More

    ಕೋವಿಡ್ ಪರೀಕ್ಷೆಗೆಂದು ಬಂದರು.. ಲಕ್ಷಾಂತರ ರೂ.ನಗದು, ಆಭರಣ ದೋಚಿ ಪರಾರಿಯಾದರು

    ಗಾಜಿಯಾಬಾದ್: ಆರು ಜನ ಶಸ್ತ್ರಸಜ್ಜಿತ ದರೋಡೆಕೋರರು ಮಂಗಳವಾರ ಬೆಳಗ್ಗೆ ಘಜಿಯಾಬಾದ್‌ನ ಕವಿ ನಗರ ಪ್ರದೇಶದ ಮನೆಯೊಂದಕ್ಕೆ ನುಗ್ಗಿ 1 ಲಕ್ಷ ರೂ. ನಗದು ಹಾಗೂ 15 ಲಕ್ಷ ರೂ. ಬೆಲೆಬಾಳುವ ಆಭರಣ ದೋಚಿ ಪರಾರಿಯಾಗಿದ್ದಾರೆ.
    ಆ ಮನೆಯಲ್ಲಿ 75 ವರ್ಷದ ವೃದ್ಧ ಭೋಪಾಲ್ ಶರ್ಮಾ, ಅವರ ಹೆಂಡತಿ, ಮಗಳು ಮತ್ತು ಮೊಮ್ಮಕ್ಕಳು ಇದ್ದರು. ರಾತ್ರಿ 1.30 ಕ್ಕೆ ಮನೆಯಲ್ಲಿ ಮಂದಿಯೆಲ್ಲ ಮಲಗಿದ್ದ ವೇಳೆ ಆರು ಮಂದಿ ಶಸ್ತ್ರಸಜ್ಜಿತ ದರೋಡೆಕೋರರು ಅಡುಗೆ ಮನೆಯ ಕಿಟಕಿಯ ಮೂಲಕ ಆ ಮನೆಗೆ ನುಗ್ಗಿದರು.

    ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಚೀನಾ ಬಾಲ ಬಿಚ್ಚುವ ಸಾಧ್ಯತೆ; ಯುದ್ಧನೌಕೆಗಳನ್ನು ನಿಯೋಜಿಸಿದ ನೌಕಾಪಡೆ

    ಮನೆಯಲ್ಲಿ ಶಬ್ದ ಕೇಳಿ ಎಚ್ಚರಗೊಂಡ ಶರ್ಮಾ ಮಗಳು ಪ್ರಿಯಾ ಭಯಾನಕ ಮಾಸ್ಕ್ ಧಾರಿಗಳಾಗಿದ್ದ ಅವರೆಲ್ಲರನ್ನು ನೋಡಿ ಕಿರುಚಲಾರಂಭಿಸಿದಳು. ಆಗ ದರೋಡೆಕೋರರು ತಾವು ಸರ್ಕಾರಿ ನೌಕರರು ಮತ್ತು ಕೋವಿಡ್ -19 ಪರೀಕ್ಷೆ ನಡೆಸಲು ಮನೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ನಂತರ ಆಕೆ ಅವರ ಬಂದೂಕನ್ನು ನೋಡಿ ಮತ್ತಷ್ಟು ಭಯಭೀತಳಾಗಿ ಕೋಣೆಗೆ ಓಡಿಹೋದಳು, ಶಸ್ತ್ರಸಜ್ಜಿತ ಹಲ್ಲೆಕೋರರು ಆಕೆಯನ್ನು ಹಿಂಬಾಲಿಸಿದರಲ್ಲದೆ ಆಕೆಯ ಎಂಟು ತಿಂಗಳ ಮಗನನ್ನು ಕಸಿದುಕೊಂಡರು.
    ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಶರ್ಮಾ ಮತ್ತು ಪ್ರಿಯಾಳ ಗಂಡ ಆ ಗದ್ದಲ ಕೇಳಿ ಎದ್ದು ಪ್ರಿಯಾಳ ಕೋಣೆಗೆ ಧಾವಿಸಿದರು. ಆ ಸಂದರ್ಭದಲ್ಲಿ ದರೋಡೆಕೋರರು ಶರ್ಮಾಗೆ ಹೊಡೆಯಲಾರಂಭಿಸಿದಲ್ಲದೆ ಮಗುವಿಗೆ ಚಾಕು ತುದಿ ಹಿಡಿದಿದ್ದರು ಎಂದು ಆಕೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾಳೆ.

    ಇದನ್ನೂ ಓದಿ:  ಇದು ನಾಯಿಜಗಳವಲ್ಲ.. ನಾಯಿಗಾಗಿ ನಡೆದ ಜಗಳ: ಶ್ವಾನಕ್ಕಾಗಿ ಶುರುವಾದ ವಾಗ್ವಾದ ಸಾವಿನಲ್ಲಿ ಅಂತ್ಯ

    ಅವರಲ್ಲಿ ಒಬ್ಬ ಕೋಣೆಯಲ್ಲಿ ಗುಂಡು ಹಾರಿಸಿದ. ತನ್ನ ಮಗುವನ್ನು ಹಿಂತಿರುಗಿಸುವಂತೆ ಆಕೆ ದರೋಡೆಕೋರರಿಗೆ ಗೋಗರೆದರೂ ಅವರು ಅವಳ ಮೇಲೆ ಹಲ್ಲೆ ನಡೆಸಿದರು. ಶರ್ಮಾನನ್ನು ಹೊರತುಪಡಿಸಿ ಕುಟುಂಬದವರನ್ನು ಸ್ನಾನಗೃಹದೊಳಗೆ ಬೀಗ ಹಾಕಿದ್ದರು. ಶರ್ಮಾನನ್ನು ಹಾಸಿಗೆಯ ಮೇಲೆ ಕಟ್ಟಿಹಾಕಿದ್ದಾರೆಂದು ಆರೋಪಿಸಲಾಗಿದೆ.
    ಬೆಳಗ್ಗೆ 4 ಗಂಟೆಗೆ ಅವರು ಒಂದು ಲಕ್ಷ ರೂ.ನಗದು ಮತ್ತು ಲಕ್ಷ ಮೌಲ್ಯದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
    ಪ್ರಕರಣ ದಾಖಲಿಸಲಾಗಿದ್ದು, ಶಂಕಿತರನ್ನು ಬಂಧಿಸಲು ಪೊಲೀಸರ ತಂಡ ರಚಿಸಲಾಗಿದೆ. ಅದಲ್ಲದೆ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವುದಾಗಿ ಘಜಿಯಾಬಾದ್ ಹಿರಿಯ ಪೊಲೀಸ್ ಅಧೀಕ್ಷಕ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

    ಶಾಕಿಂಗ್ ನ್ಯೂಸ್…! ದೃಷ್ಟಿಹೀನ ಮಗನನ್ನು ಬಲಿಪಡೆದು ತಾನೂ ಸಮಾಧಿ ಸೇರಿದ ಮಹಾತಾಯಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts