More

    ಸಾಲದ ಕಂತಿಗೆ ಮನೆಬಾಗಿಲಿಗೆ ಬಂದ ಏಜೆಂಟರು… ಮಾನ ಹೋಯಿತೆಂದು ಸಾವಿಗೆ ಶರಣಾದ ಪ್ಲಂಬರ್

    ಕೊಲ್ಕತ : 6,800 ರೂ.ಗಳ ಸಾಲದ ಕಂತು ಪಾವತಿಸದಿದ್ದಕ್ಕೆ ಏಜೆಂಟರು ಬಂದು ಮನೆಯ ಮುಂದೆ ಕುಳಿತ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ಪ್ಲಂಬರ್​ ಕೆಲಸ ಮಾಡುತ್ತಿದ್ದ 40 ವರ್ಷ ವಯಸ್ಸಿನ ಸಾಧನ್ ಸಿನ್ಹ, ಮೃತ ದುರ್ದೈವಿ.

    ಬಂಗಾಳದ ಮುರ್ಶಿದಾಬಾದ್​ ಜಿಲ್ಲೆಯ ಬಿಂದುಪರ ಗ್ರಾಮದ ನಿವಾಸಿ ಸಿನ್ಹ, ಪ್ಲಂಬಿಂಗ್ ಕೆಲಸದಿಂದ ತಿಂಗಳಿಗೆ 15,000 ದಿಂದ 20,000 ರೂಪಾಯಿ ಸಂಪಾದಿಸುತ್ತಿದ್ದರು. ಕೆಲಸಕ್ಕೆ ಅನುಕೂಲವಾಗಲಿ ಎಂದು ಜನವರಿಯಲ್ಲಿ ಖಾಸಗಿ ಹಣಕಾಸು ಕಂಪೆನಿಯಿಂದ 1 ಲಕ್ಷ ರೂಪಾಯಿ ಸಾಲ ಮಾಡಿ ದ್ವಿಚಕ್ರವಾಹನ ಖರೀದಿಸಿದ್ದರು. ಕರೊನಾ ಲಾಕ್ಡೌನಿನಿಂದಾಗಿ ಮೇ ಮತ್ತು ಜೂನ್​ ತಿಂಗಳ 3,400 ರೂ. ಮಾಸಿಕ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಮದ್ವೆಯಾದ ಮೂರೇ ವಾರಕ್ಕೆ ಪತ್ನಿ ನಾಪತ್ತೆ: ಮನೆಯಲ್ಲಿದ್ದ ಮೊಬೈಲ್​ನಲ್ಲಿ ಅಡಗಿತ್ತು ಹೆಂಡತಿಯ ರಹಸ್ಯ!

    ಜೂನ್ 22 ರಂದು ಬೆಳಿಗ್ಗೆ 9 ಗಂಟೆಗೆ ರಿಕವರಿ ಏಜೆಂಟರು ಮನೆಗೆ ಬಂದು ಬಾಕಿ ಹಣ ಕೇಳಿದರು. ಕೆಲವು ದಿನಗಳ ಸಮಯ ಕೊಟ್ಟರೆ ತೀರಿಸುವುದಾಗಿ ಹೇಳಿದರೂ ಕೇಳದೆ ಹಣ ಕೊಡುವವರೆಗೆ ಹೋಗುವುದಿಲ್ಲ ಎಂದು ಆಚೆಯೇ ಕೂತರು. ಈ ರೀತಿ ಸಾಲಗಾರರು ಮನೆಗೆ ಬಂದ ಬಗ್ಗೆ ಅವಮಾನಗೊಂಡ ಸಾಧನ್ ಸಿನ್ಹ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದು ಮೃತರ ಪತ್ನಿ ಮಮೋನಿ ಪೊಲೀಸರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)

    ಮುಂದಿನ ಚೀಫ್ ಮಿನಿಸ್ಟರ್​ ಅಂತ ಹೇಳ್ಬೇಡಿ ಎಂದು ಶಾಸಕರಿಗೆ ಮನವಿ ಮಾಡ್ತೀನಿ : ಸಿದ್ದರಾಮಯ್ಯ

    ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೋಗಿ : ಫಿಲಿಪೈನ್ಸ್​ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts