More

    ತಂದೆ, ತಾಯಿ, ಗುರುಗಳನ್ನು ಗೌರವದಿಂದ ಕಾಣಿರಿ

    ಹಾವೇರಿ: ನಾಲ್ಕು ಗೋಡೆಗಳ ಮಧ್ಯ ಬದುಕು ಸಾಗಿಸುತ್ತಿದ್ದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಸಿ. ಪೀರಜಾದೆ ಹೇಳಿದರು.

    ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಲಿಂಗತ್ವ ಸಮಾನತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಗಂಡು-ಹೆಣ್ಣು ಎಂಬ ಭೇದ-ಭಾವವನ್ನು ಬುಡಸಮೇತ ಕಿತ್ತುಹಾಕಿದಾಗ ಮಾತ್ರ ಸಮಾಜದ ವೃದ್ಧಿ ಮತ್ತಷ್ಟು ಉತ್ತುಂಗಕ್ಕೇರಲು ಸಾಧ್ಯ. ವಿದ್ಯಾರ್ಥಿಗಳು ತಂದೆ-ತಾಯಿ, ಗುರು ಹಾಗೂ ಸಮಾಜವನ್ನು ಗೌರವದಿಂದ ಕಾಣಬೇಕು. ಈ ಮೂರು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಬದುಕು ಸಾರ್ಥಕವಾಗುತ್ತದೆ. ನಿರಂತರ ಶ್ರಮದಿಂದ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯ ಎಂದರು.

    ಧಾರವಾಡದ ಮಹಿಳಾ ಸಮಖ್ಯಾ ಕರ್ನಾಟಕದ ಜಿಲ್ಲಾ ಸಂಯೋಜಕಿ ಆರತಿ ಸಬರದ ಮಾತನಾಡಿ, ಶಿಕ್ಷಣದ ಮೂಲಕ ಮಹಿಳಾ ಸಮಾನತೆ, ಸಶಕ್ತತೆ ಸಾಧಿಸುವುದರ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ಲಿಂಗ ಸಮಾನತೆ ಕಾಪಾಡುವುದು ಸಮಖ್ಯಾ ಕರ್ನಾಟಕದ ಮುಖ್ಯ ಉದ್ದೇಶವಾಗಿದೆ ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸುನಿತಾ ಕೆ.ಎಂ. ಮಾತನಾಡಿ, ಯುವ ಶಕ್ತಿ ಹರಿಯುವ ನೀರು ಇದ್ದಂತೆ. ನಿಮ್ಮಲ್ಲಿರುವ ಧನಾತ್ಮಕ ಶಕ್ತಿಯನ್ನು ಹರಿಬಿಟ್ಟಾಗ ಮಾತ್ರ ದೇಶದ ಉದ್ಧಾರಕ್ಕೆ ಸಹಕಾರವಾಗುತ್ತದೆ. ಹೆಣ್ಣು-ಗಂಡು ಪ್ರಕೃತಿಯ ಎರಡು ಕಣ್ಣುಗಳಿದ್ದಂತೆ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು, ಅಕ್ಕ, ತಂಗಿ, ತಾಯಿಯಂತೆ ಭಾವಿಸಬೇಕು ಎಂದರು.

    ಮಹಿಳಾ ಯೋಜನೆಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ತೇಜಸ್ವಿನಿ ಕೊಂಡಿ ಉಪನ್ಯಾಸ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾರ್ಜುನ, ಪ್ರಾಚಾರ್ಯ ಐ.ಡಿ. ಕೊರಗರ, ರೇಣುಕಾ ತ್ರಿಪಾಠಿ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts