More

    743 ರೈತರಿಂದ ಕೊಬ್ಬರಿ ಖರೀದಿ ನೋಂದಣಿ

    ಕಡೂರು: ಪಟ್ಟಣದ ಎಪಿಎಂಸಿ ಕಚೇರಿಯ ಆವರಣದಲ್ಲಿ ಮರು ಆರಂಭಗೊಂಡ ಕೊಬ್ಬರಿ ನೋಂದಣಿ ಪ್ರಕ್ರಿಯೆಗೆ ರೈತಾಪಿ ವರ್ಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ ಜನರು ಸಾಕಷ್ಟು ಸಂಖ್ಯೆಯಲ್ಲಿ ಕೇಂದ್ರದ ಬಳಿ ಜಮಾಯಿಸಿದ್ದರು. ಮೊದಲ ದಿನದಂದು 734 ರೈತರಿಂದ 9,375.05 ಕ್ವಿಂಟಾಲ್ ಕೊಬ್ಬರಿ ಖರೀದಿಯ ನೋಂದಣಿ ಕಾರ್ಯ ನಡೆಸಲಾಗಿದೆ.

    ಆರಂಭದಲ್ಲಿ ಪಂಚನಹಳ್ಳಿ ನೋಂದಣಿ ಕೇಂದ್ರದಲ್ಲಿ ಕೆಲ ಕಾಲ ಸರ್ವರ್ ಸಮಸ್ಯೆ ಉಂಟಾಯಿತು. ಬಳಿಕ ಸಾರಾಗವಾಗಿ ಸಂಜೆಯ ವರೆಗೂ ನೋಂದಣಿ ಕಾರ್ಯ ನೆರವೇರಿತು. ಬೆಳಗ್ಗೆ 8ರಿಂದ ಸಂಜೆಯ 6ರ ತನಕ ನೋಂದಣಿ ಕಾರ್ಯ ನಡೆಯಲಿದೆ. ಸೋಮವಾರದಂದು ಕಡೂರು ಕೇಂದ್ರದ ಎರಡು ಪಾಯಿಂಟ್‌ಗಳಲ್ಲಿ 423 ರೈತರಿಂದ 5,430 ಕ್ವಿಂಟಾಲ್ ಕೊಬ್ಬರಿ ನೋಂದಣಿಯಾದರೆ, ಬೀರೂರು ಎಪಿಎಂಸಿ ಕೇಂದ್ರದಲ್ಲಿ 206 ರೈತರಿಂದ 2,603.50 ಕ್ವಿಂಟಾಲ್ ಹಾಗೂ ಪಂಚನಹಳ್ಳಿ ಎಪಿಎಂಸಿ ಕೇಂದ್ರದಲ್ಲಿ 105 ರೈತರಿಂದ 1342ಕ್ವಿಂಟಾಲ್ ಕೊಬ್ಬರಿ ನೋಂದಣಿಯಾಗಿದೆ ಎಂದು ಖರೀದಿ ಕೇಂದ್ರದ ಅಧಿಕಾರಿ ಎ.ರಾಘವೇಂದ್ರ ‘ವಿಜಯವಾಣಿ’ಗೆ ತಿಳಿಸಿದರು.
    ಖರೀದಿ ಕೇಂದ್ರದ ಬಳಿ ನೋಂದಣಿಗೆ ಬಂದಂತಹ ರೈತರಿಗೆ ಕುಡಿಯುವ ನೀರು ಹಾಗೂ ನೆರಳಿಗಾಗಿ ಶಾಮಿಯಾನದ ವ್ಯವಸ್ಥೆಯನ್ನು ಖರೀದಿ ಕೇಂದ್ರದ ಸಿಬ್ಬಂದಿ ಕಲ್ಪಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts