ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ ಆಗಿ ಮೈಕೆಲ್ ಪತ್ರಾ ನೇಮಕಗೊಂಡಿದ್ದಾರೆ.
ವಿರಲ್ ಆಚಾರ್ಯ ಅವರಿಂದ ತೆರವಾಗಿದ್ದ ಡೆಪ್ಯೂಟಿ ಗವರ್ನರ್ ಸ್ಥಾನಕ್ಕೆ ಪತ್ರಾ ಅವರನ್ನು ನೇಮಕ ಮಾಡಲಾಗಿದೆ. ಇವರ ಅವಧಿ ಮೂರು ವರ್ಷಗಳಾಗಿದೆ ಎಂದು ಕ್ಯಾಬಿನೆಟ್ ನೇಮಕಾತಿ ಸಮಿತಿ ತಿಳಿಸಿದೆ.
ಆರ್ಬಿಐ ಡೆಪ್ಯೂಟಿ ಗವರ್ನರ್ ಹುದ್ದೆಗೆ ವಿರಲ್ ಆಚಾರ್ಯ ಅವರು ರಾಜೀನಾಮೆ ನೀಡಿ 6 ತಿಂಗಳು ಕಳೆದಿದ್ದವು. ಮೈಕೆಲ್ ಪತ್ರಾ ಅವರು ಅಪೆಕ್ಸ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಪತ್ರಾ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನಾಲ್ಕನೆ ಡೆಪ್ಯುಟಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಹಣಕಾಸು ನೀತಿಯನ್ನು ನಿರ್ವಹಿಸಲಿದ್ದಾರೆ. ಅಲ್ಲದೆ ಬ್ಯಾಂಕ್ಗಳ ಬಡ್ಡಿ ದರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಎಲ್ಲ ಅಧಿಕಾರವನ್ನು ಹೊಂದಿದ್ದಾರೆ.
ಡೆಪ್ಯುಟಿ ಗವರ್ನರ್ ಹುದ್ದೆ ಸಾಂಪ್ರದಾಯಿಕವಾಗಿ ಕೇಂದ್ರೀಯ ಬ್ಯಾಂಕಿನ ಹೊರಗಿನ ಅರ್ಥಶಾಸ್ತ್ರಜ್ಞರಿಗೆ ದೊರೆತಿದೆ. ಉರ್ಜಿತ್ ಪಟೇಲ್ ಕೂಡ ಡೆಪ್ಯುಟಿ ಗವರ್ನರ್ ಹುದ್ದೆಯನ್ನು ನಿರ್ವಹಿಸಿದ್ದರು. (ಏಜೆನ್ಸೀಸ್)