More

    ಮೆಟ್ರೋ ಕಾಮಗಾರಿ, ಮೈಕೋ ಬಂಡೆ ಸಿಗ್ನಲ್- ಆನೇಪಾಳ್ಯವರೆಗೆ 1 ವರ್ಷ ರಸ್ತೆ ಬಂದ್

    ಬೆಂಗಳೂರು: ಬನ್ನೇರುಘಟ್ಟ ಮುಖ್ಯರಸ್ತೆ ಲಕ್ಕಸಂದ್ರ ಮೆಟ್ರೋ ನಿಲ್ದಾಣ ಕಾಮಗಾರಿ ಹಿನ್ನೆಲೆಯಲ್ಲಿ ಮೈಕೋ ಬಂಡೆ ಸಿಗ್ನಲ್‌ನಿಂದ ಆನೇಪಾಳ್ಯ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಶುಕ್ರವಾರದಿಂದಲೇ ವಾಹನ ಸಂಚಾರವನ್ನು ನಿರ್ಬಂಧಿಸಿರುವ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.

    ಡೇರಿ ಸರ್ಕಲ್ ಕಡೆಯಿಂದ ಆನೇಪಾಳ್ಯ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಮೈಕೋ ಬಂಡೆ ಸಿಗ್ನಲ್‌ನಲ್ಲಿ ಬಲ ತಿರುವು ಪಡೆದು ನ್ಯೂ ಮೈಕೋ ಲಿಂಕ್ ರಸ್ತೆ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡತಿರುವು ಪಡೆದು ಆನೇಪಾಳ್ಯ ಜಂಕ್ಷನ್ ತಲುಪಬಹುದು. ಆನೇಪಾಳ್ಯ ಜಂಕ್ಷನ್‌ನಿಂದ ಡೇರಿ ಸರ್ಕಲ್ ಕಡೆಗೆ ಚಲಿಸುವ ವಾಹನಗಳು ಮೊದಲಿನಂತೆಯೇ ಆನೇಪಾಳ್ಯ ಜಂಕ್ಷನ್ ಕಡೆಯಿಂದ ಡೇರಿ ಸರ್ಕಲ್ ಕಡೆಗೆ ಸಾಗಬಹುದು.

    ಡೇರಿ ಸರ್ಕಲ್ ಮತ್ತು ಮೈಕೋ ಬಂಡೆ ಸಿಗ್ನಲ್ ಕಡೆಯಿಂದ ವಿಲ್ಸನ್ ಗಾರ್ಡನ್, ಶಾಂತಿನಗರ ಕಡೆಗೆ ಸಂಚರಿಸುವ ವಾಹನಗಳು ಮೈಕೋ ಬಂಡೆ ಸಿಗ್ನಲ್ ದಾಟಿ ವಿಲ್ಸನ್ ಗಾರ್ಡನ್ 7ನೇ ಮುಖ್ಯರಸ್ತೆಯಲ್ಲಿ (ಚಿನ್ನಯ್ಯನಪಾಳ್ಯ ಕ್ರಾಸ್) ಎಡ ತಿರುವು ಪಡೆದು ಲ್ಸನ್ ಗಾರ್ಡನ್ ಶಾಂತಿನಗರ ಕಡೆಗೆ ಸಂಚರಿಸಲು ಟ್ರಾಫಿಕ್ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts