More

    ರೋಟರಿ ಅಭಿನಯ ಭಾರತಿ ನಾಟಕೋತ್ಸವ

    ಧಾರವಾಡ: ಮಕ್ಕಳಲ್ಲಿ ಮನರಂಜನೆ, ಕಲಿಕೆಯನ್ನು ಪ್ರೋತ್ಸಾಹಿಸಲು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್, ಅಭಿನಯ ಭಾರತಿ ಸಂಸ್ಥೆಯ ಸಹಯೋಗದಲ್ಲಿ ರೋಟರಿ ಅಭಿನಯ ಭಾರತಿ ನಾಟಕೋತ್ಸವ' ಕಾರ್ಯಕ್ರಮವನ್ನು ನ. 16ರಿಂದ 19ರವರೆಗೆ ನಗರದ ಸೃಜನಾ ರಂಗಮ0ದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ನಾಟಕಗಳು ಪ್ರತಿದಿನ ಸಂಜೆ ೫.೩೦ಕ್ಕೆ ಆರಂಭಗೊಳ್ಳಲಿವೆ. ನಾಟಕಗಳು ವಿಜ್ಞಾನಿಗಳ ಜೀವನ ಚರಿತೆಯನ್ನು ಒಳಗೊಂಡಿವೆ. ೧೬ರಂದು ಮೇಡಂ ಕ್ಯೂರಿ ಜೀವನ ಆಧಾರಿತಪ್ರಭಾಸ್’ ನಾಟಕ ಅಭಿನಯ ಭಾರತಿ ತಂಡದ ಕಲಾವಿದರು ಪ್ರದರ್ಶಿಸಲಿದ್ದಾರೆ. ೧೭ಕ್ಕೆ ರಿಚರ್ಡ ಪೈನ್ಸ್ ಮÁ್ಯನ್ ಆಧಾರಿತ ಕ್ವಿಡ್' ನಾಟಕ ಅರಿವು ಮೈಸೂರು ತಂಡ ಪ್ರಸ್ತುತಪಡಿಸಲಿದೆ. ೧೮ರಂದು ಕ್ಯಾನ್ಸರ್ ರೋಗದ ಬಗ್ಗೆಸಿ ವಾರ್ಡ್’ ನಾಟಕ ಹಾಗೂ ೧೯ರಂದು `ಪಕ್ಷಿತಜ್ಞ ಡಾ. ಸಲೀಂ ಅಲಿ’ ನಾಟಕ ಪ್ರದರ್ಶನವಿದೆ ಎಂದರು.
    ಅಭಿನಯ ಭಾರತಿ ಸಂಸ್ಥೆಯ ಅರವಿಂದ ಕುಲಕರ್ಣಿ, ಸಮೀರ ಜೋಶಿ, ಗಿರೀಶ ಬಡಗೇರ, ಆನಂದ ಅಮರಶೆಟ್ಟರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts