More

    ಹತ್ತನೇ ತರಗತಿಯಲ್ಲೇ ಕೊರಂಗು ಅಟ್ಟಹಾಸ ಮೆರೆದಿದ್ದ…

    ಬೆಂಗಳೂರು: ಪಾತಕ ಲೋಕದಲ್ಲಿ ಅಟ್ಟಹಾಸ ಮೆರೆದಿದ್ದ ಕೊರಂಗು ಕೃಷ್ಣ ಇಂದು(ಶುಕ್ರವಾರ) ಬೆಳಗ್ಗೆ ಚಿತ್ತೂರಿನಲ್ಲಿ ಮೃತಪಟ್ಟಿದ್ದು, ಆತ ಹತ್ತನೇ ತರಗತಿಯಲ್ಲೇ ರೌಡಿಸಂಗೆ ಎಂಟ್ರಿ ಕೊಟ್ಟ ಇತಿಹಾಸವೇ ರೋಚಕ.

    ಒಪ್ಪೊತ್ತಿನ ಊಟ ಅರಸಿ ತಂದೆ-ತಾಯಿ ಮತ್ತು ಅಣ್ಣನೊಂದಿಗೆ ಆಂಧ್ರದ ಚಿತ್ತೂರಿನಿಂದ ಬೆಂಗಳೂರಿಗೆ ಕಾಲಿಟ್ಟ ಕೃಷ್ಣಮೂರ್ತಿ ಅಲಿಯಾಸ್​ ಕೊರಂಗು ಕೃಷ್ಣನ ಕೈಗಳು ಹತ್ತನೇ ತರಗತಿಯಲ್ಲೇ ರಕ್ತ ಸಿಕ್ತವಾಗಿದ್ದವು!

    1980ರ ಆರಂಭದ ದಿನಗಳಲ್ಲಿ ರಾಜಧಾನಿಗೆ ಎಂಟ್ರಿ ಕೊಟ್ಟ ಕೊರಂಗು ಕುಟುಂಬ ವೈಯಾಲಿಕಾವಲ್‌ನಲ್ಲಿ ವಾಸವಿತ್ತು. ತಂದೆ ಗಾರೆ ಕೆಲಸ ಮಾಡುತ್ತಿದ್ದರು, ತಾಯಿ ಬಾರೊಂದರ ಮುಂದೆ ಬೋಂಡಾ, ಬಜ್ಜಿ, ಟಿಫನ್​ ಮಾರಾಟ ಮಾಡುತ್ತಿದ್ದರು. ಅಣ್ಣ ಮುನಿರತ್ನ 80ರ ದಶಕದ ಆರಂಭದಲ್ಲೇ ಅಂದಿನ ‘ಬೆಂಗಳೂರು ಡಾನ್‌’ ಶಿವಮೊಗ್ಗ ಮೂಲದ ಕೊತ್ವಾಲ್‌ ರಾಮಚಂದ್ರನ ಜತೆ ಸೇರಿ ರೌಡಿಸಂನ ರುಚಿ ಹತ್ತಿಸಿಕೊಂಡಿದ್ದ. ಇದನ್ನೂ ಓದಿರಿ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ವಿಧಿವಶ

    ಇತ್ತ ಕೃಷ್ಣಮೂರ್ತಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಸಹಪಾಠಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈತನನ್ನು ಹುಡುಕಿಕೊಂಡು ಮನೆಗೆ ತೆರಳಿದ ಪೊಲೀಸರಿಗೆ ಆತ ಕಾಣಿಸಲಿಲ್ಲ. ಆದರೆ, ಆತ ಏನೂ ನಡೆದೇ ಇಲ್ಲವೆಂಬಂತೆ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ. ಆಗ ರಕ್ತಸಿಕ್ತವಾದ ಕೃಷ್ಣಮೂರ್ತಿ ಕೈಗಳಲ್ಲಿ ಲೆಕ್ಕವಿಲ್ಲದಷ್ಟು ರತ್ತಪಾತ ಹರಿಸಿತು. ಬಳಿಕ ಕೊರಂಗು ಕೃಷ್ಣನಾಗಿ ಕುಖ್ಯಾತಿ ಪಡೆಯುತ್ತ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಪೊಲೀಸ್​ ಅಧಿಕಾರಿಗಳು.

    ಇದನ್ನೂ ಓದಿರಿ ಹೆಬ್ಬೆಟ್ ಮಂಜನಿಂದ ಹೆಣವಾಗಬೇಕಿದ್ದ ಕೊರಂಗು ಪಾರಾಗಿದ್ದೇ ರೋಚಕ!

    ಅಪ್ಪನ ಕತ್ತುಸೀಳಲು ಮಗನಿಂದಲೇ ಸುಪಾರಿ… 100 ಕೋಟಿ ಆಸ್ತಿ ಒಡೆಯನ ಕೊಲೆ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts