More

    ಸಮುದಾಯ ಭವನ ನಿರ್ಮಾಣಕ್ಕೆ ಮನವಿ

    ಸರಗೂರು: ಸವಿತಾ ಸಮಾಜದವರಿಗೆ ಸಮುದಾಯ ಭವನ ಇಲ್ಲದೆ ಮದುವೆ, ಸಭೆ, ಸಮಾರಂಭಗಳ ನಡೆಸಲು ಪರದಾಡುವಂತಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸವಿತಾ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು ನಿವೇಶನ ಒದಗಿಸಿಕೊಡುವಂತೆ ಸಮುದಾಯದ ಪ್ರಮುಖರು ತಹಸೀಲ್ದಾರ್ ರುಕೀಯಾ ಬೇಗಂ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    ಸುಮಾರು 35 ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಮಾಜದ ವತಿಯಿಂದ ಮನವಿ ಸಲ್ಲಿಸಿಕೊಂಡು ಬರಲಾಗುತ್ತಿದೆ ಆದರೂ ಪ್ರಯೋಜನವಾಗಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಶಾಸಕರಾದ ನಂತರ ಸವಿತಾ ಸಮಾಜದ ಪ್ರಮುಖರು ಸಮುದಾಯ ಭವನ ನಿರ್ಮಿಸಲು ನಿವೇಶನ ಒದಗಿಸಿಕೊಡುವಂತೆ ಮನವಿ ಮಾಡಿದ್ದರು. ಸರ್ಕಾರಿ ಜಾಗವನ್ನು ಗುರುತಿಸಿ ಗಮನಕ್ಕೆ ತಂದಲ್ಲಿ ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ಅವರು ಹೇಳಿದ್ದರು. ಅದರಂತೆ ಸಮುದಾಯದ ಪ್ರಮುಖರು ಇತ್ತೀಚೆಗೆ ಸರ್ಕಾರಿ ಜಾಗವನ್ನು ಗುರುತಿಸಿ ತಹಸೀಲ್ದಾರ್‌ಗೆ ನಿವೇಶನ ಒದಗಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

    ಸವಿತಾ ಸಮಾಜಕ್ಕೆ ಸೇರಿದ 1500 ಕುಟುಂಬಗಳು ತಾಲೂಕಿನಲ್ಲಿ ನೆಲೆಸಿದ್ದು, ಯಾವುದೇ ಸಭೆ ಸಮಾರಂಭ, ವಿವಾಹ ಕಾರ್ಯಕ್ರಮಗಳನ್ನು ಖಾಸಗಿ ಅಥವ ದೇವಾಲಯ ಆವರಣದಲ್ಲಿ ಆಯೋಜಿಸಬೇಕಿದೆ. ಇನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ನಿವೇಶನ ರಹಿತರಿದ್ದು, ಸರ್ಕಾರದಿಂದ ನಿವೇಶನ ಒದಗಿಸಿಕೊಡುವಂತೆ ಸಮುದಾಯ ಮುಖಂಡರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts