More

    ಭತ್ತ ಬೆಳೆಗಾರರಿಗೆ ನರೇಗಾಗ ಪ್ರೋತ್ಸಾಹ

    ಶಿವಮೊಗ್ಗ: ಭತ್ತದ ಕೃಷಿಯನ್ನು ಉದ್ಯೋಗ ಖಾತ್ರಿ ಅಡಿ ಕ್ರಿಯಾಯೋಜನೆ ಮಾಡಲು ಸೇರಿಸಬೇಕು ಎಂದು ಸಾಗರ ತಾಲೂಕಿನ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಡಿಸಿ ಕಚೇರಿ ಮತ್ತು ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದು, ಸಾವಿರಾರು ಕುಟುಂಬ ಇದನ್ನು ಆಶ್ರಯಿಸಿದೆ. ಕೂಲಿ ಆಳುಗಳ ಕೊರತೆಯಿಂದ ರೈತರು ನಾಟಿಯಿಂದ ಕೊಯ್ಲು ಮಾಡುವವರೆಗೆ ವಿವಿಧ ಸಮಸ್ಯೆ ಅನುಭವಿಸುತ್ತಿದ್ದು, ಭತ್ತ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಮಾಡಿದ ಖರ್ಚಿಗಿಂತ ಕಡಿಮೆ ಆದಾಯ ಬರುತ್ತಿದ್ದು, ಭತ್ತ ಬೆಳೆಯುವುದರಿಂದ ವಿಮುಖರಾಗುತ್ತಿದ್ದಾರೆ ಎಂದು ದೂರಿದರು.
    ಭತ್ತದ ಗದ್ದೆಗಳಲ್ಲಿ ಈಗ ಅಡಕೆ ಸೇರಿ ವಾಣಿಜ್ಯ ಬೆಳೆ ಬೆಳೆಯಲು ರೈತರು ಮುಂದಾಗುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಅನ್ನಕ್ಕೂ ಹಾಹಾಕಾರ ಬಂದರೂ ಅಚ್ಚರಿ ಇಲ್ಲ. ಹಾಗಾಗಿ ಭತ್ತ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕಿದ್ದು, ನರೇಗಾ ಮೂಲಕ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
    ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನಲ್ಲೂರು, ಕಾರ್ಯದರ್ಶಿ ರಮೇಶ್ ಐಗಿನಬೈಲು, ಕೃಷ್ಣಪ್ಪ ಹುಳೇಗಾರ, ದೇವು, ಚನ್ನಪ್ಪ, ಇಕ್ಕೇರಿ ಪದ್ಮನಾಭ್, ನಾರಾಯಣಪ್ಪ, ರವೀಂದ್ರ, ಚನ್ನಶೆಟ್ಟಿ, ರಾಮಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts