More

    ಶ್ರಿಮಂತೆಯಾದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆ, ಕೊಲೆಯಾಗಿದ್ದು ಏಕೆ?

    ಮುಂಬೈ: ಆಸ್ತಿಯ ಒಡೆತನಕ್ಕಾಗಿ ನಿರಂತರವಾಗಿ ಅತ್ತೆ ಮತ್ತು ಸೊಸೆ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ, ಇಲ್ಲಿ ಕೊಲೆಯಾದಾಕೆ 70 ವರ್ಷದ ಮಹಿಳೆ ಶ್ರೀಮಂತೆಯಾಗಿದ್ದರೂ ಭಿಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡಿದ್ದಳು ಎಂಬುದು ಅಚ್ಚರಿಯ ಸಂಗತಿ. ಆಸ್ತಿಗಾಗಿ ಸೊಸೆಯೇ ಈಕೆಯನ್ನು ಕೊಂದಿದ್ದಾಳೆ ಎಂಬುದು ಈ ಕತೆಗೊಂದು ಟ್ವಿಸ್ಟ್​.

    ಮುಂಬೈನ ಪ್ರತಿಷ್ಠಿತ ಚೆಂಬೂರ್​ನ ಪೆಸ್ಟಂ ಸಾಗರ್​ ಕಾಲನಿಯ ನಿವಾಸಿ ಸಂಜನಾ ಪಾಟೀಲ್​ (70) ಕೊಲೆಯಾದಾಕೆ. ಈಕೆಯ ಸೊಸೆ ಅಂಜನಾ ದಿನೇಶ್​ ಪಾಟೀಲ್​ ಕೊಲೆಗಾರ್ತಿ. ಸಂಜನಾ ಪಾಟೀಲ್​ ಅವರ ದತ್ತುಪುತ್ರ ದಿನೇಶ್​ ಪಾಟೀಲ್​ನ ಪತ್ನಿ ಈಕೆ. ಶೌಚಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವುದಾಗಿ ಹೇಳಿ ಕಳೆದ ಸೋಮವಾರ ಸಂಜನಾಳನ್ನು ರಾಜವಾಡಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಕೆಯನ್ನು ಪರಿಶೀಲಿಸಿದಾಗ ಆಕೆಯ ಕತ್ತಿನ ಮೇಲೆ ವೈಯರ್​ನಿಂದ ಜೀರಿದ ಗುರುತುಗಳು ಸೇರಿ 14ಕ್ಕೂ ಹೆಚ್ಚು ಗಾಯಗಳಿದ್ದ ಕಾರಣ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಇದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಅತ್ತೆ ಮತ್ತು ಸೊಸೆ ನಡುವೆ ಸೋಮವಾರ ಬೆಳಗ್ಗೆ ಜಗಳವಾಗಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ಇದನ್ನು ಆಧರಿಸಿ ಅಂಜನಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಹತಳಾದ ಮಹಿಳೆಯ ಆಸ್ತಿ ಎಷ್ಟಿತ್ತು?: ಹತಳಾದ ಸಂಜನಾ ಶ್ರೀಮಂತಳಾಗಿದ್ದು, ನಾಲ್ಕು ಫ್ಲ್ಯಾಟ್​ಗಳ ಒಡತಿಯಾಗಿದ್ದ ಆಕೆ ಅವನ್ನು ಬಾಡಿಗೆಗೆ ಕೊಟ್ಟಿದ್ದಳು. ಆದರೂ ಘಾಟ್ಕೋಪರ್​ ಬಡಾವಣೆಯಲ್ಲಿರುವ ಜೈನ ದೇವಸ್ಥಾನದ ಎದುರು ಭಿಕ್ಷೆ ಬೇಡುವುದನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಳು. ಈಕೆಯ ಗಂಡ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದ. ತಮ್ಮಿಬ್ಬರ ದಾಂಪತ್ಯಕ್ಕೆ ಮಕ್ಕಳಾಗದ ಕಾರಣ ದಿನೇಶ್​ನನ್ನು ಸಂಜನಾ ದತ್ತು ತೆಗೆದುಕೊಂಡಿದ್ದಳು.

    ಇದನ್ನೂ ಓದಿ: ವೆಂಟಿಲೇಟರ್ ಖರೀದಿ ಅಕ್ರಮ ತನಿಖೆಯಾಗಲಿ; ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯ

    ದಿನೇಶ್​ಗೆ ಅಂಜನಾಳ ಜತೆ ಮದುವೆಯನ್ನೂ ಮಾಡಿಸಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಂಸಾರ ಸುಖಮಯವಾಗಿ ಸಾಗುತ್ತಿದ್ದರೂ ಸಂಜನಾ ಮಾತ್ರ ಜೈನ ದೇವಸ್ಥಾನದ ಬಳಿ ಭಿಕ್ಷೆ ಬೇಡುವುದನ್ನು ನಿಲ್ಲಿಸಿರಲಿಲ್ಲ. ಭಿಕ್ಷೆ ಬೇಡಿ ತಂದ ಹಣವನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಬಚ್ಚಿಟ್ಟು, ಕದ್ದಿರುವುದಾಗಿ ಅಂಜನಾ ಜತೆ ದಿನವೂ ಜಗಳ ತೆಗೆಯುತ್ತಿದ್ದಳು ಎನ್ನಲಾಗಿದೆ.

    ಸೋಮವಾರ ಬೆಳಗ್ಗೆ ಕೂಡ ಸಂಜನಾ ಭಿಕ್ಷೆಯ ಹಣವನ್ನು ಬಚ್ಚಿಟ್ಟು ಅಂಜನಾಳನ್ನು ನಿಂದಿಸಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಾದ ಆಕೆ ಮನೆಯಲ್ಲಿದ್ದ ಕ್ರಿಕೆಟ್​ ಬ್ಯಾಟ್​ನಿಂದ ಅತ್ತೆಯ ಮೇಲೆ ಮನಸೋಇಚ್ಛೆ ದಾಳಿ ಮಾಡಿದ್ದಳು. ಇಷ್ಟಾದರೂ ಆಕೆ ಸಾಯದಿದ್ದಾಗ ತನ್ನ ಒಳ ಉಡುಪಿನ ಲಾಡಿಯಿಂದ ಆಕೆಯ ಕತ್ತು ಜೀರಲು ಯತ್ನಿಸಿದ್ದಳು. ಆದರೆ ಅದು ತುಂಡಾಗಿದ್ದರಿಂದ, ಮೊಬೈಲ್​ ಚಾರ್ಜರ್​ ವೈರ್​ನಿಂದ ಜೀರಿ ಆಕೆಯನ್ನು ಸಾಯಿಸಿದ್ದಳು.

    ಕೊನೆಗೆ ಶೌಚಗೃಹದಲ್ಲಿ ಬಿದ್ದು ಗಾಯಗೊಂಡಿರುವುದಾಗಿ ಹೇಳಿ ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದಳು. ವೈದ್ಯರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದಾಗ, ಅಂಜನಾಳ ಕೊನೆಯ ಪುತ್ರಿ ತನ್ನ ತಾಯಿ ಮತ್ತು ಅಜ್ಜಿ ನಡುವೆ ಜಗಳವಾಗಿದ್ದ ಸಂಗತಿಯನ್ನು ತಿಳಿಸಿದ್ದಳು. ಇದನ್ನು ಆಧರಿಸಿ ಪೊಲೀಸರು ಅಂಜನಾಳನ್ನು ವಶಕ್ಕೆ ಪಡೆದಾಗ ಕೊಲೆ ಪ್ರಕರಣ ಬಹಿರಂಗವಾಗಿದೆ. ಅಂಜನಾಳನ್ನು ಪರಿಶೀಲಿಸಿದಾಗ ತನ್ನ ಅತ್ತೆಯ ಒಡವೆಗಳನ್ನು ಆಕೆ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದು ಪತ್ತೆಯಾಗಿದ್ದಾಗಿ ಪೊಲೀಸರು ಹೇಳಿದ್ದಾರೆ.

    ಪತಂಜಲಿ ಕರೊನಾ ಔಷಧಕ್ಕೆ ಮತ್ತೊಂದು ಸಂಕಟ, ಬ್ರ್ಯಾಂಡ್​ ನೇಮ್​ ಬಳಕೆಗೆ ಹೈಕೋರ್ಟ್​ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts