More

    ಶಿಶುಪಾಲನಾ ಕೇಂದ್ರಗಳನ್ನು ಮರು ಆರಂಭಿಸಿ: ಶಾಸಕ ಚನ್ನಬಸಪ್ಪ

    ಶಿವಮೊಗ್ಗ: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿತ್ತೂರು ರಾಣಿ ಚನ್ನಮ್ಮ ಶಿಶುಪಾಲನಾ ಕೇಂದ್ರಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಬಡ ಕಾರ್ಮಿಕರ ಮಕ್ಕಳಿಗೆ ದ್ರೋಹವೆಸಗಿದೆ. ತಕ್ಷಣವೇ ಆದೇಶ ಹಿಂಪಡೆದು ಶಿಶುಪಾಲನಾ ಕೇಂದ್ರಗಳನ್ನು ಮರು ಆರಂಭಿಸುವಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.

    ಹಿಂದಿನ ಬಿಜೆಪಿ ಸರ್ಕಾರ ರಾಜ್ಯಾದ್ಯಂತ 137 ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಿತ್ತು. ಆದರೆ ಇಂದಿನ ಸರ್ಕಾರ ಯಾವುದೇ ಸರ್ವೇ ನಡೆಸದೇ ಏಕಾಏಕಿ ರದ್ದು ಮಾಡಿದೆ. ಇದರಿಂದ ಸಾವಿರಾರು ಮಕ್ಕಳಿಗೆ ಅನಾನುಕೂಲವಾಗಿದೆ. ಬಡ ಮಕ್ಕಳಿಗೆ ಊಟ ನೀಡುವುದಕ್ಕೂ ಸರ್ಕಾರಕ್ಕೆ ದಾರಿದ್ರೃ ಬಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ಕಾರ್ಮಿಕರು ಬೋಗಸ್ ಕಾರ್ಡ್‌ಗಳನ್ನು ಪಡೆದಿದ್ದಾರೆಂಬ ನೆಪ ಹೇಳಿಕೊಂಡು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಕ್ಕಳಿಗೆ ದ್ರೋಹ ಮಾಡುತ್ತಿದ್ದಾರೆ. ಸರ್ಕಾರ ಕೇಂದ್ರ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ ಅದರ ಪೀಠೋಪಕರಣಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸುವಂತೆ ಆದೇಶಿಸಿದೆ. ನ.30ರವರೆಗೆ ಕಾಲಾವಕಾಶ ಇದ್ದರೂ ಕಳೆದೆರಡು ತಿಂಗಳಿಂದ ಶಿಶುಪಾಲನಾ ಕೇಂದ್ರಗಳಲ್ಲಿ ಊಟ ಸ್ಥಗಿತಗೊಳಿಸಲಾಗಿತ್ತು. ಬದಲಿ ವ್ಯವಸ್ಥೆ ಮಾಡದೆಯೇ ಅರ್ಧ ವರ್ಷ ಪೂರ್ಣಗೊಳಿಸಿರುವ ಮಕ್ಕಳನ್ನು ಸರ್ಕಾರ ಬೀದಿಗೆ ತಳ್ಳಿದೆ ಎಂದು ದೂರಿದರು.
    ಬೋಗಸ್ ಕಾರ್ಡ್‌ಗಳನ್ನು ಮಾಡಿಕೊಟ್ಟಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೇ? ಆದರೆ ಅದನ್ನು ಬಿಟ್ಟು ಬಡ ಕಾರ್ಮಿಕರ ಮಕ್ಕಳ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಸರ್ಕಾರದ ನಿರ್ಧಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡಲಾಗಿದೆ. ಸರ್ಕಾರ ಬೇಜಾವಾಬ್ದಾರಿ ಪರಮಾವಧಿಗೆ ತಲುಪಿದೆ. ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದರೆ ಭ್ರಷ್ಟಾಚಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಬಡಪಾಯಿಗಳನ್ನು ಬೀದಿಗೆ ತಳ್ಳುವುದು ನ್ಯಾಯವಲ್ಲ ಎಂದರು.
    ಪ್ರಮುಖರಾದ ಎಸ್.ಜ್ಞಾನೇಶ್ವರ, ಎನ್.ಪಿ.ಜಗದೀಶ್, ಎಸ್.ಜಿ.ಬಾಲು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts