More

    ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮ ಪಾಸ್, ಆಸೀಸ್‌ಗೆ ಪ್ರಯಾಣಿಸಲು ಸಿದ್ಧ

    ಬೆಂಗಳೂರು: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಉದ್ಯಾನನಗರಿಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಶುಕ್ರವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದ ಅವರು ಆಸ್ಟ್ರೇಲಿಯಾ ಪ್ರವಾಸದ ಕೊನೆಯ 2 ಟೆಸ್ಟ್ ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ. ಮೊದಲ ಟೆಸ್ಟ್ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಲಿರುವುದರಿಂದ ಭಾರತ ತಂಡಕ್ಕೆ ಇದು ಶುಭಸುದ್ದಿಯಾಗಿದೆ.

    ರೋಹಿತ್ ಶರ್ಮ ಸೋಮವಾರ (ಡಿಸೆಂಬರ್ 14) ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ಇನ್ನು ಕೆಲ ವರದಿಗಳ ಪ್ರಕಾರ ರೋಹಿತ್ ಡಿಸೆಂಬರ್ 13ರಂದು ಮುಂಬೈನಿಂದ ದುಬೈಗೆ ಪ್ರಯಾಣಿಸಲಿದ್ದು, ಅಲ್ಲಿಂದ ಸಿಡ್ನಿಗೆ ತೆರಳಲಿದ್ದಾರೆ. ಪ್ರವಾಸದ ಆರಂಭದಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗಿರುವ ಕಾರಣ ಅವರು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಲಭ್ಯರಿಲ್ಲ. ಆಸ್ಟ್ರೇಲಿಯಾ ಪ್ರವಾಸದ 4 ಟೆಸ್ಟ್ ಪಂದ್ಯಗಳ ಸರಣಿ ಡಿಸೆಂಬರ್ 17ರಂದು ಆರಂಭಗೊಳ್ಳಲಿದ್ದು, ಕೊನೆಯ 2 ಟೆಸ್ಟ್ ಪಂದ್ಯಗಳು ಜನವರಿ 7ರಿಂದ 11ರವರೆಗೆ ಮತ್ತು ಜನವರಿ 15ರಿಂದ 19ರವರೆಗೆ ನಡೆಯಲಿವೆ.

    ಯುಎಇಯಲ್ಲಿ ನಡೆದ ಕಳೆದ ಐಪಿಎಲ್ ಟೂರ್ನಿಯ ವೇಳೆ ರೋಹಿತ್ ಶರ್ಮ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಆಸೀಸ್ ಪ್ರವಾಸದ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು ಮತ್ತು ಬೆಂಗಳೂರಿಗೆ ಆಗಮಿಸಿ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

    ‘ರೋಹಿತ್ ಶರ್ಮ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಶೀಘ್ರವೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ’ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ರೋಹಿತ್ ಫಿಟ್ನೆಸ್ ಪರೀಕ್ಷೆ ನಡೆದಿದೆ.
    ಆಸ್ಟ್ರೇಲಿಯಾ ಸರ್ಕಾರದ ನಿಯಮದನ್ವಯ ರೋಹಿತ್ ಶರ್ಮ 14 ದಿನಗಳ ಕಡ್ಡಾಯ ಹಾರ್ಡ್ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ. ಇದರಿಂದಾಗಿ ಅವರಿಗೆ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ನಡೆಸಲು ಅವಕಾಶ ಇರುವುದಿಲ್ಲ. ಆದರೆ ಫಿಟ್ನೆಸ್ ತರಬೇತಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಕ್ರಿಸ್‌ಮಸ್ ಬಳಿಕ ಮೆಲ್ಬೋರ್ನ್‌ನಲ್ಲಿ ಅವರು ಬಯೋ-ಬಬಲ್‌ನಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.

    ಗೊಂದಲ ಮೂಡಿಸಿದ್ದ ಫಿಟ್ನೆಸ್
    ರೋಹಿತ್ ಶರ್ಮ ಐಪಿಎಲ್ ವೇಳೆ ಗಾಯದ ಸಮಸ್ಯೆ ಎದುರಿಸಿದ್ದರು. ಇದರಿಂದಾಗಿ ಅವರನ್ನು ಆಸೀಸ್ ಪ್ರವಾಸಕ್ಕೆ ಯಾವುದೇ ಮಾದರಿಯ ತಂಡಕ್ಕೆ ಸೇರ್ಪಡೆಗೊಳಿಸಿರಲಿಲ್ಲ. ಆದರೆ ಬಳಿಕ ಐಪಿಎಲ್ ಫೈನಲ್ ಸಹಿತ ಪ್ಲೇಆಫ್​ ಪಂದ್ಯಗಳಲ್ಲಿ ಆಡಿದ್ದರು. ಆದರೆ ಭಾರತ ತಂಡದ ಜತೆಗೆ ಆಸೀಸ್ ವಿಮಾನ ಏರದೆ, ತವರಿಗೆ ಮರಳಿದ್ದರು. ಇದರಿಂದ ಅವರ ಫಿಟ್ನೆಸ್ ಬಗ್ಗೆ ಗೊಂದಲ ಮೂಡಿತ್ತು. ಬಳಿಕ ಅವರಿಗೆ ಏಕದಿನ, ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದ್ದ ಬಿಸಿಸಿಐ, ಟೆಸ್ಟ್ ತಂಡಕ್ಕೆ ಮಾತ್ರ ಸೇರಿಸಿತ್ತು. ಆದರೆ ಎನ್‌ಸಿಎಯಲ್ಲಿ ಅವರ ಫಿಟ್ನೆಸ್ ಪರೀಕ್ಷೆ ನಡೆದಿರದ ಕಾರಣ ಪ್ರಯಾಣ ವಿಳಂಬಗೊಂಡಿತ್ತು.

    ಈ ನಡುವೆ ಆಸೀಸ್ ಪ್ರವಾಸದ ಮೊದಲ ಪಂದ್ಯಕ್ಕೆ ಮುನ್ನ ನಾಯಕ ವಿರಾಟ್ ಕೊಹ್ಲಿ ಕೂಡ ರೋಹಿತ್ ಫಿಟ್ನೆಸ್ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಬಿಸಿಸಿಐ, ರೋಹಿತ್ ತಂದೆಯ ಅನಾರೋಗ್ಯದಿಂದಾಗಿ ತವರಿಗೆ ಮರಳಿದ್ದರು ಎಂದು ತಿಳಿಸಿತ್ತು ಮತ್ತು ಡಿಸೆಂಬರ್ 11ರಂದು ಫಿಟ್ನೆಸ್ ಪರೀಕ್ಷೆ ನಡೆದ ಬಳಿಕ ಅವರ ಭವಿಷ್ಯ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿತ್ತು.

    ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕಾದರೆ ಹೀಗೆ ಮಾಡಿ ಎಂದ ಅನಿಲ್ ಕುಂಬ್ಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts