More

  ಶೀಘ್ರ ಕಾಂಗ್ರೆಸ್ ಸೇರುವೆ

  ಕುಶಾಲನಗರ: ವರಿಷ್ಠರ ತಟಸ್ಥ ಮನೋಭಾವದಿಂದ ಜಿಲ್ಲೆಯಲ್ಲಿ ಜೆಡಿಎಸ್ ನಾವಿಕನಿಲ್ಲದ ದೋಣಿಯಂತಾಗಿದೆ. ಈ ಹಿನ್ನೆಲೆಯಲ್ಲಿ ಮಾತೃ ಪಕ್ಷ ಕಾಂಗ್ರೆಸ್ ಸೇರುವುದಾಗಿ ವಿಧಾನಸಭೆ ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದರು.


  ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹೆಚ್ಚಿನ ಶ್ರಮವಹಿಸಲಾಗಿತ್ತು. ಆದರೆ, ರಾಜ್ಯ ನಾಯಕರಿಂದ ಸೂಕ್ತ ಸ್ಪಂದನೆ, ಸಹಕಾರ ದೊರೆಯದ ಕಾರಣ ಕಳೆದ ಚುನಾವಣೆಯಲ್ಲಿ ಹಿನ್ನಡೆ ಉಂಟಾಯಿತು. ಸಂಘಟನೆಗೆ ಪೂರಕವಾಗಿ ನಮಗೆ ಯಾವುದೇ ಬೆಂಬಲ ದೊರಕಲಿಲ್ಲ. ಈ ಹಿನ್ನೆಲೆಯಲ್ಲಿ ನಿಂತ ನೀರಾಗದೆ ಒಂದು ದಾರಿ ಹಿಡಿಯುವ ಅನಿವಾರ್ಯ ಎದುರಾಗಿದೆ. ಹಿತೈಷಿಗಳು, ಬೆಂಬಲಿಗರ ಇಚ್ಛೆಯಂತೆ ಜಾತ್ಯತೀತ ನಿಲುವು ಹೊಂದಿರುವ ಕಾರಣ ಮತ್ತೆ ಕಾಂಗ್ರೆಸ್ ಸೇರುವ ಚಿಂತನೆಯಲ್ಲಿದ್ದೇನೆ. ಈ ಹಿಂದೆ ಕಾಂಗ್ರೆಸ್ ಮುಖಂಡರ ಜತೆಗಿನ ಒಡನಾಟ, ವಿಶ್ವಾಸ ಈಗಲೂ ಮುಂದುವರಿದಿದ್ದು, ಶೀಘ್ರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುವುದಾಗಿ ತಿಳಿಸಿದರು.


  ಬೆಂಬಲಿಗರಾದ ಅಜ್ಜಳ್ಳಿ ರವಿ, ಸರ್ಕಲ್ ಮಂಜು, ಕಿಶೋರ್, ತ್ರಿನೇಶ್, ಮಹದೇವ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts