ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿಗೆ ಅಶೋಕ ಚಕ್ರ ಪ್ರದಾನ

ನವದೆಹಲಿ: ಹಿಂದೊಮ್ಮೆ ಉಗ್ರವಾದದಲ್ಲಿ ನಂಬಿಕೆಯಿಟ್ಟು ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡಿದ್ದು, ಬಳಿಕ ಎಚ್ಚೆತ್ತುಕೊಂಡು ಉಗ್ರವಾದ ತೊರೆದು ದೇಶರಕ್ಷಣೆಗೆ ಮುಂದಾಗಿ ಹುತಾತ್ಮರಾದ ಲ್ಯಾನ್ಸ್​ ನಾಯಕ್​ ನಜೀರ್​ ಅಹ್ಮದ್​ ವಾನಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅಶೋಕ ಚಕ್ರ ಪದಕ ಪ್ರದಾನ ಮಾಡಿದರು. ವಾನಿ ಅವರ ಪತ್ನಿ ಮತ್ತು ತಾಯಿ ಪದಕವನ್ನು ಸ್ವೀಕರಿಸಿದರು.

ಕಾಶ್ಮೀರ ಕಣಿವೆಯಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಲ್ಯಾನ್ಸ್​ ನಾಯಕ್​ ನಜೀರ್​ ಅಹ್ಮದ್​ ಅವರು ಅವರು 6 ಉಗ್ರರರನ್ನು ಹತ್ಯೆ ಮಾಡಿ, ಹುತಾತ್ಮರಾಗಿದ್ದರು.

ಗಮನಸೆಳೆದ ಹಿರಿಯ ನಾಗರಿಕರ ಸ್ತಬ್ಧಚಿತ್ರ


ಹಿರಿಯ ನಾಗರಿಕರು: ರಾಷ್ಟ್ರದ ಪ್ರಗತಿಯ ವೇಗದ ಪ್ರಚೋದಕರು ಎಂಬ ಧ್ಯೇಯದ ಸ್ತಬ್ಧಚಿತ್ರ ರಾಜಪಥದಲ್ಲಿ ಪ್ರದರ್ಶನಗೊಂಡಿತು. ಇದು ಎಲ್ಲರ ಗಮನಸೆಳೆಯಿತು.

ನವದೆಹಲಿಯ ರಾಜಪಥದಲ್ಲಿನ ಗಣರಾಜ್ಯೋತ್ಸವ ಸಂಭ್ರಮದ ಮುಖ್ಯಾಂಶಗಳು

* ಈ ಬಾರಿಯ ಗಣರಾಜ್ಯೋತ್ಸವ ಮುಖ್ಯಅತಿಥಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ
* ಒಟ್ಟು 90 ನಿಮಿಷಗಳ ಕಾರ್ಯಕ್ರಮ
* ರಾಷ್ಟ್ರದ ವಿವಿಧ ರಾಜ್ಯಗಳ 58 ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಭಾಗಿ
* 22 ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ

* ಸೇನಾಪಡೆಗಳಿಂದ ಪಥಸಂಚಲನ ಆರಂಭ
* ಗೌರವವಂದನೆ ಸ್ವೀಕರಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ
* ಸ್ತಬ್ಧಚಿತ್ರಗಳ ಪ್ರದರ್ಶನ ಆರಂಭ
* ಭಾರತೀಯ ಸೇನಾಪಡೆಯ ಭೀಷ್ಮ ಟಿ-90 ಟ್ಯಾಂಕ್​ಗಳ ಪ್ರದರ್ಶನ
* 45 ಕ್ಯಾವಲರಿ ಪಡೆಯ ಕ್ಯಾಪ್ಟನ್​ ನವನೀತ್​ ಎರಿಕ್​ ಮುಂದಾಳತ್ವ