More

    ಮಾಸ್ಕ್​ ರಫ್ತು ಮೇಲಿನ ನಿರ್ಬಂಧ ತೆರವು; ಎಷ್ಟು ಬೇಕಿದ್ರೂ ಕಳುಹಿಸಬಹುದು..

    ನವದೆಹಲಿ: ದೇಶದಲ್ಲಿನ ಕರೊನಾ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಎನ್​-95 ಮಾಸ್ಕ್​ಗಳ ರಫ್ತು ಮೇಲೆ ನಿರ್ಬಂಧ ವಿಧಿಸಿದ್ದ ಕೇಂದ್ರ ಸರ್ಕಾರ ಈಗ ಅದನ್ನು ತೆರವುಗೊಳಿಸಿದೆ. ಡೈರೆಕ್ಟೊರೇಟ್​ ಜನರಲ್​ ಆಫ್​ ಫಾರಿನ್ ಟ್ರೇಡ್ ಈ ಕುರಿತು ಆದೇಶವನ್ನು ಹೊರಡಿಸಿದೆ.

    ದೇಶದೊಳಗಿನ ಕರೊನಾ ಪ್ರಕರಣ ನಿಯಂತ್ರಣದಲ್ಲಿಡುವ ಸಲುವಾಗಿ ಸರ್ಕಾರ ಮಾಸ್ಕ್​ಗಳ ರಫ್ತಿನ ಮೇಲೆ ಸಂಪೂರ್ಣ ನಿರ್ಬಂಧ ಹೇರಿತ್ತು. ಬಳಿಕ ಆಗಸ್ಟ್​ನಲ್ಲಿ ಎನ್​-95 ಮಾಸ್ಕ್​ಗಳನ್ನು ತಿಂಗಳಿಗೆ 50 ಲಕ್ಷಕ್ಕೆ ಮೀರದಂತೆ ರಫ್ತು ಮಾಡಬಹುದು ಎಂದು ಸರ್ಕಾರ ಹೇಳಿತ್ತು.

    ಇದೀಗ ಎನ್​-95 ಮಾಸ್ಕ್​ಗಳ ರಫ್ತು ಮೇಲೆ ಇದ್ದ ನಿರ್ಬಂಧವನ್ನು ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಿದೆ. ಮಾತ್ರವಲ್ಲ ಎನ್​-95 ಸೇರಿ ಯಾವುದೇ ಥರದ ಮಾಸ್ಕ್​ಗಳನ್ನು ಎಷ್ಟು ಬೇಕಾದರೂ ರಫ್ತು ಮಾಡಬಹುದು ಎಂಬುದಾಗಿ ಸೂಚಿಸಿರುವ ಸರ್ಕಾರ, ದೇಶದಲ್ಲಿ ಈಗ ಸಾಕಷ್ಟು ಪ್ರಮಾಣದ ಮಾಸ್ಕ್​ಗಳು ಉತ್ಪಾದನೆ ಆಗುತ್ತಿವೆ ಎಂದು ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts