More

    ಕಲ್ಲತ್ತಿಗಿರಿ ಸ್ವಚ್ಛತೆಗೆ ಗ್ರಾಪಂನಿಂದ ಸಿಬ್ಬಂದಿ ನೇಮಕ

    ಲಿಂಗದಹಳ್ಳಿ: ಕಲ್ಲತ್ತಿಗಿರಿಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಕ್ಷೇತ್ರದಲ್ಲಿ ತ್ಯಾಜ್ಯ ವಸ್ತುಗಳ ಉತ್ಪಾದನೆ ಹೆಚ್ಚಾಗುತ್ತಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ತಿಗಡ ಗ್ರಾಪಂನಿಂದ ಅಗತ್ಯ ಸಿಬ್ಬಂದಿ ನೇಮಿಸಿ ಪ್ರತಿದಿನ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್ ಹೇಳಿದರು.
    ತಿಗಡ ಗ್ರಾಪಂ ಆವರಣದಲ್ಲಿ ನಡೆದ 2024-25ನೇ ಸಾಲಿನ ಕಲ್ಲತ್ತಿಗಿರಿ ವಾಹನ ಪ್ರವೇಶ ಶುಲ್ಕ ವಸೂಲಾತಿ ಬಹಿರಂಗ ಹಾರಾಜು ಪ್ರಕ್ರಿಯೆಯಲ್ಲಿ ಮಾತನಾಡಿದ ಅವರು, ಕಲ್ಲತ್ತಿಗಿರಿಗೆ ಬರುವ ಪ್ರವಾಸಿಗರ ವಾಹನ ಶುಲ್ಕ ವಸೂಲಾತಿ ಹಕ್ಕು 15.65 ಲಕ್ಷ ರೂ.ಗೆ ಹರಾಜಾಗಿದೆ. ಗುತ್ತಿಗೆದಾರರು ಶುಲ್ಕ ವಸೂಲಾತಿ ಮಾಡುವ ಸಿಬ್ಬಂದಿಗೆ ಅಗತ್ಯ ಗುರುತಿನ ಚೀಟಿ ಹಾಗೂ ಸಮವಸ ನೀಡಬೇಕು. ಗ್ರಾಪಂ ನಿಗಪಡಿಸಿದ ದರವನ್ನು ವಸೂಲು ಮಾಡಿ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಬೇಕು. ಸರ್ಕಾರಿ ಇಲಾಖೆ ಅಧಿಕಾರಿಗಳು ಮತ್ತು ತಿಗಡ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಶುಲ್ಕ ವಿನಾಯಿತಿ ನೀಡಿ ಯಾವುದೇ ಘರ್ಷಣೆಗೆ ಆಸ್ಪದ ನೀಡದೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts