More

    ಎಚ್​ಯುುಐಡಿ ನಿಯಮ ಹಿಂಪಡೆಯಿರಿ

    ಕಾರವಾರ: ಆಭರಣ ಮಾರಾಟಕ್ಕೆ ವರ್ತಕರು ಹಾಲ್ ಮಾರ್ಕ್ ಯುನಿಕ್ ಐಡೆಂಟಿಫಿಕೇಶನ್ ನಂಬರ್(ಎಚ್​ಯುುಐಡಿ) ಪಡೆಯಬೇಕು ಎಂಬ ಕೇಂದ್ರ ಸರ್ಕಾರದ ನಿಯಮವನ್ನು ಹಿಂಪಡೆಯುವಂತೆ ಆಗ್ರಹಿಸಿ ಕಾರವಾರ ಜುವೆಲರಿ ವರ್ತಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

    ಆಭರಣಗಳಿಗೆ ಕಡ್ಡಾಯವಾಗಿ ಹಾಲ್​ವಾರ್ಕ್ ಹಾಕಬೇಕು ಎಂಬ ನಿಯಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅದಕ್ಕೆ ಎಚ್​ಯುುಐಡಿ ಪಡೆಯಬೇಕು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟಾ್ಯಂಡರ್ಡ್ (ಬಿಐಎಸ್) ಜುಲೈ 1 ರಿಂದ ನಿಯಮ ಜಾರಿಗೆ ತಂದಿರುವುದನ್ನು ನಾವು ವಿರೋಧಿಸುತ್ತೇವೆ. ಹೊಸ ನಿಯಮದಂತೆ ಆಭರಣ ಖರೀದಿಸಿದ ಗ್ರಾಹಕರ ಪೂರ್ಣ ಹೆಸರು, ವಿಳಾಸ, ಮೊಬೈಲ್ ನಂಬರ್ ಮುಂತಾದ ವಿವರಗಳನ್ನು ಬಿಐಎಸ್ ಪೋರ್ಟಲ್​ನಲ್ಲಿ ವ್ಯಾಪಾರಸ್ಥರು ನಮೂದಿಸಬೇಕಿದೆ. ಇದು ಗ್ರಾಹಕರ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ. ಈ ನಿಯಮಾವಳಿಯಿಂದ ಸಣ್ಣ ಮತ್ತು ಮಧ್ಯಮ ಆಭರಣ ಉದ್ದಿಮೆಗಳಿಗೆ ಸಂಕಷ್ಟ ಎದುರಾಗಲಿದೆ. ಎಚ್​ಯುುಐಡಿ ಅತಿ ವಿಳಂಬ ಪ್ರಕ್ರಿಯೆಯಾಗಿದ್ದು, ಇದರಿಂದ ಗ್ರಾಹಕರಿಗೆ ನಿಗದಿತ ಅವಧಿಗೆ ಚಿನ್ನವನ್ನು ನೀಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ಟನ್​ಗಟ್ಟಲೆ ಆಭರಣಗಳು ಹಾಲ್ ಮಾರ್ಕ್ ಹಾಕಲು ಬಿದ್ದಿವೆ. ಇಂಥ ಹಲವು ಸಮಸ್ಯೆಗಳಿದ್ದುದರಿಂದ ಎಚ್​ಯುುಐಡಿ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

    ಕಾರವಾರ ಜುವೆಲರಿ ಮರ್ಚ್ಂಟ್ ಅಸೋಸಿಯೇಶನ್​ನ ದೀಪಕ್ ಅಣ್ವೇಕರ್, ಉಪಾಧ್ಯಕ್ಷ ಸುರನ್ ರೇವಣಕರ್, ಕಾರ್ಯದರ್ಶಿ ರಾಮದಾಸ ವೆರ್ಣೆಕರ್, ಖಜಾಂಚಿ ನರೇಂದ್ರ ವಿ. ವೆರ್ಣೆಕರ್ ಇದ್ದರು.

    ಯಲ್ಲಾಪುರ ವರದಿ: ತಾಲೂಕು ಜುವೆಲರಿ ವರ್ಕರ್ಸ್ ಆಂಡ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಅರವಿಂದ ವೇರ್ಣೆಕರ, ಸಂಘದ ಅಧ್ಯಕ್ಷ ಸುರೇಶ ರೇವಣಕರ, ಉಪಾಧ್ಯಕ್ಷ ರಾಜೇಂದ್ರ ಶೇಟ್, ರಾಮಕೃಷ್ಣ ಅಣ್ವೆಕರ, ಜಿಲ್ಲಾ ಸಮಿತಿ ಸದಸ್ಯ ಪರಶುರಾಮ ಕುರ್ಡೆಕರ, ಸದಸ್ಯರಾದ ಗಣಪತಿ ಶೇಟ್, ಪ್ರಕಾಶ ಶೇಟ್, ಗಿರೀಶ ರೇವಣಕರ, ಅಶೋಕ ಶೇಟ್, ಸುಬ್ರಾಯ ಶೇಟ್ ಇದ್ದರು.

    ಸಿದ್ದಾಪುರ ವರದಿ: ಇಲ್ಲಿನ ದೈವಜ್ಞ ಸರಾಫ್ ಸಂಘದವರು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಎಚ್​ಯುುಐಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ತಹಸೀಲ್ದಾರ್ ಪ್ರಸಾದ ಎಸ್.ಎ. ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ದೈವಜ್ಞ ಸರಾಫ್ ಸಂಘದ ಅಧ್ಯಕ್ಷ ಗುರುನಾಥ ಪಿ. ವೆರ್ಣೆಕರ್, ದೈವಜ್ಞ ಸಮಾಜದ ಅಧ್ಯಕ್ಷ ಶಾಂತಾರಾಮ ವಿ. ಶೇಟ್, ಯುವಕ ಸಂಘದ ಅಧ್ಯಕ್ಷ ಪ್ರಶಾಂತ ಶೇಟ್, ಮುಕುಂದ ಶೇಟ್, ಆನಂದ ಎಂ. ಶೇಟ್, ವಿನಾಯಕ ಶೇಟ್ ಇದ್ದರು.

    ದಾಂಡೇಲಿ ವರದಿ: ಇಲ್ಲಿನ ಆಭರಣ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಸ್ಥಳೀಯ ಸಂಘದ ಅಧ್ಯಕ್ಷ ಗೋವಿಂದರಾಯ ಶೇಟ್, ಕೆ. ಮೋಹನರಾವ್, ಪ್ರಸನ್ನ ಅಣವೇಕರ್, ಸಂಜಯ ವೇರ್ಣೆಕರ್, ಸುರೇಶ ವಿಠಲಕರ್, ರಾಜೇಂದ್ರ ಎಂ. ಶೇಟ್, ರಾಘವೇಂದ್ರ ಕಾಗಲಕರ, ರಾಜೇಶ ವೇರ್ಣೆಕರ್, ವೆಂಕಟೇಶ ಭಟ್, ಸುರೇಶ ಪಾಲನಕರ ಇತರರು ಇದ್ದರು.

    ಅಂಕೋಲಾ ವರದಿ: ದೈವಜ್ಞ ಚಿನ್ನ, ಬೆಳ್ಳಿ ವ್ಯಾಪಾರಸ್ಥರ ಸಂಘದ ವತಿಯಿಂದ ಪಟ್ಟಣದಲ್ಲಿ ಬಂಗಾರದ ಅಂಗಡಿಗಳನ್ನು ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಾಗರಾಜ ಎನ್. ವೆರ್ಣೆಕರ್, ನಾಗರಾಜ ಎಸ್. ವೇರ್ಣೆಕರ್, ಉದಯ ಡಿ. ರಾಯ್ಕರ, ಸುಬ್ರಹ್ಮಣ್ಯ ರೇವಣಕರ, ಕಾಶಿನಾಥ ರಾಯ್ಕರ, ಸುನೀಲ ರಾಮಚಂದ್ರ ರಾಯ್ಕರ, ವೆಂಕಟೇಶ ರಾಯ್ಕರ, ದಯಾನಂದ ಕುರ್ಡೆಕರ ಇತರರು ಇದ್ದರು. ತಹಸೀಲ್ದಾರ್ ಆರ್.ವಿ. ಕಟ್ಟಿ ಮನವಿ ಸ್ವೀಕರಿಸಿದರು.

    ಗೋಕರ್ಣ ವರದಿ: ಇಲ್ಲಿನ ದೈವಜ್ಞ ಸುವರ್ಣಕಾರರ ಸಂಘ ವಿರೋಧ ವ್ಯಕ್ತಪಡಿಸಿ ಸ್ಥಳೀಯ ಉಪ ತಹಸೀಲ್ದಾರ್​ಗೆ ಸೋಮವಾರ ಮನವಿ ಸಲ್ಲಿಸಿತು. ಸಂಘದ ಅಧ್ಯಕ್ಷ ನಾಗೇಂದ್ರ ಶೇಟ್, ಉಪಾಧ್ಯಕ್ಷ ಪ್ರಕಾಶ ಶೇಟ್, ಕಾರ್ಯದರ್ಶಿ ಅನಿಲ ಶೇಟ್ ಇತರರಿದ್ದರು.

    ಹಳಿಯಾಳ ವರದಿ: ಸುವರ್ಣ ಕಾರ್ವಿುಕರ ಸಂಘಟನೆಯ ಹಳಿಯಾಳ, ಅಳ್ನಾವರ ತಾಲೂಕು ಘಟಕದ ಪದಾಧಿಕಾರಿಗಳು ಜಂಟಿಯಾಗಿ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ವಿನಾಯಕ ತಿಗಡಿಕರ, ಪ್ರಮುಖರಾದ ಪ್ರಕಾಶ ಗಡಕರ, ರಾಜೇಶ್ ವೆರ್ಣೆಕರ, ಮಹೇಶ ಮಿಂಡೊಳಕರ, ವಿನಾಯಕ ಗರಗ, ಆನಂದ ದೇವಕಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts