More

    ರಸ್ತೆಗೆ ಕಲ್ಲು ಬಂಡೆ ಹಾಕಿದ ಗ್ರಾಮಸ್ಥರು

    ಕೊಡೇಕಲ್: ಕರೊನಾ ವೈರಸ್ ಭೀತಿಯಿಂದಾಗಿ ಹುಣಸಗಿ ತಾಲೂಕಿನ ಜೋಗುಂಡಭಾವಿ ಗ್ರಾಮದ ಹಿರಿಯರು ಗ್ರಾಮ ಪ್ರವೇಶಿಸುವ ಪ್ರಮುಖ ರಸ್ತೆಗಳಿಗೆ ಅಡ್ಡಲಾಗಿ ಕಲ್ಲು ಬಂಡೆ ಹಾಕಿ ರಸ್ತೆ ಬಂದ್ ಮಾಡಿದ್ದಾರೆ.

    ಗ್ರಾಮದಲ್ಲಿ ಜನ ಜಂಗುಳಿಗೆ ಆಸ್ಪದ ಕೊಡದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ ಹಾಗೂ ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗ್ರತ ಕ್ರಮಗಳ ಪಾಲನೆಯನ್ನು ಮಾಡಲಾಗುತ್ತಿದೆ ಮತ್ತು ಸಾಂಕ್ರಾಮಿಕವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹಬ್ಬುವ ರೋಗವಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇತರೆಡೆಯಿಂದ ಆಗಮಿಸುವ, ಗ್ರಾಮದವರಲ್ಲದವರು, ಅಪರಿಚಿತರು ಗ್ರಾಮ ಪ್ರವೇಶಿಸದಂತೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ಅಡ್ಡಲಾಗಿ ಬಂಡೆಗಲ್ಲುಗಳು, ಮುಳ್ಳು ಕಂಠಿಗಳನ್ನು ಇರಿಸಿ ರಸ್ತೆ ಬಂದ್ ಮಾಡಲಾಗಿದ್ದು, ಇದಕ್ಕೆ ಗ್ರಾಮದ ಹಿರಿಯರ ಸಮ್ಮುಖದಲ್ಲೆ ಗ್ರಾಮ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಕನರ್ಾಟಕ ನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಮಾಮನಿ ತಿಳಿಸಿದ್ದಾರೆ.

    ಒಂದೊಮ್ಮೆ ಗ್ರಾಮದಲ್ಲಿ ಇರುವ ರೋಗಿಗಳು, ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆಗೆ ಬೇರೆಡೆ ಸಾಗಿಸಲು ರಸ್ತೆ ಮೇಲಿನ ಬಂಡೆಗಲ್ಲು ತೆರುವುಗೊಳಿಸಿ ದಾರಿ ಮಾಡಿಕೊಡಲಾಗುವದು ಎಂದು ತಿಳಿಸಿದ್ದಾರೆ.

    ಗದ್ದೆಪ್ಪ ಪೂಜಾರಿ, ನಾಗಯ್ಯ ಹಿರೇಮಠ, ಸೋಮಣ್ಣ ಮಾಮನಿ, ಅಚ್ಚಪ್ಪ ಗೌಡ್ರು, ನಾಗಪ್ಪ ಕುಂಬಾರ, ಯಮನಪ್ಪ ಸರೂರ, ದ್ಯಾಮಣ್ಣ ಗಡ್ಡಿ, ಬಾಲಪ್ಪ ಹಳ್ಳಿ, ಗುಂಡಪ್ಪ ಕುಂಬಾರ, ಗೌಡಪ್ಪ ಮಾಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts