More

    “ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ತನಿಖೆ ನಡೆಸಲಿದ್ದಾರೆ… ಸತ್ಯ ಹೊರಬರಲಿದೆ”

    ಮುಂಬೈ : ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರು ತಮ್ಮ ಬಗೆಗಿನ ಆರೋಪಗಳ ತನಿಖೆ ಮಾಡಲಿದ್ದಾರೆ. ಸತ್ಯ ಏನೆಂದು ಸದ್ಯದಲ್ಲೇ ಗೊತ್ತಾಗಲಿದೆ ಎಂದಿದ್ದಾರೆ.

    ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮಾರ್ಚ್​ 20 ರಂದು ರಾಜ್ಯದ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದು ದೇಶಮುಖ್ ಅವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಗೃಹ ಸಚಿವ ದೇಶಮುಖ್ ಅವರು, ಪೊಲೀಸ್ ಅಧಿಕಾರಿಗಳಿಗೆ ಬಾರ್​ ಮತ್ತು ಹೋಟೆಲ್​ಗಳಿಂದ ತಿಂಗಳಿಗೆ 100 ಕೋಟಿ ರೂ. ಸಂಗ್ರಹ ಮಾಡಲು ಹೇಳಿದ್ದಾರೆ ಎಂದಿದ್ದರು. ಈ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ.

    ಇದನ್ನೂ ಓದಿ: ಚುನಾವಣಾ ಪ್ರಚಾರದ ನಡುವೆ ದೋಸೆ ಹಾಕಿದ ಖುಷಬೂ !

    ಇಂದು ನಾಗಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದೇಶಮುಖ್, “ಪರಮ್ ಬೀರ್ ಸಿಂಗ್ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ನಾನು ಮುಖ್ಯಮಂತ್ರಿಗಳನ್ನು ಕೋರಿದ್ದೇನೆ. ಸಿಎಂ ಮತ್ತು ರಾಜ್ಯ ಸರ್ಕಾರ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರೊಬ್ಬರು ನನ್ನ ವಿರುದ್ಧದ ಆರೋಪಗಳ ತನಿಖೆ ನಡೆಸಬೇಕೆಂದು ನಿರ್ಧರಿಸಿದ್ದಾರೆ. ಸತ್ಯ ಏನಿದೆಯೋ ಅದು ಹೊರಗೆ ಬರಲಿದೆ” ಎಂದರು. (ಏಜೆನ್ಸೀಸ್)

    ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಆ ಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ: ಸಿಡಿ ಕೇಸ್​ ಬಗ್ಗೆ ಡಿ.ಕೆ. ಸುರೇಶ್ ಸಿಡಿಮಿಡಿ

    ಚಿಕ್ಕ ಮಕ್ಕಳಲ್ಲಿ ಹೆಚ್ಚಿದ ಕರೊನಾ ಸೋಂಕು; ಎಚ್ಚರವಾಗಿರಲು ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts