More

  ಗೂಂಡಾಗಳು ಸಿಎಂ ಆಗಲು ಜನ ಒಪ್ಪಲ್ಲ- ಬಸನಗೌಡ ಯತ್ನಾಳ್ ವಾಗ್ದಾಳಿ

  ಹನುಮಸಾಗರ: ಡಿ.ಕೆ.ಶಿವಕುಮಾರ್ ನನ್ನ ನಾಲಿಗೆ ಟಚ್ ಮಾಡಿ ನೋಡಲಿ. ಗೂಂಡಾಗಳು ಮುಖ್ಯಮಂತ್ರಿ ಆಗುವುದನ್ನು ರಾಜ್ಯದ ಜನ ಒಪ್ಪುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

  ಪಟ್ಟಣದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಡಾ.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಆರ್ಟಿಕಲ್ 370 ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ವಿಚಾರಧಾರೆಗಳನ್ನು ಎತ್ತಿ ಹಿಡಿದಿದ್ದಾರೆ.

  ರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ದೇಶದ ಜನರನ್ನು ಕಾಪಾಡುವ ಕೆಲಸ ಮಾಡಿದ್ದಾರೆ. 80 ಕೋಟಿ ಜನರಿಗೆ ರೇಷನ್ ನೀಡಿದ್ದಾರೆ ಎಂದ ಅವರು, ರಾಹುಲ್ ಗಾಂಧಿ ಒಬ್ಬ ದಿವಾಳಿ ಆಗುತ್ತಿರುವ ಪಕ್ಷದ ನಾಯಕ. ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ಅರಿವಿಲ್ಲ. ಸಿದ್ದರಾಮಯ್ಯ ಸುಳ್ಳು ಭರವಸೆ ನೀಡುತ್ತಿದ್ದಾರೆ. ರಾಹುಲ್ ಹಾಗೂ ಸಿದ್ದರಾಮಯ್ಯ ಬಿಜೆಪಿ ಪ್ರಚಾರದ ರಾಯಭಾರಿಗಳು ಎಂದು ವ್ಯಂಗ್ಯವಾಡಿದರು.

  ಇದನ್ನೂ ಓದಿ: ನಡ್ಡಾ ನಿಮಗೆ ಮಹಿಳೆಯರ ಮೇಲೆ ಗೌರವ ಇದ್ರೆ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಿ: ಏರು ಧ್ವನಿಯಲ್ಲಿ ಡಿಕೆಶಿ ಪ್ರತಿಕ್ರಿಯೆ!

  ಬಜರಂಗದಳ ಬ್ಯಾನ್ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಎಲ್ಲರೂ ಕೂಡಿ ಧರ್ಮ ರಕ್ಷಣೆ ಮಾಡಬೇಕು. ಜೈ ಬಜರಂಗಿ ಎಂದು ಹೇಳಿ ಮತ ಹಾಕಿ. ದೇಶದ ಉಳಿವಿಗಾಗಿ ಮೋದಿ ಯೋಜನೆ ರೂಪಿಸುತ್ತಿದ್ದಾರೆ ಎಂದರು.

  ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಎಚ್.ಪಾಟೀಲ್ ಮಾತನಾಡಿದರು. ಮಾಜಿ ಶಾಸಕ ಕೆ.ಶರಣಪ್ಪ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು, ಪ್ರಮುಖರಾದ ತುಕರಾಮ್ ಸುರ್ವೇ, ಮಲ್ಲಣ್ಣ ಪಲ್ಲೆದ, ವಿಠ್ಠಲ ಶ್ರೇಷ್ಠಿ ನಾಗೂರು, ನಾಗಪ್ಪ ಸೂಡಿ, ರುದ್ರಗೌಡ ಗೌಡಪ್ಪನವರ, ಪ್ರಭಾಕರ ಚಿಣಿ, ವಿಜಯ ಕುಮಾರ್ ನಾಯಕ್, ನೇಮಣ್ಣ ಮೇಲಸಕ್ರಿ, ಶಿವಪುತ್ರಪ್ಪ ಕೋಳೂರ, ಮರಿಯಪ್ಪ ಗ್ವಾತಗಿ, ಶಿವು ಮೇಲಸಕ್ರಿ, ಬಸವರಾಜ ದ್ಯಾವಣ್ಣವರ, ಬಸವರಾಜ ಹಕ್ಕಿ, ಶರಣಪ್ಪ ಹುಲ್ಲೂರು, ಯಂಕಪ್ಪ ದೇಸಾಯಿ, ಕಲ್ಯಾಣಮ್ಮ ಹಿರೇಮಠ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts