More

    3,218 ಕಂದಾಯ ಗ್ರಾಮಗಳಾಗಿ ಪರಿವರ್ತನೆ ! * ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ

    ಕೇಶವಮೂರ್ತಿ ವಿ.ಬಿ. ಹಾವೇರಿ
    ರಾಜ್ಯದ 3218 ಲಂಬಾಣಿ ತಾಂಡಾ, ಹಾಡಿ, ದೊಡ್ಡಿ, ಹಟ್ಟಿ, ಮಜರೆ, ಕ್ಯಾಂಪ್, ಕಾಲನಿ, ಮತ್ತಿತ್ತರ ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾರ್ಪಡಿಸಲು, ಲಕ್ಷ ಜನರಿಗೆ ಹಕ್ಕು ಪತ್ರ ವಿತರಿಸಲು ಕಂದಾಯ ಇಲಾಖೆ ಸಜ್ಜಾಗಿದೆ.
    ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗೆ ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಈ ಬಗ್ಗೆ ಪ್ರಧಾನಿಯವರ ಕಚೇರಿಯಿಂದ ಖಚಿತವಾಗಿದ್ದು, ಸದ್ಯದಲ್ಲೇ ದಿನಾಂಕ ನಿಗದಿಯಾಗಲಿದೆ. ಜನವರಿ ಆರಂಭದಲ್ಲಿ ನಿಗದಿ ಸಾಧ್ಯತೆ ಇದೆ ಎಂದು ಸ್ವತಃ ಕಂದಾಯ ಸಚಿವರು ’ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
    ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು 2016ರಿಂದ ಈವರೆಗೆ 3218 ದಾಖಲೆ ರಹಿತ ಜನವಸತಿಗಳನ್ನು ಗುರುತಿಸಿದ್ದಾರೆ. ಇವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಎಲ್ಲೆಲ್ಲಿ ಜನ ಮನೆ ಕಟ್ಟಿಕೊಂಡಿದ್ದಾರೋ ಅಲ್ಲಿನ ಸಂಪೂರ್ಣ ಜಮೀನನ್ನು ಅವರಿಗೇ ಕೊಡಲಾಗುವುದು. ಉಪ ನೋದಣಾಧಿಕಾರಿಗಳ ಕಚೇರಿ ಮೂಲಕ ಅಧಿಕೃತ ದಾಖಲೆ ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ.
    ಈಗಾಗಲೇ 1385 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳು ಎಂದು ಘೋಷಿಸಲಾಗಿದೆ. 2295 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಈಗಾಗಲೇ ಘೋಷಿಸಿರುವ ಕಂದಾಯ ಗ್ರಾಮಗಳಲ್ಲಿ ಸುಮಾರು 50 ಸಾವಿರ ಅರ್ಹ ಫಲಾನುಭವಿಗಳಿಗೆ ಸದ್ಯದಲ್ಲೇ ಹಕ್ಕು ಪತ್ರ ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ.
    ಪ್ರಾಥಮಿಕ ಹಂತದಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾದಗಿರಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ಕುರಿತು ಖಚಿತ ಮಾಹಿತಿ ದೊರೆತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ವಿವರಿಸಿದ್ದಾರೆ.

    897 ಹಕ್ಕು ಪತ್ರ ವಿತರಣೆ
    ಮಂಡ್ಯ ಜಿಲ್ಲೆಯ 744 ಹಾಗೂ ಹಾಸನ ಜಿಲ್ಲೆಯ 153 ಫಲಾನುಭವಿಗಳಿಗೆ ಈಗಾಗಲೇ ಹಕ್ಕು ಪತ್ರ ವಿವರಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 2019ರ ಬಳಿಕ 8 ಗ್ರಾಮಗಳನ್ನು ರಚಿಸಲು ಪ್ರಾಥಮಿಕ ಹಾಗೂ 3 ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.


    ಗಿನ್ನೆಸ್ ದಾಖಲೆ ಆಗಲಿದೆ
    3218 ಕಂದಾಯ ಗ್ರಾಮಗಳ ಒಂದು ಲಕ್ಷ ಜನರಿಗೆ ಹಕ್ಕುಪತ್ರ ಕೊಡಲಿದ್ದೇವೆ. ಇದೊಂದು ಗಿನ್ನೆಸ್ ದಾಖಲೆಯಾಗಲಿದೆ ಎನ್ನುತ್ತಾರೆ ಆರ್.ಅಶೋಕ.

    ಕೋಟ್
    ತಾಂಡಾ, ಹಾಡಿ, ದೊಡ್ಡಿಗಳಂಥ ಅನೇಕ ಜನವಸತಿ ಸ್ಥಳಗಳಿಗೆ ದಾಖಲೆಗಳೇ ಇರಲಿಲ್ಲ. ಇವುಗಳನ್ನು ಅಧಿಕೃತ ಕಂದಾಯ ಗ್ರಾಮಗಳೆಂದು ಘೋಷಿಸಿ, ಅಲ್ಲಿನ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
    ಆರ್.ಅಶೋಕ, ಕಂದಾಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts