More

    ಪರಿಷ್ಕೃತ ಮತದಾರರ ಪಟ್ಟಿ ಪ್ರಕಟ

    ರಾಯಚೂರು: ಮತದಾರರ ವಿಶೇಷ ನೋಂದಣಿ ಅಭಿಯಾನದ ನಂತರ ಪರಿಷ್ಕರಣೆ ಮಾಡಲಾದ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಹೇಳಿದರು.
    ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ಜಿಲ್ಲೆಯಲ್ಲಿ 8.11 ಲಕ್ಷ ಪುರುಷ ಮತ್ತು 8.35 ಲಕ್ಷ ಮಹಿಳಾ ಮತದಾರರು ಸೇರಿದಂತೆ ಒಟ್ಟು 16.46 ಲಕ್ಷ ಮತದಾರರಿದ್ದಾರೆ ಎಂದರು.
    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 2.30 ಲಕ್ಷ, ರಾಯಚೂರು ನಗರ ಕ್ಷೇತ್ರದಲ್ಲಿ 2.36 ಲಕ್ಷ, ಮಾನ್ವಿ ಕ್ಷೇತ್ರದಲ್ಲಿ 2.35 ಲಕ್ಷ, ದೇವದುರ್ಗ ಕ್ಷೇತ್ರದಲ್ಲಿ 2.34 ಲಕ್ಷ, ಲಿಂಗಸುಗೂರು ಕ್ಷೇತ್ರದಲ್ಲಿ 2.57 ಲಕ್ಷ, ಸಿಂಧನೂರು ಕ್ಷೇತ್ರದಲ್ಲಿ 2.40 ಲಕ್ಷ, ಮಸ್ಕಿ ಕ್ಷೇತ್ರದಲ್ಲಿ 2.10 ಲಕ್ಷ ಮತದಾರರಿದ್ದಾರೆ.
    ಏಳು ಕ್ಷೇತ್ರದಲ್ಲಿ 18 ರಿಂದ 19 ವಯಸ್ಸಿನ 40,453 ಮತದಾರರು, 20 ರಿಂದ 29 ವಯಸ್ಸಿನ 3,82,635 ಮತದಾರರು, 30 ರಿಂದ 39 ವಯಸ್ಸಿನ 4,54,348 ಮತದಾರರು, 30 ರಿಂದ 49 ವಯಸ್ಸಿನ 1,08,367 ಮತದಾರರು, 50 ರಿಂದ 59 ವಯಸ್ಸಿನ 2,27,091 ಮತದಾರರು, 60 ರಿಂದ 69 ವಯಸ್ಸಿನ 1,39,249 ಮತದಾರರು, 80 ರಿಂದ 89 ವಯಸ್ಸಿನ 1,99,711 ಮತದಾರರು, 90 ರಿಂದ 99 ವಯಸ್ಸಿನ 3,819 ಮತದಾರರು, 100 ರಿಂದ 109 ವಯಸ್ಸಿನ 336 ಹಾಗೂ 120ಕ್ಕಿಂತ ಹೆಚ್ಚಿನ ವಯಸ್ಸಿನ 3 ಮತದಾರರಿದ್ದಾರೆ.
    ಜಿಲ್ಲೆಯಲ್ಲಿ ಒಟ್ಟು 1,840 ಮತದಾನ ಕೇಂದ್ರಗಳಿಗೆ ಚುನಾವಣೆ ಆಯೋಗದಿಂದ ಅನುಮೋದನೆ ನೀಡಲಾಗಿದ್ದು, ಹೆಚ್ಚುವರಿಯಾಗಿ 13 ಮತದಾನ ಕೇಂದ್ರಗಳನ್ನು ಸ್ಥಾಪಿಸಿ ಏಳು ಕ್ಷೇತ್ರಗಳಲ್ಲಿ ಒಟ್ಟು 1,853 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಡಾ.ಕೆ.ಆರ್.ದುರಗೇಶ ತಿಳಿಸಿದರು.
    ಸಭೆಯಲ್ಲಿ ಚುನಾವಣೆ ಆಯೋಗದ ಅಕಾರಿಗಳಾದ ರಿಷಿಕೇಶ, ರಮೇಶ ಹಾಗೂ ರಾಜಕೀಯ ಪಕ್ಷಗಳ ಮುಖಂಡರಾದ ಕೆ.ತಿರುಮಲರೆಡ್ಡಿ, ರವಿಕುಮಾರ, ವಿ.ಎಸ್.ಯಲ್ಲಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts