More

    LIVE| ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿಗಾಗಿ ನೇರಪ್ರಸಾರ ವೀಕ್ಷಿಸಿ

    ನವದೆಹಲಿ: ಗುಜರಾತ್ ಹಾಗೂ ಹಿಮಾಚಲಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯ ಬಹುನಿರೀಕ್ಷಿತ ಫಲಿತಾಂಶ ಇಂದು ಹೊರ ಬೀಳಲಿದೆ. ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಹಾಗಾದರೆ ಈ ಬಾರಿ ಗುಜರಾತ್​ನಲ್ಲಿ ಮತ್ತೆ ಕಮಲ ಅರಳುತ್ತಾ? ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುತ್ತಾ? ಸಮೀಕ್ಷೆಗಳ ಲೆಕ್ಕಾಚಾರ ಉಲ್ಟಾ ಆಗುತ್ತಾ ಅಥವಾ ನಿಜವಾಗುತ್ತಾ? ಚುನಾವಣಾ ಕಣದಲ್ಲಿ ಯಾರಿಗೆ ಸಿಹಿ? ಯಾರಿಗೆ ಕಹಿ? ಮುಂತಾದ ಕ್ಷಣ ಕ್ಷಣದ ಮಾಹಿತಿಗಳನ್ನು ತಜ್ಞರ ಅಭಿಪ್ರಾಯದೊಂದಿಗೆ ಈ ಮೇಲಿನ ದಿಗ್ವಿಜಯ ನ್ಯೂಸ್​ ಯೂಟ್ಯೂಬ್​ ಲೈವ್​ನಲ್ಲಿ ವೀಕ್ಷಣೆ ಮಾಡಬಹುದು.

    ಡಿ.1 ಮತ್ತು 5ರಂದು ಗುಜರಾತ್​ನ 182 ವಿಧಾನಸಭಾ ಸೀಟುಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, 7ನೇ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿ ಬಿಜೆಪಿಯಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂಬ ಕುತೂಹಲ ಗರಿಗೆದರಿದೆ. ಗುಜರಾತ್​ನಲ್ಲಿ ಅಧಿಕಾರ ಹಿಡಿಯಲು 92 ಸ್ಥಾನಗಳ ಬಹುಮತ ಸಾಧಿಸಬೇಕಿದೆ.

    ಇನ್ನು ಹಿಮಾಚಲ ಪ್ರದೇಶದಲ್ಲಿ ನವಂಬರ್​ 12ರಂದು ಒಂದು ಹಂತದಲ್ಲಿ 68 ಸ್ಥಾನಗಳಿಗೆ ಮತದಾನ ನಡೆದಿದ್ದು, ಅಧಿಕಾರ ರಚನೆಗೆ 35 ಸ್ಥಾನಗಳಲ್ಲಿ ಗೆಲ್ಲುವ ಅವಶ್ಯಕತೆ ಇದೆ.

    ಗುಜರಾತ್​ನಲ್ಲಿ ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಈ ಬಾರಿ ಆಮ್ ಆದ್ಮಿ ಪಕ್ಷ ಚುನಾವಣಾ ಅಖಾಡ ಪ್ರವೇಶಿಸುವುದರೊಂದಿಗೆ ಗುಜರಾತ್ ತ್ರಿಕೋನ ಕದನಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ರಾಜ್ಯದಲ್ಲಿ ಅಂದಾಜು 30 ಚುನಾವಣಾ ರಾಲಿಗಳನ್ನು ನಡೆಸಿದ್ದರು. ನಾಯಕತ್ವದ ಕೊರತೆಯಿಂದ ಬಳಲಿದ ಕಾಂಗ್ರೆಸ್, ಈ ಬಾರಿ ಹಲವು ಸೀಟುಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ.

    ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ

    ಮೃತದೇಹದ ಒಳಗೆ ಜೀವಂತ ಹಾವು! ಶವಪರೀಕ್ಷೆ ವೇಳೆ ನಡೆದ ಭಯಾನಕ ಘಟನೆ ಇದು…

    ನವಲಗುಂದ ಲಾಡ್ಜ್​ನಲ್ಲಿ ಯುವಜೋಡಿ ಸಾವಿಗೆ ಶರಣು: ಅಣ್ಣ-ತಂಗಿ ಅಂತಾ ಗೊತ್ತಿದ್ರೂ ಪ್ರೀತಿಸಿ ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts