More

    ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮರೆತ ಆರೋಗ್ಯ ಇಲಾಖೆ..ಕೆಮ್ಮು, ಗಂಟಲು ನೋವು, ಜ್ವರಕ್ಕೆ ಜನ ಹೈರಾಣ..!

    ಬೆಂಗಳೂರು: ರಾಜ್ಯದಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಿದೆ. ಚಳಿ ಕಡಿಮೆಯಾಗುತ್ತಿದ್ದು, ಬಿಸಿಲಿನ ಝಳ ಏರುತ್ತಿದೆ. ಈ ನಡುವೆ ನೆಗಡಿ, ವೈರಲ್​ ಫೀವರ್​ನಂಥ ಸೋಂಕು ರೋಗಗಳು ಶರವೇಗದಲ್ಲಿ ಹರಡುತ್ತಿದ್ದು, ಜನರನ್ನು ಹೈರಾಣಾಗಿಸುತ್ತಿದೆ.

    ಸರ್ಕಾರಿ, ಖಾಸಗಿ, ಕ್ಲಿನಿಕ್​ ಎನ್ನದೆ ಎಲ್ಲ ಆಷ್ಪತ್ರೆಗಳ ಎದುರು ಜನ ಉಸಿರಾಟ ತೊಂದರೆ, ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆ, ಜ್ವರ, ತಲೆನೋವು, ಮೈಕೈನೋವಿನಂತಹ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ವರದಿಯಾಗಿದೆ.

    ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಉಸಿರಾಟದ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ವಿಕ್ಟೋರಿಯಾ, ಬೌರಿಂಗ್​, ಕೆ.ಸಿ.ಜನರಲ್​ ಸೇರಿದಂತೆ ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಗುತ್ತಿರುವುದು ಕಂಡುಬರುತ್ತಿದೆ.

    ಇದನ್ನೂ ಓದಿ: ಮಾರ್ಚ್3ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

    ಇನ್ನು ಉಸಿರಾಟದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಆರೋಗ್ಯ ಇಲಾಖೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳಲ್ಲಿ ದೀರ್ಘಕಾಲದ ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆಗಳು ಕಂಡು ಬಂದಿವೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಈ ಸಮಸ್ಯೆಗಳು ಅಧಿಕವಾಗುತ್ತಿವೆ. ಮಕ್ಕಳು ಪದೇ ಪದೇ ಶೀತ, ಜ್ವರದಿಂದ ಬಳಲುತ್ತಿದ್ದರೆ.

    ಸಾಮಾನ್ಯವಾಗಿ ನಿಮೋನಿಯಾ, ಎಚ್‌1ಎನ್‌1, ಬ್ಯಾಕ್ಟೀರಿಯಾ ಸೋಂಕು ಮತ್ತು ಕರೋನಾ ನಿದರ್ಶನಗಳ ಜೊತೆಗೆ ವಿಶಿಷ್ಟವಾದ ಜ್ವರ ಪ್ರಕರಣಗಳು ಕಂಡು ಬಂದಿವೆ. ವೃದ್ಧರು, ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳು ಏರಿಕೆಯಾಗುತ್ತಿವೆ. ಆದರೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಶೀತ, ಜ್ವರಕ್ಕೆ ನೀಡುವ ಔಷಧಿಗಳನ್ನು ಕೊಟ್ಟು ಕಳೂಹಿಸುತ್ತಿದ್ದಾರೆ.

    ಜ್ವರದ ರೋಗಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಉಸಿರಾಟದ ಸೋಂಕಿನ ಸಮಸ್ಯೆಗಳು ನವೆಂಬರ್‌ ಮಧ್ಯದಿಂದ ಫೆಬ್ರವರಿ ಅಂತ್ಯದವರಗೆ ಇರುತ್ತವೆ. ಮಾರ್ಚ್​ ನಂತರ ಶೀತ ಸಂಬಂಧಿ ಸೋಂಕುಗಳು ದೂರವಾಗುತ್ತವೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

    ಕೆಲವರು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಸುಮಾರು 10ರಲ್ಲಿ ಒಬ್ಬರು ಉಸಿರಾಟದ ಸಮಸ್ಯೆಯಿಂದ ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಜನವರಿಯಿಂದ ಈ ರೀತಿಯ ಸೋಂಕಿನ ಪ್ರಕರಣಗಳು ಶೇಕಡಾ 20 ರಷ್ಟು ಹೆಚ್ಚಳವಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘

    ಕರೋನಾ ಬಂದ ನಂತರ ಜನರು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸುಡು ಬಿಸಿಲು ಜನರನ್ನು ಹೈರಾಣವಾಗಿಸುತ್ತಿದೆ. ಇದರ ಜೊತೆಗೆ ಇದೀಗ ಉಸಿರಾಟದ ಸೋಂಕು ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಆರೋಗ್ಯ ಇಲಾಖೆ ಗಾಢ ನಿದ್ರೆಯಿಂದ ಎಚ್ಚೆತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೂಳ್ಳಬೇಕಿದೆ.

    ಉಫ್…ಸಮಂತಾ ಲೇಟೆಸ್ಟ್ ಲುಕ್ ನೋಡಿ ಅಭಿಮಾನಿಗಳ ಹಾರ್ಟ್​ಬೀಟ್​ ಜಾಸ್ತಿ ಆಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts