More

    ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಬಳಿ ನಿಯೋಗ ಕರೆದೊಯ್ಯಲು ಸಿದ್ಧ

    ಚಿತ್ರದುರ್ಗ: ಕುಂದುಕೊರತೆ,ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ,ಇಂಧನ ಸಚಿವರ ಬಳಿ ನಿಯೋಗ ಕರೆದೊಯ್ಯಲು ಸಿದ್ಧವೆಂದು ಹಿರಿ ಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಿದ್ಯುತ್ ಗುತ್ತಿಗೆದಾರರಿಗೆ ಭರವಸೆ ನೀಡಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸ ಮಿತಿ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಎಂದರೆ ಸ್ಥಿತಿವಂತರೆನ್ನುವ ಭಾವನೆ ಎಲ್ಲರಲ್ಲ್ಲಿ ಇರುವುದು ಸಹಜ. ತಮ್ಮ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಅವಕಾಶವಿದ್ದು, ಅಗತ್ಯಬಿದ್ದರೆ ಸಿಎಂ,ಸಚಿವರ ಬಳಿ ನಿಯೋಗ ಹೋಗೋಣವೆಂದರು.

    ರಾಜ್ಯಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್ ಮಾತನಾಡಿ,ರಾಜ್ಯದಲ್ಲಿ ಕಳೆದ ಏಳು ವರ್ಷಗಳಿಂದ ಗುತ್ತಿಗೆದಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಐದು ಲಕ್ಷ ರೂ.ಮೊತ್ತ ವೆಚ್ಚದ ಗುತ್ತಿಗೆಯನ್ನು ಸ್ಥಳೀಯರಿಗೆ ಕೊಡ ಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆದರೆ ಸರ್ಕಾರದ ಆದೇಶಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ಬೇಸರ ವ್ಯಕ್ತ ಪಡಿಸಿದರು.

    ಜ.21ರಿಂದ 2 ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಶತಮಾನೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು ಎಂದರು.

    ಸಂಘದ ಜಿಲ್ಲಾಧ್ಯಕ್ಷ ಜಯರಾಮಪ್ಪ,ಬೆಸ್ಕಾಂ ಮುಖ್ಯಇಂಜಿನಿಯರ್ ಗೋವಿಂದಪ್ಪ,ಇಇ ಜಯಣ್ಣ,ಇಂಜಿನಿಯರ್‌ಗಳಾದ ರಮೇಶ್, ನಿರಂ ಜನ್,ಶ್ಯಾಂಸುಂದರ್, ಎಚ್.ವಿ.ಚಂದ್ರಬಾಬು,ಅನ್ವರ್‌ಮಿಯ,ಶಿವಾನಂದ್,ಹರೀಶ್‌ಪಾಟೀಲ್,ಮೆಹಬೂಬ್‌ಭಾಷ ಮತ್ತಿತರ ಸಂಘದ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts