More

    ಧಾರ್ಮಿಕ ಕಾರ್ಯಕ್ರಮಗಳು ನಾಡಿನ ಸಂಸ್ಕೃತಿಯ ಪ್ರತೀಕ

    ಹುನಗುಂದ: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆ, ಜಾತ್ರೆ, ಸಮಾರಂಭಗಳು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಬಿಂಬಿಸುತ್ತವೆ ಎಂದು ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಹೇಳಿದರು.

    ತಾಲೂಕಿನ ಸಮೀಪದ ಬನ್ನಿಹಟ್ಟಿಯಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಇಟಗಿ ಶ್ರೀ ಭೀಮಾಂಬಿಕಾ ದೇವಿ ಪುರಾಣ ಪ್ರಾರಂಭೋತ್ಸವದಲ್ಲಿ ಭೀಮಾಶಂಕರದೇವಿ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಗ್ರಾಮದ ಬೇಡಿಕೆಗಳಾದ ಮುಸ್ಲಿಮರಿಗೊಂದು ಮಸೀದಿ ನಿರ್ಮಾಣ, ಮಹಿಳೆಯರಿಗೆ ಸಮುದಾಯ ಶೌಚಗೃಹಗಳು, ಸಿಸಿ ರಸ್ತೆ, ಮಂಟಪ ಕಾರ್ಯಾಲಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಶಾಸಕರು ಭರವಸೆ ಕೊಟ್ಟರು.

    ಕಮಿಟಿ ಚೇರ್ಮನ್ ಅಯ್ಯಪ್ಪಯ್ಯ ಸಾರಂಗಮಠ ಅಧ್ಯಕ್ಷತೆ ವಹಿಸಿದ್ದರು. ಹಿರೇಬಾದವಾಡಗಿಯ ಗ್ರಾಪಂ ಅಧ್ಯಕ್ಷ ನಾಗಪ್ಪ ಕಲಗೋಡಿ, ಗ್ರಾಪಂ ಸದಸ್ಯರಾದ ಬಸಮ್ಮ ಬಾದವಾಡಗಿ, ಮಲ್ಲಪ್ಪ ಗೊಣ್ಣಾರ, ಶರಣು ಬೆಲ್ಲದ, ಮುತ್ತಣ್ಣ ಕಲಗೋಡಿ, ಮಹಾಂತಪ್ಪ ಚುಣಗಿ, ಸುರೇಶ ಬಳ್ಳಾರಿ, ಸಂಗೀತಗಾರ ಚಂದ್ರು ಹಲಕಾವಟಗಿ, ತಬಲಾ ವಾದಕ ಯಮನಪ್ಪ ಭಜಂತ್ರಿ ಇತರರಿದ್ದರು.

    ಶರಣಪ್ಪ ಗುಡದಪ್ಪನವರ ನಿರೂಪಿಸಿದರು. ಶಿಕ್ಷಕ ಸಂಗು ಮಠ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts