More

    ಸಮಾಜಕ್ಕೆ ಹೆದರಲ್ಲ, ಯಾರಿಗೂ ಬಗ್ಗಲ್ಲ! ಆರ್​ಜಿವಿ ನಾಯಕಿಯ ಶಾಕಿಂಗ್​ ಹೇಳಿಕೆ…

    ಬೆಂಗಳೂರು: ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಆಕ್ಷನ್​ ಕಟ್​ ಹೇಳಿರುವ ‘ಲಡ್ಕೀ’ ಚಿತ್ರ ಕನ್ನಡದಲ್ಲಿ ‘ಹುಡುಗಿ’ ಎಂಬ ಶೀರ್ಷಿಕೆಯಲ್ಲಿ ರಿಲೀಸ್​ ಆಗಲಿದೆ. ಹೀಗಾಗಿಯೇ ಚಿತ್ರದ ಪ್ರಚಾರಕ್ಕಾಗಿ ನಿರ್ದೇಶಕ ಆರ್​ಜಿವಿ ಮತ್ತು ನಾಯಕಿ ಪೂಜಾ ಭಾಲೇಕರ್​ ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಟಿ ಪೂಜಾ ಚಿತ್ರದಾದ್ಯಂತ ಬಿಕಿನಿ ಹಾಗೂ ತುಂಡುಡುಗೆ ಧರಿಸಿರುವ ಬಗ್ಗೆ ಹಾಗೂ ಚುಡಾಯಿಸಿದ ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಹೋದ ಬಗ್ಗೆ ಹೇಳಿಕೊಂಡರು.

    ಇದನ್ನೂ ಓದಿ :ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

    ಸಮಾಜಕ್ಕೆ ಹೆದರಲ್ಲ, ಯಾರಿಗೂ ಬಗ್ಗಲ್ಲ! ಆರ್​ಜಿವಿ ನಾಯಕಿಯ ಶಾಕಿಂಗ್​ ಹೇಳಿಕೆ…
    ಲಡ್ಕೀ ಚಿತ್ರದ ಪೋಸ್ಟರ್​

    ಇನ್ನು ‘ಲಡ್ಕಿ’ ಚಿತ್ರದ ಹಾಡು, ಟ್ರೈಲರ್‌ಗಳಲ್ಲಿ ಹೆಚ್ಚಾಗಿ ಕಡಿಮೆ ಬಟ್ಟೆಯಲ್ಲೇ ಕಾಣಿಸಿಕೊಂಡಿರುವ ಕುರಿತೂ ಸಮರ್ಥಿಸಿಕೊಳ್ಳುವ ಪೂಜಾ, ‘ಕಡಿಮೆ ಬಟ್ಟೆ ಹಾಕಿಕೊಂಡಿರುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೇಯಿಲ್ಲ. ಏನು ಧರಿಸಬೇಕು ಅಂತಲೂ ಗಮನ ಹರಿಸಲಿಲ್ಲ. ಆಕ್ಷನ್ ಮಾಡುವಾಗ ಸೀರೆ, ಬಿಕಿನಿ ಅಥವಾ ಜೀನ್ಸ್ ಯಾವ ರೀತಿಯ ಉಡುಗೆ ಧರಿಸಬೇಕು ಎಂಬುದರ ಡಿಸ್ಕಷನ್ ಮಾಡಿದ್ದೆವು. ಹೀಗಾಗಿಯೇ ಚಿತ್ರದಲ್ಲೂ ಎಲ್ಲ ಬಗೆಯ ಉಡುಗೆಗಳನ್ನೂ ಹಾಕಿದ್ದೇನೆ. ಬಿಕಿನಿಯಲ್ಲಿ ೈಟ್ ಮಾಡುವ ಐಡಿಯಾ ಬಗ್ಗೆ ಆರ್‌ಜಿವಿ ಸರ್ ಹೇಳಿದ್ದರು. ನಾಯಕಿಯರು ಬಿಕಿನಿಯಲ್ಲಿ ಸ್ವಿಮಿಂಗ್ ಪೂಲ್‌ನಿಂದ ಎದ್ದುಬಂದು ಪೋಸ್ ಕೊಟ್ಟಿರುವುದನ್ನು ನೋಡಿದ್ದೇವೆ. ಆದರೆ ಬಿಕಿನಿಯಲ್ಲಿ ಫೈಟ್ ಮಾಡಿರುವುದನ್ನು ನೋಡಿರುವುದಿಲ್ಲ ಅಂತ ನನಗೂ ಅನ್ನಿಸಿತು. ಆಯ್ತು ಮಾಡೋಣ ಅಂತ ಒಪ್ಪಿದೆ. ತೆರೆಯ ಮೇಲೆ ಅಂದವಾಗಿ ಕಾಣಿಸಬೇಕು ಅಂತ ವರ್ಕೌಟ್ ಮಾಡತೊಡಗಿದೆ. ಆಕ್ಷನ್ ಹೀರೋಗಳು ಟೀಶರ್ಟ್ ತೆಗೆದು ಆಬ್ಸ್ ತೋರಿಸುತ್ತಾರೆ. ಆದರೆ ಅದೇ ರೀತಿ ಹೆಣ್ಣುಮಕ್ಕಳು ಮಾಡಿದರೆ ಪ್ರಶ್ನೆಗಳು ಎದುರಾಗುತ್ತವೆ. ಬೋಲ್ಡ್, ಸೆಕ್ಸಿ ಅಂತಾರೆ. ನಮಗೂ ಫ್ರೀಡಂ ಕೊಡಬೇಕು. ನಾನು ಯಾವ ರೀತಿ ಬಟ್ಟೆ ಧರಿಸುತ್ತೇನೆ, ಯಾವ ಬಗೆಯ ಸಿನಿಮಾಗಳಲ್ಲಿ ಹೇಗೆ ನಟಿಸುತ್ತೇನೆ ಅಂತ ಸಮಾಜ ಏನನ್ನುತ್ತೆ ಎಂಬುದರ ಬಗ್ಗೆ ನಾನು ಕೇರ್ ಮಾಡುವುದಿಲ್ಲ. ನನ್ನ ಮನಸ್ಸು ಏನೇಳುತ್ತೋ ಅದನ್ನೇ ನಾನು ಮಾಡುತ್ತೇನೆ’ ಎನ್ನುತ್ತಾರೆ ಪೂಜಾ ಭಾಲೇಕರ್.


    ಇದನ್ನೂ ಓದಿ :60ರ ದಶಕದ ನಟಿಯಾದ ಜಾಕ್​ಲೀನ್; ಪ್ರಿಯಾ ರಾಜ್​ವಂಶ್ ಬಯೋಪಿಕ್​ನಲ್ಲಿ ನಟನೆ

    ಸಮಾಜಕ್ಕೆ ಹೆದರಲ್ಲ, ಯಾರಿಗೂ ಬಗ್ಗಲ್ಲ! ಆರ್​ಜಿವಿ ನಾಯಕಿಯ ಶಾಕಿಂಗ್​ ಹೇಳಿಕೆ…
    ಲಡ್ಕೀ ಚಿತ್ರದ ನಾಯಕಿ ಪೂಜಾ ಭಾಲೇಕರ್​

    ಛೇಡಿಸಿದವನನ್ನು ಅಟ್ಟಿಸಿಕೊಂಡು ಓಡಿದ್ದೆ!

    ನಿಜ ಜೀವನದಲ್ಲಿ ಯಾರಿಗಾದರೂ ಹೊಡೆದಿದ್ದೀರಾ ಎಂದು ಕೇಳಿದರೆ? ಇಲ್ಲ ಎನ್ನುತ್ತಾರೆ ಪೂಜಾ. ಆದರೆ, ‘ನಾನು ಅಮ್ಮನ ಜೊತೆಯಲ್ಲಿ ಹೊರಗೆ ಹೋಗಿದ್ದೆ. ಆಗ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ನನ್ನ ಅಮ್ಮನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ. ನಾನು ಅವನನ್ನು ಅಟ್ಟಿಸಿಕೊಂಡು ಓಡಿದೆ, ಇನ್ನೇನು ಹಿಡಿದೆ ಎನ್ನುತ್ತಿರುವಾಗಲೇ ತಪ್ಪಿಸಿಕೊಂಡುಬಿಟ್ಟೆ. ಅವನು ಸಿಕ್ಕಬೇಕಿದ್ದು ಅಂತ ಈಗಲೂ ಅನ್ನಿಸುತ್ತದೆ’ ಎನ್ನುತ್ತಾರೆ. ಹಾಗೆಯೇ ಇವತ್ತು ಮಹಿಳೆಯರಲ್ಲಿ ಸೆಲ್ಫ ಡಿೆನ್ಸ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯಿದೆ ಎಂದೂ ಹೇಳುತ್ತಾರೆ. ‘ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ. ಹೀಗಾಗಿ ಜಾಗೃತಿ ಮೂಡಬೇಕು. ಸಮರಕಲೆ ಅಥವಾ ಸೆಲ್ಫ ಡಿೆನ್ಸ್ ಮಾತ್ರವಲ್ಲ, ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸುವಷ್ಟು ಗಟ್ಟಿಯಾಗಬೇಕು’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts