More

    ರೈಲು ಶೌಚಗೃಹದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ವೃದ್ಧೆ ರಕ್ಷಣೆ

    ಕಡೂರು: ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ರೈಲಿನ ಶೌಚಗೃಹದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ದೆಯನ್ನು ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಶೌಚಗೃಹದ ಬಾಗಿಲು ಮುರಿದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
    ಸಾಗರ ಮೂಲದ ಶ್ರೀನಿಧಿ ಮತ್ತು ಬಸವರಾಜ್ ವೃದ್ಧ ದಂಪತಿಗಳು ಮೈಸೂರಿನಿಂದ ಗುರುವಾರ ಬೆಳಗ್ಗೆ ಪ್ರಯಾಣ ಮೈಸೂರಿನಿಂದ ಸಾಗರಕ್ಕೆ ಹೊರಟಿದ್ದರು. ರೈಲು ಅರಸೀಕೆರೆ ನಿಲ್ದಾಣ ನಿರ್ಗಮಿಸುತ್ತಿದ್ದಂತೆ ಶೌಚಗೃಹಕ್ಕೆ ತೆರಳಿದ ವೃದ್ಧೆ ಶ್ರೀ ನಿಧಿ ಅವರು ಶೌಚಗೃಹದ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲ ಹೊತ್ತು ಕಳೆದರೂ ಪತ್ನಿ ಹೊರಗಡೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪತಿ ಬಸವರಾಜ್ ರೈಲ್ವೇ ಟಿಕೆಟ್ ತಪಾಸಣಾಧಿಕಾರಿ ಸಿ.ಎಸ್.ಭಾಸ್ಕರ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಟಿಕೆಟ್ ತಪಾಸಣಾ ಅಧಿಕಾರಿ ಶೌಚಗೃಹದ ಕೊಠಡಿ ಕೆಳಭಾಗದ ಪ್ಲೇ ವುಡ್ ಶೀಟ್ ಮುರಿದು ಹೊರತರುವ ಪ್ರಯತ್ನ ನಡೆಸಿ ರೈಲಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ.
    ರೈಲ್ವೆ ತಪಾಸಣಾಧಿಕಾಧಿ ಸಿ.ಎಸ್.ಭಾಸ್ಕರ್ ಅವರ ಸಮಯೋಚಿತ ನಡೆಗೆ ರೈಲ್ವೇ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದಂಪತಿಗಳ ಪುತ್ರನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿರುವ ಬಗ್ಗೆ ಮೈಸೂರು ರೈಲ್ವೆ ವಿಭಾಗಮತ್ತು ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿ ಘಟನೆಯನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts