More

    ಕೃಷಿ ಪ್ರಗತಿಗೆ ಸಂಶೋಧನಾ ಸಂಸ್ಥೆಗಳೇ ಕಾರಣ : ಶಾಸಕ ಸಿದ್ದು ಸವದಿ ಅಭಿಮತ

    ಮಹಾಲಿಂಗಪುರ : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 30 ಕೋಟಿ ಜನರಿಗೆ ಸಾಲುವಷ್ಟು ಆಹಾರ ಉತ್ಪಾದನೆಯಾಗದ್ದರಿಂದ ಅಮೆರಿಕದ ಗೋಧಿ ಅವಲಂಬಿಸಿದ್ದೇವು. ಆದರೀಗ 140 ಕೋಟಿ ಜನರಿಗೆ ಸಾಕಾಗಿ ಉಳಿದಿದ್ದನ್ನು ಅಂದಾಜು 10 ದೇಶಗಳಿಗೆ ಆಹಾರ ಧಾನ್ಯ ನೀಡುವ ಶಕ್ತಿ ಬಂದಿದೆ. ಇದಕ್ಕೆಲ್ಲ ಇಂತಹ ಕೃಷಿ ಸಂಶೋಧನಾ ಸಂಸ್ಥೆಗಳೇ ಕಾರಣ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಸಮೀಪದ ಸಮೀರವಾಡಿಯ ಕೆ.ಜೆ. ಸೋಮೈಯಾ ಕೃಷಿ ಸಂಶೋಧನಾ ಸಂಸ್ಥೆಯ ಆಡಳಿತ ಕಚೇರಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಕೃಷಿ ಸಂಶೋಧನೆಯಿಂದ ರೈತರ ಹಾಗೂ ದೇಶದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡುತ್ತಿರುವ ಕೆ.ಜೆ.ಸೋಮೈಯಾ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮೊದಲು ಎಕರೆಗೆ 30 ಟನ್ ಕಬ್ಬು ಬೆಳೆಯುತ್ತಿದ್ದ ರೈತರು ಕೃಷಿ ಸಂಶೋಧನೆ ಫಲವಾಗಿ ಇಂದು ಎಕರೆಗೆ 100 ಟನ್‌ಗಿಂತಲೂ ಅಧಿಕ ಕಬ್ಬು ಬೆಳೆಯುತ್ತಿದ್ದಾರೆ. ಈ ಭೂಮಿ ಕಾಮದೇನು ಕಲ್ಪವೃಕ್ಷ ಇದ್ದ ಹಾಗೆ. ಬೆವರು ಹರಿಸಿ ದುಡಿದರೆ ಭೂತಾಯಿ ಏನೆಲ್ಲ ನೀಡುತ್ತಾಳೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಗೋದಾವರಿ ಬಯೋರಿಫೈನರೀಜ್‌ನ ಸಿಎಂಡಿ ಸಮೀರ್ ಸೋಮೈಯಾ ಮಾತನಾಡಿ, ಕೇಂದ್ರ ಸರ್ಕಾರ ಎಥಿನಾಲ್ ಉತ್ಪಾದನೆಗೆ ಹೆಚ್ಚು ಮಹತ್ವ ನೀಡಿದ್ದು, ಉತ್ತಮ ಪರಿಸರಕ್ಕಾಗಿ ಮುಂದಿನ ದಿನಗಳಲ್ಲಿ ಸಕ್ಕರೆಗಿಂತ ಎಥಿನಾಲ್ ಹೆಚ್ಚು ಉತ್ಪಾದಿಸಲಾಗುವುದು. ಈಗ ಪೆಟ್ರೋಲ್ ಪಂಪ್‌ಗಳು ಇರುವಂತೆ ಕೆಲವೇ ದಿನಗಳಲ್ಲಿ ಎಥಿನಾಲ್ ಪಂಪ್‌ಗಳು ಕಾರ್ಯಾರಂಭ ಮಾಡಲಿವೆ ಎಂದರು.

    ಮುಂಬೈನ ಸೋಮೈಯಾ ವಿದ್ಯಾವಿಹಾರ ವಿಶ್ವವಿದ್ಯಾಲಯ ಹಾಗೂ ಯುಎಸ್‌ಎ ಮೈಚಿಗನ್ ರಾಜ್ಯ ವಿಶ್ವವಿದ್ಯಾಲಯದ ಸಹಾಯಕ ಅಧ್ಯಾಪಕ ಲಾರ‌್ರಿ ವಾಕರ, ಉಪಕುಲಪತಿ ಪ್ರೊ.ವಿ.ಎನ್. ರಾಜಶೇಖರನ್ ಪಿಳೈ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದ್ರೇಶ, ಸೋಮೈಯಾ ಕೃಷಿ ಸಂಶೋಧನೆ ಸಂಸ್ಥೆ ನಿರ್ದೇಶಕ ಡಾ.ಎ.ಡಿ.ಕಡ್ಲಾಗ ಮಾತನಾಡಿದರು.

    ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ವೇದಿಕೆ ಮೇಲಿದ್ದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಗೋದಾವರಿ ಕಾರ್ಖಾನೆ ಮಜ್ದೂರ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ, ಕಾರ್ಖಾನೆಯ ನಿವೃತ್ತ ನಿರ್ದೇಶಕ ವಿ.ಸಿ. ಪಾಟೀಲ, ಡಾ.ಜೆ.ವಿ. ಗೌಡ, ವಿ.ಬಿ ಜೋಶಿ, ಎಸ್.ಎನ್. ಬಬಲೇಶ್ವರ ಇತರರಿದ್ದರು.

    ವಿಜಯಕುಮಾರ ಕಣವಿ ನಿರೂಪಿಸಿದರು. ಡಾ.ಆರತಿ ಯಾದವಾಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts