More

    ವಾಹನ ಸಂಚಾರ ತಾತ್ಕಾಲಿಕ ಬದಲಾವಣೆ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
    ಕೊಡಿಯಾಲ್‌ಬೈಲ್ ಶಾರದಾ ಸ್ಕೂಲ್ ರಸ್ತೆಯಲ್ಲಿ ಅ.16ರಿಂದ 30ರವರೆಗೆ, ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಅ.31ರಿಂದ ನ.15ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

    ಶಾರದಾ ಸ್ಕೂಲ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಿವಿಎಸ್ ಜಂಕ್ಷನ್‌ನಿಂದ ಮುಂದುವರೆದು ಬೆಸೆಂಟ್ ಜಂಕ್ಷನ್ ಆಗಿ ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಚಲಿಸಬೇಕು. ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಕಾಮಗಾರಿ ನಡೆಯುವ ವೇಳೆ ಶಾರದಾ ಸ್ಕೂಲ್ನಿಂದಾಗಿ ಬೆಸೆಂಟ್ ಜಂಕ್ಷನ್ ಕಡೆಗೆ ಚಲಿಸುವುದು. ಈ ರಸ್ತೆಯ ಆಸುಪಾಸಿನಲ್ಲಿರುವ ಮನೆಯವರು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಬಳಿಯಿರುವ ಒಳ ರಸ್ತೆಯಿಂದ ಸಂಚರಿಸುವಂತೆ ತಿಳಿಸಲಾಗಿದೆ.

    ಯೆಯ್ಯಾಡಿ-ದಂಡಕೇರಿ ರಸ್ತೆ: ಯೆಯ್ಯಾಡಿ ದಂಡಕೇರಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಅ.16ರಿಂದ ನ.29ರವರೆಗೆ ಯೆಯ್ಯಾಡಿ-ಕುಂಟಲ್ಪಾಡಿ-ಶಕ್ತಿನಗರ ಕೂಡು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕುಂಟಲ್ಪಾಡಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ವೇಳೆ ಯೆಯ್ಯಾಡಿ ಜಂಕ್ಷನ್‌ನಿಂದ-ದಂಡಕೇರಿ(ಕುಂಟಲ್ಪಾಡಿ) ರಸ್ತೆಯಾಗಿ ಶಕ್ತಿನಗರ ಕಡೆಗೆ ಸಂಚರಿಸುವ ವಾಹನಗಳು ಕಾಮಗಾರಿ ನಡೆಯುವ ಸ್ಥಳದ ಬಳಿ ಬಂದು ಬಲಕ್ಕೆ ತಿರುಗಿ ಕಾಂಕ್ರೀಟ್ ರಸ್ತೆಯಲ್ಲಿ ಮುಂದೆ ಸಾಗಿ ಈಡನ್ ಕ್ಲಬ್-ನಂತೂರು ಮಾರ್ಗವಾಗಿ ಸಂಚರಿಸುವುದು.

    ಯೆಯ್ಯಾಡಿ ಜಂಕ್ಷನ್‌ನಿಂದ ದಂಡಕೇರಿ(ಕುಂಟಲ್ಪಾಡಿ) ರಸ್ತೆಯಾಗಿ ಶಕ್ತಿನಗರ ಕಡೆಗೆ ಸಂಚರಿಸುವ ವಾಹನಗಳು ಕೆಪಿಟಿ-ನಂತೂರು ಮಾರ್ಗವಾಗಿ ಬಿಕರ್ನಕಟ್ಟೆ ಕ್ರಾಸ್ ರಸ್ತೆಯಾಗಿ ಶಕ್ತಿನಗರ ಕಡೆಗೆ ಸಂಚರಿಸುವುದು. ಶಕ್ತಿನಗರದಿಂದ ಕುಂಟಲ್ಪಾಡಿ ರಸ್ತೆ ಮೂಲಕ ಯೆಯ್ಯಾಡಿ ಕಡೆಗೆ ಹೋಗುವ ವಾಹನಗಳು ಸೂರ್ಯ ನಗರದ ಮೂಲಕ ಮೇರಿಹಿಲ್-ಗುರುನಗರಕ್ಕೆ ಬಂದು ಅಲ್ಲಿಂದ ಮುಂದೆ ಸಂಚರಿಸುವುದು.
    ಶಕ್ತಿನಗರದಿಂದ ಯೆಯ್ಯಾಡಿ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ ಕ್ರಾಸ್‌ಗೆ ಬಂದು ನಂತೂರು-ಕೆಪಿಟಿ ಮಾರ್ಗವಾಗಿ ಯೆಯ್ಯಾಡಿ ಕಡೆಗೆ ಸಂಚರಿಸುವಂತೆ ಸೂಚಿಸಲಾಗಿದೆ.

    ಸುರತ್ಕಲ್ ಸರ್ವಿಸ್ ರಸ್ತೆ: ಸುರತ್ಕಲ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-66ರ ಬದಿಯ ಸರ್ವಿಸ್ ರಸ್ತೆಯಲ್ಲಿ ಒಳಚರಂಡಿ ಕೊಳವೆ ಅಳವಡಿಸುವ ಸಮಯ ಅ.16ರಿಂದ 31ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಸುರತ್ಕಲ್ ಜಂಕ್ಷನ್ ಕಡೆಯಿಂದ ಗೋವಿಂದದಾಸ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುರತ್ಕಲ್ ಜಂಕ್ಷನ್‌ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದು.ಗೋವಿಂದದಾಸ
    ಕಡೆಯಿಂದ ಸುರತ್ಕಲ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಕಡೆಯಿಂದ ಸುರತ್ಕಲ್ ಮಾರ್ಕೆಟ್ ರಸ್ತೆಯಾಗಿ ಸುರತ್ಕಲ್ ಜಂಕ್ಷನ್ ಹಾಗೂ ಚೊಕ್ಕಬೆಟ್ಟು ಕಾಟಿಪಳ್ಳ ಕಡೆಗೆ ಸಂಚರಿಸುವುದು.
    ಸುರತ್ಕಲ್ ಮಾರ್ಕೆಟ್ ಕಡೆಯಿಂದ ಗೋವಿಂದದಾಸ ಕಡೆಗೆ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದೆ. ಸುರತ್ಕಲ್ ಮಾರ್ಕೆಟ್ ಒಳರಸ್ತೆಯಾಗಿ ಸರ್ವಿಸ್ ರಸ್ತೆಗೆ ಪ್ರವೇಶ ಸಂಪೂರ್ಣ ನಿಷೇಧಿಸಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts