More

    ಏ.2ರೊಳಗೆ 5,8,9ನೇ ತರಗತಿ ಮೌಲ್ಯಾಂಕನ ಮೌಲ್ಯಮಾಪನ ಪೂರ್ಣಗೊಳಿಸಲು ಸೂಚನೆ

    ಬೆಂಗಳೂರು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಮಕ್ಕಳಿಗೆ ನಡೆಯುತ್ತಿರುವ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ಮೌಲ್ಯಮಾಪನವನ್ನು ಏ.2ರೊಳಗೆ ಪೂರ್ಣಗೊಳಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸೂಚನೆ ನೀಡಿದೆ.

    ವಿಷಯವಾರು ಕೀ ಉತ್ತರಗಳ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬ್ಲಾಕ್ ಹಂತದಲ್ಲಿ ಅಂತರ್ ಕ್ಲಸ್ಟರ್‌ವಾರು ಮೌಲ್ಯಮಾಪನ ಕಾರ್ಯವನ್ನು ಮಾಡಬೇಕು. 5ನೇ ತರಗತಿಗೆ ಮಾ.26ರಂದು ಮೌಲ್ಯಾಂಕನ ಮುಗಿದಿದ್ದು, ಮೌಲ್ಯಮಾಪಕರು ಪ್ರತಿ ದಿನ 80 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನ ಮಾಡುವ ಮೂಲಕ ಮಾ.31ರೊಳಗೆ ಮೌಲ್ಯಮಾಪನ ಪೂರ್ಣಗೊಳಿಸಬೇಕು.

    8 ಮತ್ತು 9ನೇ ತರತಗಿ ಮೌಲ್ಯಾಂಕನವು ಮಾ.28ರಂದು ಮುಗಿಯಲಿದೆ. 8ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 60 ಉತ್ತರ ಪತ್ರಿಕೆಗಳನ್ನು ಹಾಗೂ 9ನೇ ತರಗತಿಯ 40 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕು. ಏ.2ರೊಳಗೆ ಮೌಲ್ಯಮಾಪನ ಪೂರ್ಣಗೊಳಿಸಬೇಕು. ಬಳಿಕ ಎಲ್ಲ ತರಗತಿಗಳ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಆಯಾ ಶಾಲೆಗಳಿಗೆ ಮರು ರವಾನೆ ಮಾಡಬೇಕು.

    ಶಾಲಾ ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿದ ಅಂಕವನ್ನು ಗ್ರೇಡ್‌ಗಳಾಗಿ ಪರಿವರ್ತಿಸಿ ಸ್ಯಾಟ್ಸ್‌ನಲ್ಲಿ ನಮೂದಿಸಬೇಕು. ಸಮುದಾಯದತ್ತ ಶಾಲಾ ದಿನದಂದು ವಿದ್ಯಾರ್ಥಿಗಳಿಗೆ ಲಿತಾಂಶವನ್ನು ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಮತ್ತು ಬಿಇಒಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts