More

    ಪ್ರವಾಸಿಗರ ಸೆಲ್ಪಿ ಸ್ಪಾಟ್ ಆದ ಬಸ್ ನಿಲ್ದಾಣದ ಮೇಲ್ಛಾವಣಿ

    ಮೂಡಿಗೆರೆ: ತಾಲೂಕಿನ ಹಂತೂರು ಗ್ರಾಪಂ ಉಗ್ಗೇಹಳ್ಳಿ ಗ್ರಾಮದ ಬಸ್ ತಂಗುದಾಣದ ಛಾವಣಿ ಗಾಳಿ ಮಳೆಗೆ ಸಿಲುಕಿ 20 ಮೀಟರ್ ದೂರಕ್ಕೆ ಹಾರಿ ಬಿದ್ದು 5 ತಿಂಗಳಾದರೂ ಗ್ರಾಪಂ, ತಾಪಂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ.

    ಹೊಯ್ಸಳರ ಉಗಮಸ್ಥಾನ ಅಂಗಡಿ, ದೇವವೃಂದ ರಾಮೇಶ್ವರ ದೇವಸ್ಥಾನ, ದೇವರಮನೆ ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸಿಗರ ದಂಡು ಪ್ರತಿದಿನ ಉಗ್ಗೇಹಳ್ಳಿ ಮಾರ್ಗವಾಗಿಯೇ ಹೋಗುತ್ತಾರೆ. ಪ್ರವಾಸಿಗರು ಈ ರಸ್ತೆಯಲ್ಲಿ ಸಾಗುವಾಗ ಬಸ್ ತಂಗುದಾಣದ ಹಾರಿ ಹೋಗಿರುವ ಛಾವಣಿ ಪಕ್ಕದಲ್ಲಿ ಕಾರು ನಿಲ್ಲಿಸಿ, ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇದರಿಂದ ಗ್ರಾಮ ಹಾಗೂ ಇಲ್ಲಿನ ಆಡಳಿತ ವ್ಯವಸ್ಥೆ ವೈಖರಿ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುತ್ತಿದೆ. ಇದು ಆಡಳಿತ ವ್ಯವಸ್ಥೆ ವೈಫಲ್ಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts