More

    ಸಾಲ ಮರುಪಾವತಿ ದಿನವೇ ಆಸ್ತಿ ಪತ್ರ ವಾಪಸ್; ಬ್ಯಾಂಕ್‌ಗೆ ಆರ್‌ಬಿಐ ಸೂಚನೆ

    ಬೆಂಗಳೂರು: ಸ್ಥಿರಾಸ್ತಿ ಮೇಲೆ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿ ಮಾಡಿದರೂ ಆಸ್ತಿ ಪತ್ರ ಹಿಂತಿರುಗಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸತಾಯಿಸುತ್ತವೆ. ಗ್ರಾಹಕರಿಗೆ ಕಿರುಕುಳ ತಪ್ಪಿಸಲು ದಂಡದ ಅಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧಪಡಿಸಿದೆ.

    ಗ್ರಾಹಕರು ಸಾಲವನ್ನು ಪೂರ್ಣ ಮರು ಪಾವತಿ ಮಾಡಿದ ಬಳಿಕವೂ, ಆಸ್ತಿ ಪತ್ರ ಹಿಂದಿರುಗಿಸದೆ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಕಿರುಕುಳ ನೀಡಿದರೆ ತಪ್ಪಿಸರಿಗೆ ದಂಡ ವಿಧಿಸುವ ನಿಯಮವನ್ನು ಆರ್‌ಬಿಐ ಜಾರಿಗೆ ತಂದಿದೆ. ಸಾಲ ತೀರಿದ ಬಳಿಕ 30 ದಿನದೊಳಗಾಗಿ ಗ್ರಾಹಕರಿಗೆ ಎಲ್ಲ ಮೂಲ ಚರಾಸಿ ಅಥವಾ ಸ್ಥಿರಾಸ್ತಿ ದಾಖಲೆ ಪತ್ರಗಳನ್ನು ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಹಸ್ತಾಂತರಿಸಬೇಕು. ವಿಳಂಬ ಮಾಡಿದರೆ ದಿನವೊಂದಕ್ಕೆ 5 ಸಾವಿರ ರೂ. ದಂಡವನ್ನು ಗ್ರಾಹಕರಿಗೆ ನೀಡಬೇಕು ಎಂದು ಎಲ್ಲ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ. ಈ ನಿಯಮ ಡಿಸೆಂಬರ್ 1ರಿಂದಲೇ ಅನ್ವಯವಾಗಲಿದೆ.

    ಸಾಲ ತೀರಿದ ಬಳಿಕ ದಾಖಲೆ ಪತ್ರಗಳನ್ನು ಗ್ರಾಹಕರಿಗೆ ವಾಪಸ್ ನೀಡುವ ವಿಷಯದಲ್ಲಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಭಿನ್ನ ನೀತಿಗಳನ್ನು ಅನುಸರಿಸುತ್ತಿದ್ದು, ಗ್ರಾಹಕ ವ್ಯಾಜ್ಯಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ಗ್ರಾಹಕರಿಗೆ ತೊಂದರೆ ಉಂಟಾಗುತ್ತಿದೆ.

    ಇದನ್ನು ತಪ್ಪಿಸಲು ಆರ್‌ಬಿಐ, ಏಕರೂಪದ ಮಾರ್ಗಸೂಚಿಯನ್ನು ರೂಪಿಸಿ ದೇಶವ್ಯಾಪಿ ಅನ್ವಯ ಆಗುವಂತೆ ಸೂಚನೆ ನೀಡಿದೆ. ಇದಲ್ಲದೆ, ನೋಂದಣಿ ಸಂಬಂಧಿಸಿದ ಶುಲ್ಕ ಕೈಬಿಡುವಂತೆಯೂ ಆರ್‌ಬಿಐ ಹೇಳಿದೆ. ಹೊಸ ನಿಯಮಾವಳಿಗಳು ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಇಲ್ಲವಾದರೆ ಕ್ರಮ ಕೈಗೊಳ್ಳುವುದಾಗಿ ಆರ್‌ಬಿಐ ಎಚ್ಚರಿಕೆ ನೀಡಿದೆ.

    ಸಾಲಗಾರರಿಗೆ ಅನುಕೂಲ ಏನು ?

    *ಸಾಲ ಮರು ಪಾವತಿಸಿದ ನಂತರದ 30 ದಿನಗಳಲ್ಲಿ ಮೂಲ ಆಸ್ತಿ ದಾಖಲೆಗಳನ್ನು ಸ್ವೀಕರಿಸಲು ಅರ್ಹರು
    *ವಿಳಂಬವಾದರೆ ಸಾಲಗಾರರು ಪ್ರತಿ ದಿನ 5 ಸಾವಿರ ರೂ. ಪರಿಹಾರ ಪಡೆಯಬಹುದು
    *ಮೂಲ ಆಸ್ತಿ ದಾಖಲೆಗಳಿಗೆ ನಷ್ಟ ಅಥವಾ ಹಾನಿಯಾದರೆ ಹಣಕಾಸು ಸಂಸ್ಥೆಗಳು ನಕಲು ಅಥವಾ ಪ್ರಮಾಣೀಕೃತ ಪ್ರತಿಗಳನ್ನು ಸಾಲಗಾರರಿಗೆ ಒದಗಿಸಬೇಕು
    *ದಾಖಲೆ ಹಾನಿಯಾಗಿದ್ದರೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ಯಾಂಕ್‌ಗಳಿಗೆ ಹೆಚ್ಚುವರಿ 30 ದಿನ ನೀಡಲಾಗುತ್ತದೆ
    *ಏಕೈಕ ಸಾಲಗಾರ ಅಥವಾ ಜಂಟಿ ಸಾಲಗಾರನ ಮರಣ ಆದರೆ ಮೂಲ ದಾಖಲೆಗಳನ್ನು ಹಿಂದಿರುಗಿಸಲು ಬ್ಯಾಂಕ್‌ಗಳು ಸುರಕ್ಷಿತ ಕ್ರಮ ವಹಿಸಬಹುದು
    *ಸಾಲಗಾರರು ತಮ್ಮ ಬ್ಯಾಂಕ್ ಶಾಖೆಯಿಂದ ಅಥವಾ ದಾಖಲೆಗಳು ಲಭ್ಯವಿರುವ ಶಾಖೆಯಿಂದ ದಾಖಲೆಗಳನ್ನು ಸಂಗ್ರಹಿಸುವ ಆಯ್ಕೆ ಹೊಂದಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts