More

    ರಾಜ್ಯದಲ್ಲಿ ಮಳೆ ಅಬ್ಬರ: ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ; ಇಲ್ಲಿದೆ ವಿವರ..

    ಬೆಂಗಳೂರು: ರಾಜ್ಯಕ್ಕೆ ಇನ್ನೇನು ಮುಂಗಾರು ಪ್ರವೇಶ ಮಾಡಲಿದ್ದು, ಅದಕ್ಕೂ ಮುನ್ನವೇ ರಾಜ್ಯಾದ್ಯಂತ ಮಳೆ ಅಬ್ಬರ ಶುರುವಾಗಿದೆ. ಹಲವೆಡೆ ಗಾಳಿಮಳೆಗೆ ಆಸ್ತಿಪಾಸ್ತಿ ಹಾನಿ ಆಗಿದ್ದರೆ, ಸಿಡಿಲಿನಿಂದಾಗಿ ಜೀವಹಾನಿಯೂ ಸಂಭವಿಸಿದೆ. ಇವೆಲ್ಲದರ ನಡುವೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ಕರೆದ ಕೃಷ್ಣಬೈರೇಗೌಡ, ಕಂದಾಯ ಇಲಾಖೆ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿದ್ದಾಗಿ ಹೇಳಿ, ಆ ಕುರಿತ ವಿವರಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಹೆಚ್ಚಿನ ಹಾನಿಯಾಗಿರುವುದರಿಂದ ಪರಿಹಾರ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳು, ಎಸ್​​ಡಿಆರ್​ಎಫ್​, ಎನ್​ಡಿಆರ್​ಎಫ್​ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕೆಲವು ತೀರ್ಮಾನ ತೆಗೆದುಕೊಂಡು ಸೂಚನೆ ನೀಡಿದ್ದೇನೆ ಎಂದರು.

    ಇದನ್ನೂ ಓದಿ: ಖಾಸಗಿ ಬಸ್​​ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆ: ಖಾಸಗಿ ಬಸ್​ ಮಾಲೀಕರು ಏನಂತಾರೆ?

    ಮಾರ್ಚ್, ಮೇ ತಿಂಗಳಲ್ಲಿ ಕೆಲವು ಭಾಗದಲ್ಲಿ ಹೆಚ್ಚಿನ ಮಳೆ ಆಗಿದೆ. ಜನವರಿಯಿಂದ ಇಲ್ಲಿಯವರೆಗೆ 65 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 59 ಮಂದಿಗೆ ಪರಿಹಾರ ಹಣ ನೀಡಿದ್ದೇವೆ. 487 ಜಾನುವಾರುಗಳು ಮೃತಪಟ್ಟಿದ್ದು, ಆ ಬಗ್ಗೆಯೂ ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ. ಮನೆಗಳೂ ಹಾನಿಗೀಡಾಗಿದ್ದು, 1400 ಮನೆಗಳಿಗೆ ಸಣ್ಣಮಟ್ಟದ ಹಾನಿಯಾಗಿದೆ. ಜನವರಿಯಿಂದ ಇಲ್ಲಿಯವರೆಗೂ 20,160 ಹೆಕ್ಟೇರ್​ ಬೆಳೆ ಹಾನಿಯಾಗಿದೆ ಎಂಬ ವಿವರಣೆಗಳನ್ನು ನೀಡಿದರು.

    ಇದನ್ನೂ ಓದಿ: ಒಬ್ಬ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನು ಮಾರಲೆತ್ನಿಸಿದ ತಂದೆ; ಪತಿ ವಿರುದ್ಧ ಪತ್ನಿಯ ದೂರು

    ಜಿಲ್ಲಾಧಿಕಾರಿಗಳ ಖಾತೆಯಲ್ಲಿ 538 ಕೋಟಿ ರೂ. ಲಭ್ಯವಿದೆ. ಒಂದೆರಡು ಜಿಲ್ಲೆಯಲ್ಲಿ ಹೆಚ್ಚಿನ ಹಣ ಬೇಕೆಂದು ಮನವಿ ಮಾಡಿದ್ದಾರೆ, ಅದನ್ನೂ ಒದಗಿಸುತ್ತೇವೆ ಎಂದ ಸಚಿವರು, ಬೆಳೆಹಾನಿ ಸಂಬಂಧ ರೈತರ ಖಾತೆಗೆ ಪರಿಹಾರ ಹಣ ವರ್ಗಾವಣೆ ಆಗಲಿದೆ ಎಂದರು. ಪ್ರಾಣಹಾನಿ ಪರಿಹಾರ ಎರಡು ದಿನದಲ್ಲಿ ವಿತರಿಸಬೇಕು. ಮಳೆಯಿಂದ ಬೆಳೆಹಾನಿ ಸಂಬಂಧ ಎಲ್ಲ ಅಧಿಕಾರಿಗಳು ಕೂಡಲೇ ಅಪ್​ಡೇಟ್​ ಮಾಡಬೇಕೆಂದು ಸೂಚನೆ ನೀಡಿದ್ದಾಗಿಯೂ ತಿಳಿಸಿದರು.

    ಇದನ್ನೂ ಓದಿ: ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

    ಕೊಡಗು, ಮಂಗಳೂರು, ಬೆಳಗಾವಿ, ರಾಯಚೂರು ಭಾಗಗಳಲ್ಲಿ ವಿಪತ್ತು ನಿರ್ವಹಣಾ ತಂಡ ಸಜ್ಜಾಗಿರುವಂತೆ ಸೂಚಿಸಿದ್ದೇವೆ. ಅನಾಹುತ ಆದ ತಕ್ಷಣ ಪರಿಹಾರ ಕ್ರಮಕ್ಕೆ ಮುಂದಾಗುವಂತೆ ನಿರ್ದೇಶನ ನೀಡಿದ್ದೇವೆ. ಇತ್ತೀಚಿಗೆ ಸಿಡಿಲಿನಿಂದಾಗಿ ಪ್ರಾಣಹಾನಿ ಸಂಭವ ಹೆಚ್ಚಾಗಿದೆ, ಆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪ್ರಕೃತಿ ವಿಕೋಪ ಪ್ರಕರಣ ಎದುರಿಸಲು ಆಡಳಿತ ಸಜ್ಜಾಗುವಂತೆ ಅಧಿಕಾರಿಗಳಿಗೆ ಹೇಳಿದ್ದಾಗಿ ಅವರು ತಿಳಿಸಿದರು.

    ಇದನ್ನೂ ಓದಿ: ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್

    ಇನ್ನೆರಡು ದಿನಗಳಲ್ಲಿ ಕುಷ್ಕಿ ಬೆಳೆ, ತೋಟಗಾರಿಕೆ ಬೆಳೆ ಹಾನಿ ಎಷ್ಟು ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ಪರಿಹಾರ ವಿತರಣೆಯಲ್ಲಿ ಕೆಲವು ಕಡೆ ದುರ್ಬಳಕೆ ಆಗಿದೆ ಎಂಬ ದೂರುಗಳೂ ಇವೆ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಮಾಡಿದ್ದೇವೆ ಎಂಬ ಮಾಹಿತಿಯನ್ನೂ ಸಚಿವರು ಹಂಚಿಕೊಂಡರು.

    ಗಂಡ-ಹೆಂಡತಿ ಮಾತುಕತೆಯ ಎಲ್ಲವನ್ನೂ ಹೊರಗೆ ಹೇಳೋಕಾಗಲ್ಲ: ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಸವದಿ ಹೀಗಂದಿದ್ಯಾಕೆ?

    ಖಾಸಗಿ ಬಸ್​​ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆ: ಖಾಸಗಿ ಬಸ್​ ಮಾಲೀಕರು ಏನಂತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts