More

    ಯಾತ್ರಿ ನಿವಾಸ ನಿರ್ಮಿಸಲು ಒತ್ತಾಯ

    ರೇವತಗಾಂವ: ಹಾಲುಮತ ಸಮಾಜದ ಕಾಶಿ ಎಂದೇ ಪ್ರಸಿದ್ಧಿ ಪಡೆದ ಹುಲಜಂತಿಯ ಮಾಳಿಂಗರಾಯನ ಸನ್ನಿಧಿಗೆ ವಿಜಯಪುರ ಜಿ.ಪಂ. ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಕುಟುಂಬ ಸಮೇತರಾಗಿ ಮಂಗಳವಾರ ಭೇಟಿ ನೀಡಿದರು.
    ಕರೊನಾ ಹಿನ್ನೆಲೆ ಈ ವರ್ಷ ಹುಲಜಂತಿ ಜಾತ್ರೆ ರದ್ದುಪಡಿಸಲಾಗಿತ್ತು. ಸಾಂಪ್ರದಾಯಿಕವಾಗಿ ಕೆಲವು ವಿಧಿ ವಿಧಾನಗಳ ಮೂಲಕ ಸಂಕ್ಷಿಪ್ತವಾಗಿ ಭೇಟಿ ಕಾರ್ಯಕ್ರಮ ನೆರವೇರಿಸಲಾಗಿತ್ತು. ಮಂಗಳವಾರ ಜಿ.ಪಂ. ಅಧ್ಯಕ್ಷರು ಭೇಟಿ ನೀಡಿ ಮಾಳಿಂಗರಾಯನ ಮುಂಡಾಸ್ ವೀಕ್ಷಿಸಿ ನಂತರ ದೇವರ ದರ್ಶನ ಪಡೆದರು.
    ನಂತರ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಾಕ್ಷಾತ್ ಶಿವ-ಪಾರ್ವತಿಯರಿಂದ ನೆರವೇರುವ ಮುಂಡಾಸ್ ಅನ್ನು ನೋಡಲು ಕರ್ನಾಟಕ ರಾಜ್ಯದ ವಿವಿಧ ಮೂಲೆಗಳಿಂದ ಬರುವ ಲಕ್ಷಾಂತರ ಭಕ್ತರಿಗೆ ಅನುಕೂಲ ಕಲ್ಪಿಸಲು ಹುಲಜಂತಿಯಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿ ಹಾಗೂ ಶ್ರೀಶೈಲ ಮಾದರಿಯಲ್ಲಿ ಯಾತ್ರಿ ನಿವಾಸ ನಿರ್ಮಿಸಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಮುಜರಾಯಿ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು.
    ಮಾಳಿಂಗರಾಯ ಮಹಾರಾಜರು, ಮಂಗಳವೇಡಾ ತಾಲೂಕಿನ ತಾಪಂ ಅಧ್ಯಕ್ಷ ಸುಧಾಕರ ಪಾಟೀಲ, ದಾಮಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ವಿಜುಗೌಡ ಪಾಟೀಲ, ಕಾಮೇಶ ಪಾಟೀಲ, ಶಂಕ್ರೆಪ್ಪ ಪೂಜಾರಿ, ಅಜೀತ ತಳ್ಳೆ, ಯಲ್ಲಪ್ಪ ಬಂಡೇನವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts