More

    ಕಂದಾಯ ಅಧಿಕಾರಿಗಳಿಗೆ ಕರೊನಾ ಸೋಂಕು: ಕೆಎಟಿ ಕಲಾಪಗಳು ಸ್ಥಗಿತ

    ಬೆಂಗಳೂರು: ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಂದಾಯ ಭವನದ 6 ಮತ್ತು 7ನೇ ಮಹಡಿಯಲ್ಲಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) 2 ದಿನಗಳ ಕಲಾಪಗಳನ್ನು ರದ್ದುಪಡಿಸಲಾಗಿದೆ.

    ಇದನ್ನೂ ಓದಿ: ಶಾಸಕರ ಭವನಕ್ಕೆ ಕರೊನಾ ಆತಂಕ; ಇಡೀ ಕಟ್ಟಡ ಸ್ಯಾನಿಟೈಸ್​, ಅನಗತ್ಯ ಪ್ರವೇಶ ನಿರ್ಬಂಧ

    ಸೋಂಕು ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಜೂ. 26 ಹಾಗೂ 27ರ ಕಲಾಗಳನ್ನು ರದ್ದುಪಡಿಸಿ ಕೆಎಟಿ ರಿಜಿಸ್ರ್ಟಾರ್ ಗುರುವಾರ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣಗಳನ್ನು ಜೂ.29ಕ್ಕೆ ನಿಗದಿಪಡಿಸಲಾಗಿದೆ. ಬೆಂಗಳೂರಿನ ಕೆಎಟಿ ಪ್ರಧಾನಪೀಠದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಮತಿ ಇಲ್ಲದೆ ಹೆಡ್ ಕ್ವಾರ್ಟರ್ಸ್‌ನಿಂದ ಹೊರ ಹೋಗದಂತೆ ಸೂಚಿಸಲಾಗಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಆದೇಶದಲ್ಲಿ ಎಚ್ಚರಿಸಲಾಗಿದೆ.

    ಇದನ್ನೂ ಓದಿ: ಕೋವಿಡ್ ಸೋಂಕಿತನನ್ನು ಮನೆಗೆ ಕಳಿಸಿದ್ರು, ನೆಗೆಟಿವ್​ ಇರೋ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿಕೊಂಡ್ರು!

    ಕಂದಾಯ ಭವನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕಿರುವ ಹಿನ್ನೆಲೆಯಲ್ಲಿ ಕಟ್ಟಡದ 1 ಹಾಗೂ 2ನೇ ಮಹಡಿಯಲ್ಲಿರುವ ಕಂದಾಯ ಇಲಾಖೆಯ ಕಚೇರಿಗಳನ್ನೂ ಬಂದ್ ಮಾಡಲಾಗಿದ್ದು, 3ನೇ ಮಹಡಿಯಲ್ಲಿರುವ ಕರ್ನಾಟಕ ಭೂಕಬಳಿಕೆ ವಿಶೇಷ ನ್ಯಾಯಾಲಯದ ಕಲಾಪಗಳನ್ನೂ ಸ್ಥಗಿತಗೊಳಿಸಲಾಗಿದೆ.

    ಕಿರುಕುಳಕ್ಕೆ ಬೇಸತ್ತ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಗೃಹ ಕಚೇರಿ ಮುಂದೆ ಧರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts