More

    5,8,9ನೇ ತರಗತಿ ಮೌಲ್ಯಂಕನ ಪರೀಕ್ಷೆಗೆ ಪರಿಷ್ಕೃತ ಪಠ್ಯವಸ್ತು, ಅಂಕ ನಿಗದಿಪಡಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ 5,8 ಮತ್ತು 9ನೇ ತರಗತಿ ಮೌಲ್ಯಂಕನ ಪರೀಕ್ಷೆಗೆ ಪರಿಷ್ಕೃತ ಪಠ್ಯವಸ್ತು ಮತ್ತು ಅಂಕಗಳನ್ನು ನಿಗದಿಪಡಿಸಿದೆ.

    ಶಾಲಾ ಶಿಕ್ಷಣ ಇಲಾಖೆಯು ಮೌಲ್ಯಂಕನ ಕುರಿತು 2023ರ ಜು.1ರಂದು ಹೊರಡಿಸಿದ್ದ ಸುತ್ತೋಲೆಗಳಿಗೆ ಕೆಲವು ಪರಿಷ್ಕರಣೆ ಮಾಡಿದೆ. ಅದರ ಆಧಾರದಲ್ಲಿ ಮೌಲ್ಯಂಕನ ಪರೀಕ್ಷೆಯನ್ನು ಯಾವ ರೀತಿಯಲ್ಲಿ ನಡೆಸಬೇಕು. ಅಂಕಗಳನ್ನು ಹೇಗೆ ನಿಗದಿ ಮಾಡಬೇಕು ಎಂಬ ಸೂಚನೆಗಳನ್ನು ನೀಡಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

    ಈ ಮೊದಲು 5 ಮತ್ತು 8ನೇ ತರಗತಿಗೆ ಮಧ್ಯವಾರ್ಷಿಕ ಪರೀಕ್ಷೆ (ಎಸ್‌ಎ-1) ಮತ್ತು ಮೌಲ್ಯಂಕನ ಸೇರಿ ಲಿತಾಂಶ ನೀಡಬೇಕು. 9ನೇ ತರಗತಿಗೆ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿನ ಅಂಕಗಳ ಮೇಲೆ ಲಿತಾಂಶ ಪ್ರಕಟಿಸಲು ಸೂಚಿಸಿತ್ತು. ಈಗ ಕೆಲವು ಬದಲಾವಣೆ ಮಾಡಿದೆ.

    5ನೇ ತರಗತಿ ಮೌಲ್ಯಂಕನ:

    2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನೀಡಿರುವಂತೆ ನವೆಂಬರ್-2023ರಿಂದ ೆಬ್ರವರಿ-2024ರವರೆಗೆಗಿನ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 40 ಅಂಕಗಳಿಗೆ ಲಿಖಿತ, ಒಟ್ಟು 50 ಅಂಕಗಳಿಗೆ ಮೌಲ್ಯಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು.

    ಅಂತಿಮವಾಗಿ ಲಿತಾಂಶ ನಿರ್ಣಯಿಸಲು ಎ್ಎ-1,2,3 ಮತ್ತು 4ಕ್ಕೆ ತಲಾ 15 ಅಂಕಗಳು ಎಸ್‌ಎ-1 ಮತ್ತು ಎಸ್‌ಎ-2 ತಲಾ 20 ಅಂಕ ಸೇರಿ 100 ಅಂಕಗಳಿಗೆ ಪರಿಗಣಿಸುವುದು. ಎಸ್‌ಎ-2 ಹೊರತುಪಡಿಸಿ ಈಗಾಗಲೇ ಸ್ಯಾಟ್ಸ್‌ನಲ್ಲಿ ಅಂಕಗಳನ್ನು ದಾಖಲಿಸಿರುವುದರಿಂದ ಎಸ್-2 ಅಂಕಗಳನ್ನು ಸೇರಿಸಿ ಲಿತಾಂಶ ಪ್ರಕಟಿಸಬೇಕು.

    8ನೇ ತರಗತಿ ಮೌಲ್ಯಂಕನ:

    8ನೇ ತರಗತಿಯ ಎಸ್‌ಎ-2 ಮೌಲ್ಯಂಕನವನ್ನು ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿ ಪರೀಕ್ಷೆ ಬರೆಯಲು ರೂಢಿಯಾದಂತಾಗಿ ಉತ್ತಮ ಅಭ್ಯಾಸಕ್ಕೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ 2023ರ ಜೂನ್‌ನಿಂದ ೆಬ್ರವರಿ-2024ರ ವರೆಗಿನ ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 50 ಅಂಕಗಳಿಗೆ ಲಿಖಿತ ಸೇರಿ 60 ಅಂಕಗಳನ್ನು 30ಕ್ಕೆ ಪರಿವರ್ತಿಸಿ ಲಿತಾಂಶ ನೀಡುವುದು.

    ಎ್ಎ-1,2,3 ಮತ್ತು 4ಕ್ಕೆ ತಲಾ 10 ಅಂಕಗಳಂತೆ 40 ಅಂಕ ಎಸ್‌ಎ-1 ಮತ್ತು ಎಸ್‌ಎ-2 ತಲಾ 30 ಅಂಕಗಳಂತೆ 60 ಅಂಕವನ್ನು 100ಕ್ಕೆ ಪರಿವರ್ತಿಸುವುದು.

    9ನೇ ತರಗತಿ ಮೌಲ್ಯಂಕನ:

    9ನೇ ತರಗತಿಯ ಎಸ್‌ಎ-2 ಮೌಲ್ಯಂಕನಕ್ಕೆ ಆಯಾ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ನಿಗದಿಪಡಿಸಿದ ವಾರ್ಷಿಕ ಶೇ.100 ಪಠ್ಯವನ್ನು ಪರಿಗಣಿಸಬೇಕು. ಆಂತರಿಕ ಮೌಲ್ಯಮಾಪನವನ್ನು ನಾಲ್ಕು ರೂಪಣಾತ್ಮಕ ಮೌಲ್ಯಂಕನಗಳಿಗೆ (ಎ್ಎ) ತಲಾ 50 ಅಂಕಗಳಂತೆ 200 ಅಂಕಗಳು, ಪ್ರಥಮ ಭಾಷೆಗೆ 25 ಅಂಕ, ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ತಲಾ 20 ಅಂಕಗಳಂತೆ 125 ಅಂಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನ ಮಾಡಬೇಕು.

    ಮೌಲ್ಯಂಕನದಲ್ಲಿ ಪ್ರಥಮ ಭಾಷೆಗೆ100 ಅಂಕ, ದ್ವಿತೀಯ, ತೃತೀಯ ಭಾಷೆ ಮತ್ತು ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ಅಂತಿಮವಾಗಿ ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ಎಸ್‌ಎ-2 ಬದಲಾಗಿ ನಡೆಸುವ ಮೌಲ್ಯಂಕನ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts