More

    ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಅಗತ್ಯ

    ಶಿಗ್ಗಾಂವಿ: ಪಂಚಮಸಾಲಿ ಸಮಾಜದವರು ಸರ್ವರ ಏಳಿಗೆಗೆ ಶ್ರಮಸಿದವರು. ನಮ್ಮ ಸಮಾಜದಲ್ಲಿ ಕೂಡ ಕಡು ಬಡವರಿದ್ದಾರೆ. ಮುಂದಿನ ಮಕ್ಕಳ ಭವಿಷ್ಯಕ್ಕೆ ನಮ್ಮ ಸಮಾಜವನ್ನು 2ಎಗೆ ಸೇರಿಸಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಸಂತೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಂದೇಶ ಜಾಥಾ ಕಾರ್ಯಕ್ರಮ ಹಾಗೂ ಗಂಗಿಬಾವಿ ಕ್ರಾಸ್​ನಲ್ಲಿ ಅಕ್ಷರಗೌಡ ಅರಟಾಳ ರುದ್ರಗೌಡರ ಹೆಸರಿನ ಮಹಾದ್ವಾರ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಮೀಸಲಾತಿಗಾಗಿ ಸುಮಾರು 26 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೂ ಸರ್ಕಾರ 2ಎ ಮೀಸಲಾತಿ ಕಲ್ಪಿಸಿಲ್ಲ. ಮೀಸಲಾತಿಗಾಗಿ ಸುಮಾರು 712 ಕಿ.ಮೀ. ಪಾದಯಾತ್ರೆ ಕೈಗೊಂಡು 10 ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದೇವೆ. ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದವರೇ ನಿರ್ಣಾಯಕರಾಗಿದ್ದಾರೆ. 2ಎ ಮೀಸಲಾತಿ ನೀಡುವವರೆಗೆ ಧರಣಿ ನಿಲ್ಲಿಸುವುದಿಲ್ಲ ಎಂದರು.

    ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಿವಾನಂದ ಬಾಗೂರ, ಎಚ್.ಎಸ್. ಶಿವಶಂಕರ, ಬಿ.ಎಫ್. ಪಾಟೀಲ, ಎಂ.ಎಸ್. ರುದ್ರಗೌಡ, ನಿಂಗಪ್ಪ ಚಳಗೇರಿ, ಶ್ರೀಕಾಂತ ದುಂಡಿಗೌಡ್ರ, ಶ್ರೀಕಾಂತ ಪೂಜಾರ, ಎಸ್.ಕೆ. ಅಕ್ಕಿ. ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ರಾಜೇಶ್ವರಿ ಬುಸೆಟ್ಟಿ, ಎಸ್.ವಿ. ಪಾಟೀಲ, ವಸಂತ ಬಾಗೂರ, ಟಾಕನಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts