More

  ಹೇಮಾವತಿಯನ್ನು ಬಿಜೆಪಿಗೆ ಬರೆದುಕೊಟ್ಟಿದ್ದೀವಾ..?

  ಹಾಸನ: ನಾವ್ ಕೇಳಿದಾಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಅಂತೀರಿ, ಅವ್ರು ಕೇಳಿದ್ರೆ ನೀರು ಬಿಡ್ತೀರಿ. ಹೇಮಾವತಿ ಜಲಾಶಯವನ್ನು ಬಿಜೆಪಿಗೆ ಬರೆದುಕೊಟ್ಟಿದ್ದೀವಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

  ಸಂಸದರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, ಹಾಸನಕ್ಕೆ ನೀರು ಕೇಳಿದ್ರೆ ನಾನಾ ನೆಪ ಹೇಳ್ತಾರೆ. ಆದರೆ, ತುಮಕೂರಿಗೆ ಸಲೀಸಾಗಿ ಕೊಡ್ತಾರೆ ಎಂದು ಆರೋಪಿಸಿದರು. ನೀರಾವರಿ ಸಲಹಾ ಸಮಿತಿ ಸಭೆಗೆ ಕರೆದಿದ್ದರೆ ಹೋಗುತ್ತಿದ್ದೆ. ಬಿಜೆಪಿ ಶಾಸಕರು ನಡೆಸುವ ಸಭೆಗೆ ಹೋಗಲು ನಾವೇನು ಆ ಪಕ್ಷದ ಕಾರ್ಯಕರ್ತರಾ? ಎಂದು ವಾಗ್ದಾಳಿ ನಡೆಸಿದರು.

  ಇದನ್ನೂ ಓದಿರಿ ಎಲ್​ಕೆಜಿ, ಯುಕೆಜಿ ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಬ್ರೇಕ್​ ಹಾಕಲಿದೆಯೇ ನಿಮ್ಹಾನ್ಸ್​ ವರದಿ ?

  12 ತಿಂಗಳಿಂದ ಬಿ.ಎಸ್​. ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಾಜಿ ಸಚಿವರು, ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ. ಮೈಸೂರು, ಮಂಡ್ಯ, ಹಾಸನ ರೈತರು ಏನು ಅನ್ಯಾಯ ಮಾಡಿದ್ದಾರೆ, ತಾರತಮ್ಯವೇಕೆ? ಎಂದು ಆಕ್ರೋಶ ಹೊರಹಾಕಿದರು.

  ಇದನ್ನೂ ಓದಿರಿ ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts