More

    ಜಡ್ಜ್ ಸ್ಥಾನಕ್ಕೆ ರಾಜೀನಾಮೆ; ಜೆಡಿಎಸ್​ ಸೇರ್ಪಡೆಯೊಂದಿಗೆ ರಾಜಕೀಯಕ್ಕೆ ಎಂಟ್ರಿ

    ಗದಗ: ರಾಜ್ಯದಲ್ಲಿ ವಿಧಾಸಭಾ ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ಹೊಸ ಹೊಸ ಅಭ್ಯರ್ಥಿಗಳು ವಿವಿಧ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅದರಲ್ಲೂ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಪ್ರವೇಶಿಸುತ್ತಿರುವವರ ಸಂಖ್ಯೆ ಈ ಬಾರಿ ಹೆಚ್ಚಿದೆ. ಈಗಾಗಲೇ ಕೆಲ ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ. ಇದೀಗ ನ್ಯಾಯಾಧೀಶರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ರಾಜೀಯಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ.

    ಗದಗ ನಗರದ ಜೆಎಂಎಫಸಿ ನ್ಯಾಯಾಲಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿದ್ದ ಸುಭಾಷಚಂದ್ರ ರಾಠೋಡ ಹುದ್ದೆಗೆ ರಾಜೀನಾಮೆ ನೀಡಿ, ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಜನವರಿ 18 ರಂದು ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿದ್ದ ರಾಠೋಡ, ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ.

    ಜೆಡಿಎಸ್ ಪಕ್ಷದಿಂದ ಚುನಾವಣೆ ಸ್ಪರ್ಧೆ ಮಾಡಲಿರುವ ಸುಭಾಷ್ ಚಂದ್ರ ರಾಠೋಡ ಈಗಾಗಲೇ ಮಾಜಿ ಸಿಎಂ‌ ಕುಮಾರಸ್ವಾಮಿ ಜೊತೆಗೆ ಟಿಕೆಟ್ ಕುರಿತು ಚರ್ಚೆ ನಡೆಸಿದ್ದಾರೆ. ಚಿತ್ತಾಪುರ ಕ್ಷೇತ್ರದ ಜಿಡಿಎಸ್ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆ ಎದುರಿಸುವುದು ಬಹುತೇಕ ಖಚಿತವಾಗಿದ ಎನ್ನಲಾಗಿದೆ.

    ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕು ಗೇವಾಡಿ ಗ್ರಾಮದವರಾದ ಸುಭಾಷ ಚಂದ್ರ ರಾಠೋಡ, 2010ರಲ್ಲಿ ವಕೀಲ ವೃತ್ತಿ ಆರಂಬಿಸಿ, 2016 ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಕಲಬುರಗಿ, ಚಿತ್ತಾಪುರ ಸೇವೆ ಸಲ್ಲಿಸಿ, 2022 ರಿಂದ‌ 2023 ವವರಿಗೆ ಗದಗದಲ್ಲಿ ಸೇವೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts