More

    ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ರೌಡಿಶೀಟರ್​ ಸ್ಲಂ ಭರತ

    ಬೆಂಗಳೂರು: ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ರೌಡಿಶೀಟರ್​ ಸ್ಲಂ ಭರತ ಮೃತಪಟ್ಟಿದ್ದಾನೆ.

    ಸೋಲದೇವನಹಳ್ಳಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ಸ್ಲಂ ಭರತ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್​ ಹೇಳಿದ್ದಾರೆ.

    ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಎಸಗಿದ್ದ ಸ್ಲಂ ಭರತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ವಿಶೇಷ ತಂಡ ಬಂಧಿಸಿ ನಗರಕ್ಕೆ ಕರೆ ತಂದಿತ್ತು. ಭರತನನ್ನು ಕರೆತರುತ್ತಿರುವ ವಿಚಾರ ತಿಳಿದ ಆತನ ಸಹಚರರ ಗುಂಪು ಮಾರಕಾಸ್ತ್ರಗಳ ಮೂಲಕ ಪೀಣ್ಯ ಬಳಿ ತಡರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿತು. ದಾಳಿ ವೇಳೆ ಸ್ಲಂ ಭರತ ಪೊಲೀಸರಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪರಾರಿಯಾದ. ಕೂಡಲೇ ಎಲ್ಲ ಠಾಣೆಗಳಿಗೆ ರೌಡಿಶೀಟರ್​ ಸ್ಲಂ ಭರತ ತಪ್ಪಿಸಿಕೊಂಡಿರುವ ಮಾಹಿತಿ ರವಾನಿಸಲಾಯಿತು. ಪೊಲೀಸರು ಆಯಕಟ್ಟಿನ ಸ್ಥಳದಲ್ಲಿ ತಪ್ಪಿಸಿಕೊಂಡ ಸ್ಲಂ ಭರತನ ಪತ್ತೆಗೆ ಬಲೆ ಬೀಸಿದರು.

    ಪೊಲೀಸರಿಂದ ತಪ್ಪಿಸಿಕೊಂಡ ಸ್ಲಂ ಭರತ ಬೆಳಗ್ಗೆ 6 ಗಂಟೆ ವೇಳೆಗೆ ಸೂಲದೇವನಹಳ್ಳಿಯಲ್ಲಿ ಕಾರಿನಲ್ಲಿ ತೆರಳುತ್ತಿರುವ ಮಾಹಿತಿ ನಮಗೆ ದೊರೆಯಿತು. ಕೂಡಲೇ ವಿಶೇಷ ಪೊಲೀಸ್​ ತಂಡ ಆತನ ಬೆನ್ನು ಹತ್ತಿತ್ತು. ಈ ವೇಳೆ ಆತ ರಾಜಗೋಪಾಲ ನಗರ ಇನ್ಸ್​ಪೆಕ್ಟರ್​ ದಿನೇಶ್​ ಮೇಲೆ ದಾಳಿ ನಡೆಸಿದ. ಆತ್ಮರಕ್ಷಣೆಗಾಗಿ ನಂದಿನಿ ಲೇಔಟ್​ ಇನ್ಸ್​ಪೆಕ್ಟೆರ್​ ಲೋಹಿತ್​ ತಮ್ಮ ರಿವಾಲ್ವಾರ್​ನಿಂದ ಭರತನ ಮೇಲೆ ಗುಂಡು ಹಾರಿಸಿದರು. ಗುಂಡು ತಗುಲಿದ ಭರತ ಕುಸಿದು ಬಿದ್ದ ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಡಿಸಿಪಿ ಶಶಿಕುಮಾರ್​ ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts