೆ ಇದುವರೆಗೆ 2 ಅಂಕಗಳನ್ನಷ್ಟೇ ಕಲೆಹಾಕಿದೆ. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 190 ಪ್ಲಸ್ ರನ್ ಕಲೆಹಾಕಿದರೂ ರಕ್ಷಿಸಿಕೊಳ್ಳುವಲ್ಲಿ ವಿಲವಾಗಿರುವ ಆರ್‌ಸಿಬಿಗೆ ಬೌಲಿಂಗ್ ವಿಭಾಗದ ದೌರ್ಬಲ್ಯ ಕಾಡುತ್ತಿದೆ. ಇತ್ತ ಆಡಿರುವ ಐದು ಪಂದ್ಯಗಳಲ್ಲಿ 3 ಜಯದೊಂದಿಗೆ ಆರು ಅಂಕ ಗಳಿಸಿರುವ ಸನ್‌ರೈಸರ್ಸ್‌ಗೆ ಬ್ಯಾಟಿಂಗ್ ವಿಭಾಗ ಪ್ರಮುಖ ಶಕ್ತಿ ಎನಿಸಿದೆ. ಹಿಂದಿನ ಐದು ಮುಖಾಮುಖಿಯಲ್ಲಿ ಆರ್‌ಸಿಬಿ 3-2 ದಾಖಲೆ ಹೊಂದಿದೆ. ಆದರೆ ಭರ್ಜರಿ ಲಯದಲ್ಲಿರುವ ಸನ್‌ರೈಸರ್ಸ್‌ ತಂಡ ೇವರಿಟ್ ಆಗಿ ಕಣಕ್ಕಿಳಿಯಲಿದೆ. ವಿರಾಟ್ ಕೊಹ್ಲಿ (319 ರನ್), ್ಾ ಡುಪ್ಲೆಸಿಸ್, ದಿನೇಶ್ ಕಾರ್ತಿಕ್, ರಜತ್ ಪಾಟೀದಾರ್ ಾರ್ಮ್‌ನಲ್ಲಿರುವುದು ಆರ್‌ಸಿಬಿ ಬಲ ಹೆಚ್ಚಿಸಿದೆ.

    ಬೌಲರ್‌ಗಳಿಗೆ ಕಠಿಣ ಪರೀಕ್ಷೆ: ಟೂರ್ನಿಯಲ್ಲಿ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಹೊರತುಪಡಿಸಿ ಆರ್‌ಸಿಬಿ ಬೌಲರ್‌ಗಳು ಇದುವರೆಗೆ ಲಯ ಕಂಡುಕೊಂಡಿಲ್ಲ. ಕಳೆದ ಪಂದ್ಯದಲ್ಲಿ ಮುಂಬೈ 15.3 ಓವರ್‌ಗಳಲ್ಲಿ 196 ರನ್ ಚೇಸಿಂಗ್ ನಡೆಸಿರುವುದು ಇದಕ್ಕೆ ಸಾಕ್ಷಿ. ಪ್ರಮುಖ ವೇಗಿ ಎನಿಸಿರುವ ಮೊಹಮದ್ ಸಿರಾಜ್ ದುಬಾರಿಯಾಗುತ್ತಿರುವುದು ತೀವ್ರ ಹಿನ್ನಡೆ ತಂದಿದೆ. ಜತೆಗೆ ರೀಸ್ ಟಾಪ್ಲೆ, ಯಶ್ ದಯಾಳ್, ಅಲ್ಜಾರಿ ಜೋಸ್ೆ ಅವರಿಂದಲೂ ನಿರೀಕ್ಷಿತ ನಿರ್ವಹಣೆ ಮೂಡಿಲ್ಲ. ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ಅಂಗಣದಲ್ಲಿ ಅಭಿಷೇಕ್ ಶರ್ಮ, ಹೆನ್ರಿಕ್ ಕ್ಲಾಸೆನ್, ಮಾರ್ಕ್ರಮ್ ಅವರಂಥ ಪವರ್ ಹಿಟ್ಟರ್‌ಗಳ ಬ್ಯಾಟಿಂಗ್ ಕ್ರಮಾಂಕದ ಎದುರು ಕಠಿಣ ಪರೀಕ್ಷೆ ಎದುರಾಗಲಿದೆ. ಜತೆಗೆ ತಂಡದಲ್ಲಿ ಅನುಭವಿ ಸ್ಪಿನ್ನರ್ ಇಲ್ಲದಿರುವುದರಿಂದ, ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಅವಲಂಬಿತವಾಗಿದೆ. ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ ವಿಲ್ ಜಾಕ್ಸ್ ಇನ್ನೊಂದು ಅವಕಾಶ ಪಡೆಯುವ ನಿರೀಕ್ಷೆ ಇದೆ.

    ಸನ್ ಸರ್ವಾಂಗೀಣ ಪ್ರದರ್ಶನ: ಸನ್‌ರೈಸರ್ಸ್‌ ತಂಡ ಸರ್ವಾಂಗೀಣ ಪ್ರದರ್ಶನದೊಂದಿಗೆ ಹಿಂದಿನ ಆವೃತ್ತಿಗಿಂತಲೂ ಬಲಿಷ್ಠವಾಗಿ ಕಾಣಿಸಿದೆ. ಹೆನ್ರಿಕ್ ಕ್ಲಾಸೆನ್ (186) ಮತ್ತು ಅಭಿಷೇಕ್ ಶರ್ಮ (177), ಟ್ರಾವಿಸ್ ಹೆಡ್ (133) ಭರ್ಜರಿ ಾರ್ಮ್‌ನಲ್ಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಸಾರಥ್ಯದ ಬೌಲಿಂಗ್ ವಿಭಾಗವೂ ಉತ್ತಮ ಲಯದಲ್ಲಿದೆ. ಜತೆಗೆ ಬೌಲರ್‌ಗಳ ಆಯ್ಕೆಯಲ್ಲಿಯೂ ಕಮ್ಮಿನ್ಸ್ ಅನುಭವ ತಂಡಕ್ಕೆ ಪ್ಲಸ್ ಪಾಯಿಂಟ್ ಎನಿಸಿದೆ. ಆರ್‌ಸಿಬಿಯಂತೆ ಇಲ್ಲಿಯೂ ಸ್ಪಿನ್ನರ್‌ಗಳೇ ಮೈನಸ್ ಪಾಯಿಂಟ್. ಆರ್‌ಸಿಬಿಯಿಂದ ವರ್ಗಾವಣೆಗೊಂಡಿರುವ ಶಾಬಾಜ್ ಅಹ್ಮದ್, ಮಯಾಂಕ್ ಮಾರ್ಕಂಡೆ 11ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts